ಬೀರೇಶ್ವರ ಸಂಸ್ಥೆಗೆ ಎಕ್ಸಲೆನ್ಸ್ ಇನ್ ಬಿಸಿನೆಸ್ ಗ್ರೋತ್ ರಾಷ್ಟ್ರೀಯ ಗೌರವ

KannadaprabhaNewsNetwork |  
Published : Nov 22, 2026, 03:00 AM IST
ಚಿಕ್ಕೊಡಿ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಚಿಕ್ಕೋಡಿಗ್ರಾಮೀಣ ಭಾಗದಲ್ಲಿ ಆರಂಭವಾಗಿ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿರುವ ಯಕ್ಸಂಬಾದ ಬೀರೇಶ್ವರ ಕೋ-ಆಪ್ ಕ್ರೆಡಿಟ್ ಸೊಸೈಟಿ(ಮಲ್ಟಿ-ಸ್ಟೇಟ್) ಸಂಸ್ಥೆಯ ಕಿರೀಟಕ್ಕೆ ರಾಷ್ಟ್ರೀಯ ಗರಿ ಮೂಡಿದೆ.

ಕನ್ನಡಪ್ರಭ ವಾರ್ತೆ ಚಿಕ್ಕೋಡಿ

ಗ್ರಾಮೀಣ ಭಾಗದಲ್ಲಿ ಆರಂಭವಾಗಿ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿರುವ ಯಕ್ಸಂಬಾದ ಬೀರೇಶ್ವರ ಕೋ-ಆಪ್ ಕ್ರೆಡಿಟ್ ಸೊಸೈಟಿ(ಮಲ್ಟಿ-ಸ್ಟೇಟ್) ಸಂಸ್ಥೆಯ ಕಿರೀಟಕ್ಕೆ ರಾಷ್ಟ್ರೀಯ ಗರಿ ಮೂಡಿದೆ.

ಸಹಕಾರ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡುವ ಜತೆಗೆ ಆರ್ಥಿಕ ಪ್ರಗತಿ ಹಾಗೂ ವ್ಯವಹಾರ ವೃದ್ಧಿಯಲ್ಲಿ ವಿಶಿಷ್ಟ ಛಾಪು ಮೂಡಿಸಿರುವ ಬೀರೇಶ್ವರ ಸಂಸ್ಥೆಗೆ ರಾಷ್ಟ್ರಮಟ್ಟದ ಪ್ರತಿಷ್ಠಿತ ಎಕ್ಸಲೆನ್ಸ್ ಇನ್ ಬಿಸಿನೆಸ್ ಗ್ರೋತ್ 2026 ಪ್ರಶಸ್ತಿ ಲಭಿಸಿದೆ.

ಗುರುವಾರ ನವದೆಹಲಿಯಲ್ಲಿ ನಡೆದ ಇಂಡಿಯನ್ ಕೋ-ಆಪ್ ನ್ಯೂಸ್ ಪೋರ್ಟಲ್ ನ 15ನೇ ವಾರ್ಷಿಕ ಸ್ಥಾಪನಾ ದಿನದ ಅಂಗವಾಗಿ ರಾಷ್ಟ್ರೀಯ ಮಟ್ಟದ ವಿಚಾರ ಸಂಕೀರ್ಣದಲ್ಲಿ, ದೇಶದಲ್ಲಿನ ಸಹಕಾರಿ ಸಂಘಗಳ ಸಮ್ಮುಖದಲ್ಲಿ ಸಾಧನೆ ಮತ್ತು ಪಾರದರ್ಶಕ ವ್ಯವಹಾರವನ್ನು ಗುರುತಿಸಿ ಪ್ರತಿಷ್ಠಿತ ಎಕ್ಸಲೆನ್ಸ್ ಇನ್ ಬಿಸಿನೆಸ್ ಗ್ರೋತ್ 2026 ರಾಷ್ಟ್ರೀಯ ಪ್ರಶಸ್ತಿ ನೀಡಿತು. ರಿಸರ್ವ್‌ ಬ್ಯಾಂಕ್ ಆಫ್ ಇಂಡಿಯಾ ಮಾಜಿ ನಿರ್ದೇಶಕ ಸತೀಶ ಮರಾಠೆ ಹಾಗೂ ಗಣ್ಯರ ಸಮ್ಮುಖದಲ್ಲಿ ಜೊಲ್ಲೆ ಗ್ರೂಪ್ ಸಂಸ್ಥಾಪಕರು ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ಪ್ರಶಸ್ತಿಯನ್ನು ಸ್ವೀಕರಿಸಿದರು.ಈ ವೇಳೆ ಇಂಡಿಯನ್ ಕೋ-ಆಪರೇಟಿವ್(ಭಾರತ್ ಸಹಕಾರ) ಪತ್ರಿಕೆ ಸಂಪಾದಕ ಅಜಯ್ ಝಾ, ನ್ಯಾಷನಲ್ ಫೆಡರೇಶನ್ ಆಫ್ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ಸ್ ಆ್ಯಂಡ್ ಕ್ರೆಡಿಟ್‌ ಸೊಸೈಟೀಸ್ ಅಧ್ಯಕ್ಷ ಲಕ್ಷ್ಮೀದಾಸ, ಸಹಕಾರ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಪಂಕಜ ಬನ್ಸಲ್, ಸಹಕಾರಿ ಚುನಾವಣಾ ಪ್ರಾಧಿಕಾರದ ಅಧ್ಯಕ್ಷ ಡಿ.ಕೆ.ಸಿಂಗ್‌, ಇಫ್ಕೋ(IFFCO) ಸಂಸ್ಥೆಯ ಮಾಜಿ ವ್ಯವಸ್ಥಾಪಕ ನಿರ್ದೇಶಕ ಯು.ಎಸ್.ಅವಸ್ಥಿ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಂಸ್ಥೆಯ ನಿರ್ದೇಶಕ ಕಾಶಿನಾಥ ಕಮತೆ ಸೇರಿದಂತೆ ಸಹಕಾರ ಕ್ಷೇತ್ರದ ಗಣ್ಯರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಸವಣ್ಣನವರ ಅವಹೇಳನ: ಅಥಣಿಯಲ್ಲಿ ಆಕ್ರೋಶ
ರವಿ ಹಂಜ್‌, ವಿಶ್ವೇಶ್ವರ ಭಟ್‌ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ