ವ್ಯಕ್ತಿ ನಾಪತ್ತೆ

KannadaprabhaNewsNetwork |  
Published : Jun 28, 2024, 12:54 AM IST
ನಾಪತ್ತೆಯಾದ ಯುವಕ ಕೆ.ಆರ್‌.ಶರತ್ | Kannada Prabha

ಸಾರಾಂಶ

ನರಸಿಂಹರಾಜಪುರ: ತಾಲೂಕಿನ ಅರಳಿಕೊಪ್ಪ ಗ್ರಾಮದ ಕುರ್ಕಬಳ್ಳಿಯ ಕೆ.ಆರ್‌.ಶರತ್ ( 33), ಕಳೆದ 10 ದಿನದಿಂದ ನಾಪತ್ತೆಯಾಗಿದ್ದಾನೆ ಎಂದು ಈತನ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ.

ನರಸಿಂಹರಾಜಪುರ: ತಾಲೂಕಿನ ಅರಳಿಕೊಪ್ಪ ಗ್ರಾಮದ ಕುರ್ಕಬಳ್ಳಿಯ ಕೆ.ಆರ್‌.ಶರತ್ ( 33), ಕಳೆದ 10 ದಿನದಿಂದ ನಾಪತ್ತೆಯಾಗಿದ್ದಾನೆ ಎಂದು ಈತನ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ.

ಅರಳಿಕೊಪ್ಪ ಗ್ರಾಮ ಕುರ್ಕಬಳ್ಳಿಯ ರಾಮಯ್ಯ ಎಂಬುವರ ಮಗ ಕೆ.ಆರ್‌.ಶರತ್‌ ಬೆಂಗಳೂರಿನಲ್ಲಿ ಅಡಿಗೆ ಕೆಲಸ ಮಾಡಿ ಕೊಂಡಿದ್ದು ಪತ್ನಿಯೊಂದಿಗೆ ವಾಸವಾಗಿದ್ದನು. ಜೂನ್ 15 ರಂದು ಬೆಂಗಳೂರಿನಿಂದ ಊರಿಗೆ ಬಂದು 2 ದಿನ ಇದ್ದು ಮತ್ತೆ ಜೂನ್‌ 17 ರಂದು ಸಂಜೆ 4 ಗಂಟೆಗೆ ಬೆಂಗಳೂರಿಗೆ ಎಂದು ಹೋಗಿದ್ದು ನಂತರ ನಾಪತ್ತೆಯಾಗಿದ್ದಾನೆ. ಆತನು ಬೆಂಗಳೂರಿಗೆ ತಲುಪಿಲ್ಲ. ಅವನ ಮೊಬೈಲ್ ಸ್ವಿಚ್ ಆಪ್ ಆಗಿದೆ ಮನೆಯವರು ಎಲ್ಲಾ ಸಂಬಂಧಿಕರ ಮನೆಯಲ್ಲೂ ಹುಡುಕಾಟ ನಡೆಸಿದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಕೆ.ಆರ್‌.ಶರತ್ ಅವರ ತಂದೆ ರಾಮಯ್ಯ ಪೊಲೀಸರಿಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

ನಾಪತ್ತೆಯಾದ ಕೆ.ಆರ್‌ ಶರತ್‌ 165 ಸೆ.ಮಿ.ಎತ್ತರವಿದ್ದು ಕುರುಚಲು ಗಡ್ಡ ಬಿಟ್ಟಿರುತ್ತಾನೆ. ಉದ್ದ ಮುಖ, ಸಾಮಾನ್ಯ ಮೈಕಟ್ಟು, ಹಸಿರುಬಣ್ಣದ ಟೀ ಶರ್ಟು, ಕಪ್ಪು ಬಣ್ಣದ ಪ್ಯಾಂಟು ಧರಿಸಿದ್ದಾನೆ. ಕನ್ನಡ ಮಾತನಾಡುತ್ತಾನೆ. ಈ ಚಹರೆಯುಳ್ಳ ವ್ಯಕ್ತಿ ಪತ್ತೆಯಾದರೆ ನರಸಿಂಹರಾಜಪುರ ಪೊಲೀಸ್‌ ಠಾಣೆಗೆ ತಿಳಿಸಬೇಕು ಎಂದು ಪೊಲೀಸ್ ಠಾಣೆ ಪ್ರಕಟಣೆ ತಿಳಿಸಿದೆ. ದೂರವಾಣಿ -08266-220129 ಅಥವಾ 9480805157

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ