ಕನ್ನಡಪ್ರಭ ವಾರ್ತೆ ರಿಪ್ಪನ್‍ಪೇಟೆ
ಬೆನವಳ್ಳಿ ಗ್ರಾಮದ ಕರಿಬಸವೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಏರ್ಪಡಿಸಲಾಗಿದ್ದ ರುದ್ರಾಭಿಷೇಕ ಮತ್ತು ಕರಿಬಸವೇಶ್ವರ ಗದ್ದುಗೆಗೆ ಅಭಿಷೇಕ ಪೂಜೆ ನೆರವೇರಿಸಿ ಧರ್ಮಸಭೆಯ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿ ಮೂಲವ್ಯಾದಿ ಹೇಳಿಕೊಳ್ಳಲು ಆಗದಂತಹ ಕಾಯಿಲೆಯಾದರು ಅನುಭವಿಸುವುದು ಮಾತ್ರ ದೊಡ್ಡದು ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುಲು ಮುಜುಗರ ಈ ರೋಗಕ್ಕೆ ಮನೆಯಲ್ಲಿ ಮದ್ದು ಮಾಡಿಕೊಳ್ಳುವುದು ಅವಶ್ಯ. ಆ ನಿಟ್ಟಿನಲ್ಲಿ ಬೆನವಳ್ಳಿ ಗ್ರಾಮದ ಮಹಿಳೆಯೊಬ್ಬರು ಮನೆಮದ್ದು ಮೂಲಕ ಸಕಾಲದಲ್ಲಿ ನಾಟಿ ಔಷಧಿಯ ಚಿಕಿತ್ಸೆ ನೀಡಿ ಗುಣಪಡಿಸುವ ಕಾರ್ಯ ಮೆಚ್ಚುವಂತದ್ದು ಎಂದು ಹೇಳಿ ಈ ನಾಟಿ ವೈದ್ಯ ವಿನೋದರವರ ಕಾರ್ಯವನ್ನು ಪ್ರಶಂಸಿಸಿದರು.
ಇದೇ ಸಂದರ್ಭದಲ್ಲಿ ಬೆನವಳ್ಳಿಯ ನಾಟಿ ವೈದ್ಯೆ ವಿನೋದ ಆನಂದಪ್ಪರನ್ನು ಶ್ರೀಗಳು ಸನ್ಮಾನಿಸಿ ಆಶೀರ್ವದಿಸಿದರು. ಬೆನವಳ್ಳಿ ಸುಧಾಕರ, ಭವಾನಿ ಸುಧಾಕರ್, ವೀರಭದ್ರಪ್ಪ ದೇವರಸಲಕೆ, ಲಕ್ಕವಳ್ಳಿ ದೇವೇಂದ್ರಪ್ಪಗೌಡ, ಲಿಂಗಸ್ವಾಮಿಗೌಡ ಅಲುವಳ್ಳಿ, ನಾಗಮ್ಮ ಬೆನವಳ್ಳಿ ಬಸವರಾಜ್, ನಾಗರತ್ನಾ ವೀರಪ್ಪಗೌಡ ಸೊನಲೆ, ಸಾವಿತ್ರಿ ವೀರಭದ್ರಪ್ಪ, ದಾಕ್ಷಾಯಿಣಿ, ಇನ್ನಿತರ ಬೆನವಳ್ಳಿ ಗ್ರಾಮಸ್ಥರಿದ್ದರು. ದೇವೇಂದ್ರಪ್ಪ ಲಕ್ಕವಳ್ಳಿ ಪ್ರಾರ್ಥಿಸಿದರು. ಸುಧಾಕರ್ ಸ್ವಾಗತಿಸಿ ನಿರೂಪಿಸಿದರು.