ಸಾಣೆಹಳ್ಳಿಯಲ್ಲಿ ನ.4ರಿಂದ ರಾಷ್ಟ್ರೀಯ ನಾಟಕೋತ್ಸವ: ಪಂಡಿತಾರಾಧ್ಯ ಸ್ವಾಮೀಜಿ

KannadaprabhaNewsNetwork |  
Published : Sep 29, 2024, 01:38 AM IST
ಸಾಣೇಹಳ್ಳಿಯಲ್ಲಿ ನಡೆಯಲಿರುವ ರಾಷ್ಟ್ರೀಯ ನಾಟಕೋತ್ಸವದ ಪೂರ್ವಭಾವಿ ಸಭೆ ನಡೆಯಿತು. | Kannada Prabha

ಸಾರಾಂಶ

ಸಾಣೇಹಳ್ಳಿಯಲ್ಲಿ ಈ ಬಾರಿ ನ.4 ರಿಂದ 9ರವರೆಗೆ 6 ದಿನಗಳ ಕಾಲ ರಾಷ್ಟ್ರೀಯ ನಾಟಕೋತ್ಸವ ನಡೆಯಲಿದೆ ಎಂದು ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು

ಕನ್ನಡಪ್ರಭ ವಾರ್ತೆ ಹೊಸದುರ್ಗ

ತಾಲೂಕಿನ ಸಾಣೇಹಳ್ಳಿಯಲ್ಲಿ ಈ ಬಾರಿ ನ.4 ರಿಂದ 9ರವರೆಗೆ 6 ದಿನಗಳ ಕಾಲ ರಾಷ್ಟ್ರೀಯ ನಾಟಕೋತ್ಸವ ನಡೆಯಲಿದೆ ಎಂದು ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು. ಈ ಕುರಿತು ಶ್ರೀ ಮಠದ ಗುರು ಬಸವ ಮಹಾಮನೆಯಲ್ಲಿ ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿ, ಪ್ರತಿ ವರ್ಷದಂತೆ ಶ್ರೀ ಶಿವಕುಮಾರ ಬಯಲು ರಂಗಮಂದಿರದಲ್ಲಿ ಮುಖ್ಯ ವೇದಿಕೆ ಕಾರ್ಯಕ್ರಮ ಮತ್ತು ನಾಟಕಗಳ ಪ್ರದರ್ಶನ ನಡೆಯಲಿವೆ. ಎಸ್.ಎಸ್ ಒಳಾಂಗಣ ರಂಗಮಂದಿರದಲ್ಲಿ ಮಧ್ಯಾಹ್ನದ ನಾಟಕ ಪ್ರದರ್ಶನಗಳು ಮತ್ತು ಮುಖ್ಯ ವಿಚಾರ ಸಂಕಿರಣದ ಕಾರ್ಯಕ್ರಮಗಳು ನಡೆಯಲಿವೆ. ಶಿವಕುಮಾರ ರಂಗಮಂದಿರದಲ್ಲಿ ಪ್ರತಿದಿನ ಬೆಳಗ್ಗೆ ಪ್ರಾರ್ಥನಾ ಕಾರ್ಯಕ್ರಮಗಳು ಜರುಗಲಿವೆ ಎಂದು ತಿಳಿಸಿದರು.

ನಾಟಕೋತ್ಸವದಲ್ಲಿ ಶಿವಸಂಚಾರದ 3 ನಾಟಕಗಳು ಮತ್ತು ಪರಭಾಷೆಯ ನಾಟಕಗಳು ಪ್ರದರ್ಶನಗೊಳ್ಳುವವು. ಪ್ರತಿದಿನದ ವಿಚಾರ ಮಾಲಿಕೆ, ವಚನ ಸಂಗೀತ, ನೃತ್ಯರೂಪಕ, ಸಾಧಕರಿಗೆ ಅಭಿನಂದನೆ, ರಾಜಕೀಯ ನೇತಾರರ, ವಿದ್ವಜನರ, ಚಿಂತಕರ ಮಾತುಗಳು, ಸ್ವಾಮೀಜಿಗಳ ಆಶೀರ್ವಚನ, ಶಿವಕುಮಾರ ಪ್ರಶಸ್ತಿ ಪ್ರದಾನ ಮುಂತಾದ ಕಾರ್ಯಕ್ರಮಗಳು ಪ್ರತಿವರ್ಷದಂತೆ ಈ ವರ್ಷವೂ ನಡೆಯಲಿವೆ ಎಂದರು.

ಕಾರ್ಯಕ್ರಮ ಅತಿಥಿಗಳು, ಸ್ವಾಮೀಜಿಗಳು, ಆಯ್ದುಕೊಳ್ಳಬಹುದಾದ ವಿಚಾರಗಳು, ನಾಟಕಗಳ ಬಗ್ಗೆ ಚರ್ಚಿಸಲಾಯಿತು. ಸಭೆಯಲ್ಲಿ ತಾಲೂಕು ಸಾಧು ಸದ್ಧರ್ಮ ವೀರಶೈವ ಸಮಾಜದ ಅಧ್ಯಕ್ಷ ಎಸ್. ಸಿದ್ದಪ್ಪ, ಹೆಬ್ಬಳ್ಳಿ ಮಲ್ಲಿಕಾರ್ಜುನ್, ಕಾಟೇಹಳ್ಳಿ ಶಿವಕುಮಾರ್, ಬನ್ಸಿಹಳ್ಳಿ ಅಜ್ಜಪ್ಪ, ಬಿ.ಪಿ ಓಂಕಾರಪ್ಪ, ಕೆ. ಬಸವರಾಜ್, ತಿಮ್ಮಜ್ಜ, ಸಿದ್ದಯ್ಯ, ಕೃಷ್ಣಮೂರ್ತಿ, ಸಾನಿ ರವಿಕುಮಾರ, ಎಸ್.ಆರ್ ಮಂಜುನಾಥ್, ವೀರಭದ್ರಪ್ಪ, ಸ್ವಾಮಿ, ಯುವ ಮುಖಂಡರು, ಪ್ರಭುದೇವ, ಷಣ್ಮುಖಯ್ಯ, ಸಾಣೇಹಳ್ಳಿ ಮತ್ತು ಸುತ್ತಮುತ್ತಲ ಗ್ರಾಮಸ್ಥರು, ಕಲಾಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಆರಂಭದಲ್ಲಿ ಎಲ್. ಷಣ್ಮುಖಯ್ಯ ಪ್ರಾರ್ಥಿಸಿದರು. ಎಸ್ ಕೆ. ಪರಮೇಶ್ವರಯ್ಯ ಸ್ವಾಗತಿಸಿದರು. ಎಸಿ. ಚಂದ್ರಪ್ಪ ವಂದಿಸಿದರು. ನಾಟಕೋತ್ಸವಕ್ಕೆ ಅಜ್ಜಂಪುರದ ಎಸಿ. ಚಂದ್ರಪ್ಪ 18 ಕ್ವಿಂಟಲ್ ಈರುಳ್ಳಿಯನ್ನು ಶ್ರೀಮಠಕ್ಕೆ ತಂದುಕೊಟ್ಟರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!