ಕನ್ನಡಪ್ರಭ ವಾರ್ತೆ ಹೊನ್ನಾಳಿ
ತಾಲೂಕಿನಲ್ಲಿ ಶುಕ್ರವಾರ ಹರ್ ಘರ್ ತಿರಂಗಯಾತ್ರೆಯ ಅಂಗವಾಗಿ ನಡೆದ ಭವ್ಯ ರಾಷ್ಟ್ರಧ್ವಜ ಮೆರವಣಿಗೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಪ್ರತಿಯೊಬ್ಬ ಭಾರತೀಯನು ರಾಷ್ಟಧ್ವಜವನ್ನು ಆ 15ರಂದು ತಮ್ಮ ತಮ್ಮ ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಿಸಿ, ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ ಬಲಿದಾನಗೊಂಡ ಸ್ವಾತಂತ್ರ್ಯ ಹೋರಾಟಗಾರರನ್ನು ನಾವು ಸ್ಮರಿಸಬೇಕು. ಆಗ ಮಾತ್ರ ಅವರ ಹೋರಾಟಕ್ಕೆ ಸಾರ್ಥಕತೆ ಬರುತ್ತದೆ. ಯುವಕರು ಸಿನಿಮಾ ನಟರನ್ನು ಅನುಕರಿಸುವ ಬದಲು ಸ್ವಾತಂತ್ಯಕ್ಕಾಗಿ ತಮ್ಮ ಪ್ರಾಣತ್ಯಾಗ ಮಾಡಿದ ಚಂದ್ರಶೇಖರ್ ಅಜಾದ್, ಭಗತ್‌ಸಿಂಗ್, ಮದನಮೋಹನ ಮಾಳಿವಿಯ, ವೀರ ಸಾವರ್ಕರ್, ಗಾಂಧೀಜಿ, ಸ್ವಾತಂತ್ಯ ಹೋರಾಟಕ್ಕೆ ಸ್ಫೂರ್ತಿ ನೀಡಿದ ವಂದೇ ಮಾತರಂ ಗೀತೆ ರಚಿಸಿದ ಬಂಕಿಮಚಂದ್ರ ಚಟರ್ಜಿ, ನೇತಾಜಿ ಸುಭಾಸ್ ಚಂದ್ರ ಬೋಸ್, ಸಂಗೊಳ್ಳಿ ರಾಯಣ್ಣ, ವೀರ ಕಿತ್ತೂರು ರಾಣಿ ಚೆನ್ನಮ್ಮ, ಶಿವಾಜಿ ಹೀಗೇ ಹಲವಾರು ಹೋರಾಟಗಾರರು ಭಾರತ ಮಾತೆಯನ್ನು ಸಂಕೋಲೆಯಿಂದ ಬಿಡಿಸಲು ಹೋರಾಟ ಮಾಡಿದ್ದಾರೆ. ಅವರು ನಮಗೆ ಆದರ್ಶ ಆಗಬೇಕು ಎಂದು ಹೇಳಿದರು.ದೇಶದ ವಿಚಾರ ಬಂದಾಗ ಎಲ್ಲರೂ ಒಗ್ಗಟ್ಟಾಗಿ ನಾವು ನಿಲ್ಲಬೇಕು, ಆಗಲೂ ನಾವು ನಮ್ಮ ಪಕ್ಷ, ಬೇರೆ ಪಕ್ಷ ಎಂದು ಹಿಂದೆ ಸರಿಯಬಾರದು ಮೊದಲು ದೇಶ ಆ ಮೇಲೆ ನಾವು, ನಮ್ಮ ಪಕ್ಷವಾಗಬೇಕು ಎಂದರು.
ತಾಲೂಕು ಬಿಜೆಪಿ ಅಧ್ಯಕ್ಷ ಅರಕೆರೆ ನಾಗರಾಜ್, ನಿಕಟಪೂರ್ವ ಅಧ್ಯಕ್ಷ ಸುರೇಶ್, ಡಿ.ಜಿ.ರಾಜಪ್ಪ, ಗಿರೀಶ್ ಚೀಲೂರು, ಮಾರುತಿ ನಾಯ್ಕ, ಎಸ್.ಎಸ್.ಬೀರಪ್ಪ, ನವೀನ್ ಇಂಚರ, ಎಂ.ಎಸ್.ಪಾಲಕ್ಷಪ್ಪ, ಸಿದ್ದಲಿಂಗಪ್ಪ, ನಿಂಗಪ್ಪ, ಶ್ರೀಧರ್, ರಘು, ರಂಗನಾಥ್, ಶಿವುಹುಡೇದ್ ವಿದ್ಯಾಥಿಗಳು, ಮಹಿಳೆಯರು ಹಾಜರಿದ್ದರು.