ರಾಷ್ಟ್ರ ಕಟ್ಟಲು ಶಿಸ್ತುಬದ್ಧ ಮಾರ್ಗದರ್ಶನದ ಅಗತ್ಯವಿದೆ: ಗಂಗಾಧರ ಹೆಗಡೆ

KannadaprabhaNewsNetwork |  
Published : May 10, 2026, 02:15 AM IST
ವಿಶ್ವ ಹಿಂದೂ ಪರಿಷತ್ ಭಜರಂಗದಳದ ಕರ್ನಾಟಕ ಪ್ರಾಂತ ಶೌರ್ಯ ಪ್ರಶಿಕ್ಷಣ ಶಿಬಿರವನ್ನು ಉದ್ಘಾಟಿಸಿದ ವಿಶ್ವ ಹಿಂದೂ ಪರಿಷತ್ ಕರ್ನಾಟಕ ಉತ್ತರ ಪ್ರಾಂತದ ಉಪಾಧ್ಯಕ್ಷ ಗಂಗಾಧರ ಹೆಗಡೆ ಮಾತನಾಡಿದರು. | Kannada Prabha

ಸಾರಾಂಶ

ನಮ್ಮೆಲ್ಲರಲ್ಲೂ ಶಕ್ತಿ ಇದೆ ಅದಕ್ಕೆ ಪರಿಪೂರ್ಣ ರೂಪ ನೀಡಬೇಕಾಗಿದೆ. ನಾವೆಲ್ಲ ರಾಷ್ಟ್ರದ ಕೆಲಸ ಮಾಡಬೇಕಿದೆ ಅದಕ್ಕೆ ಸಾಕಷ್ಟು ಸವಾಲುಗಳಿವೆ.

ಕನ್ನಡಪ್ರಭ ವಾರ್ತೆ ಯಲ್ಲಾಪುರ

ನಮ್ಮೆಲ್ಲರಲ್ಲೂ ಶಕ್ತಿ ಇದೆ ಅದಕ್ಕೆ ಪರಿಪೂರ್ಣ ರೂಪ ನೀಡಬೇಕಾಗಿದೆ. ನಾವೆಲ್ಲ ರಾಷ್ಟ್ರದ ಕೆಲಸ ಮಾಡಬೇಕಿದೆ ಅದಕ್ಕೆ ಸಾಕಷ್ಟು ಸವಾಲುಗಳಿವೆ. ಅದನ್ನು ಮೀರಿಸಿ ರಾಷ್ಟ್ರ ಕಟ್ಟಲು ಶಿಸ್ತು ಬದ್ಧ ಮಾರ್ಗದರ್ಶನದ ಅಗತ್ಯವಿದೆ. ಅಂತಹ ಮಾರ್ಗದರ್ಶನ ಈ ಶಿಬಿರದಲ್ಲಿ ಲಭಿಸಲಿದೆ ಎಂದು ವಿಶ್ವ ಹಿಂದೂ ಪರಿಷತ್ ಕರ್ನಾಟಕ ಉತ್ತರ ಪ್ರಾಂತದ ಉಪಾಧ್ಯಕ್ಷ ಗಂಗಾಧರ ಹೆಗಡೆ ಹೇಳಿದರು.

ಪಟ್ಟಣದ ವಿಶ್ವದರ್ಶನ ಸಮೂಹ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಮೇ 9ರಿಂದ 16ರವರೆಗೆ ನಡೆಯಲಿರುವ ವಿಶ್ವ ಹಿಂದೂ ಪರಿಷತ್ ಭಜರಂಗದಳದ ಕರ್ನಾಟಕ ಪ್ರಾಂತ ಶೌರ್ಯ ಪ್ರಶಿಕ್ಷಣ ಶಿಬಿರವನ್ನು ಶನಿವಾರ ಸಂಜೆ ಉದ್ಘಾಟಿಸಿ ಅವರು ಮಾತನಾಡಿದರು.

ಒಂದು ತಂಡವಾಗಿ ಶಕ್ತಿ ಬಲ ಶಿಬಿರ ತುಂಬಲಿದೆ. ಗುಣವಂತರಾಗಬೇಕು, ಶೀಲವಂತರಾಗಬೇಕು ಈ ಮೂಲಕ ಸಂಘಟನೆಗೆ ಬಲ ತುಂಬಬೇಕು ಎನ್ನುವುದು ಶಿಬಿರದ ಉದ್ದೇಶವಾಗಿದೆ ಎಂದರು.

ಶಿಬಿರದ ಉದ್ದೇಶವನ್ನು ವಿವರಿಸಿದ ಕ್ಷೇತ್ರೀಯ ಧರ್ಮ ಪ್ರಸಾರ ಪ್ರಮುಖ ಸೂರ್ಯನಾರಾಯಣ, ಈ ದೇಶದ ಯುವ ಶಕ್ತಿಯೇ ದೇಶದ ಭವಿಷ್ಯ. ಇತಿಹಾಸವನ್ನು ಮುಂದಿನ ಸಮಾಜಕ್ಕೆ ದಾಟಿಸಲು ಸಮಾಜ ಸಂಘಟನೆ ಬಲಗೊಳ್ಳಬೇಕಿದೆ. ಹಿಂದೂಗಳಿಗೆ ಇರುವ ಒಂದೇ ದೇಶ ಭಾರತವನ್ನು ಭಾರತವಾಗಿ ಉಳಿಸಿಕೊಳ್ಳಬೇಕಿದೆ. ದೇಶ, ಧರ್ಮ ಉಳಿಯಬೇಕು. ನಿಸ್ವಾರ್ಥವಾಗಿ ದೇಶ ಸೇವೆ ಮಾಡಬೇಕು. ಇದಕ್ಕಾಗಿ ಯುವಕರು ಬಲಗೊಳ್ಳಬೇಕು. ಸಂಸ್ಕಾರ ಭರಿತ ದೇಶಭಕ್ತ ಯುವಕರ ಸಂಘಟನೆಗಾಗಿ ಇಂತಹ ಶಿಬಿರಗಳು ಆಯೋಜಿಸಲಾಗುತ್ತಿದೆ. ಸಾವಿರಾರು ಸಮಸ್ಯೆಗಳು ಮುಂದಿವೆ. ಅದನ್ನು ಮೆಟ್ಟಿ ನಿಂತು ಸಮಾಜ ಬಲಪಡಿಸಲು ಜಾಗೃತ ಹಿಂದೂ ಸಮಾಜದ ಅಗತ್ಯತೆ ಇದೆ. ನಮ್ಮಲ್ಲಿ ಸೈನಿಕನ ಮಾನಸಿಕತೆ ನಿರ್ಮಾಣವಾಗಬೇಕು. ಇದಕ್ಕಾಗಿ ಇಂತಹ ಶಿಬಿರಗಳು ಕಾರ್ಯನಿರ್ವಹಿಸುತ್ತಿವೆ. ನಮ್ಮ ಹಿಂದೂ ಸಮಾಜ ಸಂಘಟಿತರಾಗಿ ನಾವೆಲ್ಲ ಒಂದು ಎಂಬ ಭಾವನೆ ಬರಬೇಕಾದರೆ ಸಮಾಜದಲ್ಲಿರುವ ಜಾತಿಯತೆ ದೂರವಾಗಬೇಕು ಎಂದರು.

ಶಿರಸಿ ಜಿಲ್ಲಾ ಪ್ರಚಾರಕ ಗಣೇಶಜಿ ಮಾತನಾಡಿ, ನಮ್ಮಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳುವ ಮೂಲಕ ಶಿಬಿರದ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕು. ಶಿಕ್ಷಣ ಉತ್ತಮ ಸಂಸ್ಕಾರ ಗಳಿಕೆಯೊಂದಿಗೆ ನಮ್ಮ ವ್ಯಕ್ತಿತ್ವ ನಿರ್ಮಾಣವಾಗಬೇಕು. ನಾವು ಕಲಿತ ಸಂಸ್ಕಾರ ನಮ್ಮ ಜೀವನವನ್ನು ಸುಗಮದಾರಿಗೆ ಕರೆದೊಯ್ಯುತ್ತದೆ. ಶರೀರ ಮನಸ್ಸನ್ನು ಸಮಾಜಮುಖಿಯಾಗಿ ಸದೃಢಗೊಳಿಸಿಕೊಳ್ಳಬೇಕು ಎಂದರು.

ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಎಸ್.ಎನ್. ಭಟ್ಟ ಏಕಾನ ಅಧ್ಯಕ್ಷತೆ ವಹಿಸಿದ್ದರು.

ಪ್ರಾಂತ ಪ್ರಧಾನ ಕಾರ್ಯದರ್ಶಿ, ಶಿವಕುಮಾರ ಬೋಳಶೆಟ್ಟಿ ಸೂರ್ಯ, ಭಜರಂಗದಳದ ಪ್ರಾಂತ ಸಂಯೋಜಕ ಬಸವರಾಜ ಸೂಗೂರ, ಪ್ರಾಂತ ಸಹಕಾರ್ಯದರ್ಶಿ ಪುಂಡಲೀಕ ದಳವಾಯಿ, ಪ್ರಮುಖರಾದ ಶಿವಾನಂದ ಸತ್ತಿಗೇರಿ, ಮಲ್ಲಿಕಾರ್ಜುನ ಸತ್ತಿಗೇರಿ ಮತ್ತಿತರರು ಉಪಸ್ಥಿತರಿದ್ದರು.

ಚಿದಾನಂದ ವೈಯಕ್ತಿಕ ಗೀತೆ ಹಾಡಿದರು, ಮಲ್ಲಿಕಾರ್ಜುನ್ ಎಚ್. ನಿರೂಪಿಸಿದರು.

ಕರ್ನಾಟಕ ಉತ್ತರ ಪ್ರಾಂತದ 18 ಜಿಲ್ಲೆಗಳಿಂದ ಆಗಮಿಸಿದ 150ಕ್ಕೂ ಅಧಿಕ ಪ್ರಶಿಕ್ಷಣಾರ್ಥಿಗಳು ಒಂದು ವಾರ ನಡೆಯುವ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

₹1 ಕೋಟಿ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣ: ಕನಕ ಶ್ರೀ
ತೆಗ್ಗಿನಮಠದಿಂದ ಅನ್ನ, ಅಕ್ಷರ ಜತೆ ಧರ್ಮಕಾರ್ಯ: ಸಂಸದ ಇ.ತುಕಾರಾಂ