ಶ್ರೀನಿವಾಸ ರಾಮಾನುಜನ್‌ ಜನ್ಮದಿನದಂದು ರಾಷ್ಟ್ರೀಯ ಗಣಿತ ದಿನ

KannadaprabhaNewsNetwork | Published : Dec 24, 2023 1:45 AM

ಸಾರಾಂಶ

ಭಾರತದ ಶ್ರೇಷ್ಠ ಗಣಿತಜ್ಞ ಶ್ರೀನಿವಾಸ ಅಯ್ಯಂಗಾರ್ ರಾಮಾನುಜನ್‌ ಗೌರವಾರ್ಥ ಕಾರ್ಯಕ್ರಮ ಅರ್ಥಪೂರ್ಣಅರುಣೋದಯ ಪ್ರೌಢಶಾಲೆಯ ದಿನಾಚರಣೆಯಲ್ಲಿ ಸಿದ್ದಪ್ಪ.ಕೆ.ಟಕ್ಕಳಕಿ ಅಭಿಪ್ರಾಯ

ಕನ್ನಡಪ್ರಭ ವಾರ್ತೆ, ತರೀಕೆರೆ

ಭಾರತದ ಶ್ರೇಷ್ಠ ಗಣಿತಶಾಸ್ತ್ರಜ್ಞ ಶ್ರೀನಿವಾಸ ಅಯ್ಯಂಗಾರ್ ರಾಮಾನುಜನ್‌ ಗಣಿತಕ್ಕೆ ನೀಡಿದ ಕೊಡುಗೆಗಳ ಗೌರವಾರ್ಥ ಅವರ ಜನ್ಮದಿನವಾದ ಡಿ. 22ರಂದು ರಾಷ್ಟ್ರೀಯ ಗಣಿತ ದಿನವನ್ನಾಗಿ ಆಚರಿಸಲಾಗುತ್ತದೆ, ವಿದ್ಯಾರ್ಥಿ ಜೀವನ ತಪಸ್ಸು ಇದ್ದ ಹಾಗೆ, ಕಷ್ಟಗಳನ್ನು ಎದುರಿಸುತ್ತ ನಿರಂತರ ಅಭ್ಯಾಸದೊಂದಿಗೆ ಆದರ್ಶ ಪಾಲಿಸಿದರೆ ಮಾತ್ರ ಅಂದುಕೊಂಡ ಗುರಿ ಸಾಧಿಸಬಹುದು ಎಂದು ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸಿದ್ದಪ್ಪ.ಕೆ.ಟಕ್ಕಳಕಿ ತಿಳಿಸಿದರು.

ಪಟ್ಟಣದ ಅರುಣೋದಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2023ನೇ ಸಾಲಿನ ರಾಷ್ಟ್ರೀಯ ಗಣಿತ ದಿನಾಚರಣೆಯಲ್ಲಿ ಮಾತನಾಡಿ, ಪರೀಕ್ಷೆ ಸಮಯದಲ್ಲಿ ವಿದ್ಯಾರ್ಥಿಗಳು ಸಮಯಪ್ರಜ್ಞೆ, ಏಕಾಗ್ರತೆ ಹಾಗೂ ಶ್ರದ್ಧೆ ಪಾಲಿಸಬೇಕು, ವಿದ್ಯಾರ್ಥಿ ಗಳಿಗೆ ಗಣಿತದ ಬಗ್ಗೆ ಆಸಕ್ತಿ ಹಾಗೂ ಜ್ಞಾನದ ಹಸಿವಿರಬೇಕು. ವಿಷಯವನ್ನು ಕಷ್ಟಪಟ್ಟು ಕಲಿಯದೆ ಇಷ್ಟಪಟ್ಟು ಕಲಿಯಬೇಕು. ವಿದ್ಯಾರ್ಥಿಗಳು ಅರಿವೇ ಗುರು ಎಂಬ ಮಂತ್ರ ಪಾಲಿಸಬೇಕು ಎಂದು ತಿಳಿಸಿದರು. ಸುದೀಕ್ಷ ಮಾತನಾಡಿ. ಗಣಿತ ಎಲ್ಲಾ ವಿಷಯಗಳ ಮೂಲ. ಗಣಿತಕ್ಕೆ ದೇಶ, ಭಾಷೆ ಹಾಗೂ ಶೈಲಿಯ ಯಾವುದೇ ಮಾನ ದಂಡವಿಲ್ಲ, ಗಣಿತ ನಮ್ಮ ಆರ್ಥಿಕ, ಸಾಮಾಜಿಕ, ಬೌದ್ಧಿಕ ಜೀವನ ಸೇರಿದಂತೆ ಆಹಾರ, ಆರೋಗ್ಯ, ಅಳತೆ, ಮಾಪನ ಹೀಗೆ ನಮ್ಮ ದಿನನಿತ್ಯ ಜೀವನದಲ್ಲಿ ಗಣಿತ ಹಾಸುಹೊಕ್ಕಾಗಿ ಜೀವನವನ್ನು ಸುಗುಮವಾಗಿಸುತ್ತದೆ ಎಂದು ತಿಳಿಸಿದರು.

ಧೃತಿರಾಜ್ ಶ್ರೀನಿವಾಸ ರಾಮನುಜನ್‌ ರವರ ಜೀವನ ಚರಿತ್ರೆ ಹಾಗೂ ಗಣಿತ ಶಾಸ್ತ್ರಕ್ಕೆ ಅವರು ನೀಡಿದ ಕೊಡುಗೆಗಳ ಬಗ್ಗೆ ಮಾತನಾಡಿದರು. ಮಕ್ಕಳಾದ ಧ್ರುವ.ಟಿ.ಎಂ ಹಾಗೂ ಮೈತ್ರಿ.ಟಿ.ಸಿ , ಪ್ರಾರ್ಥನಾ.ಎಂ, ಚಿರಂತ್ ಕುಮಾರ್ ಸಾನ್ವಿತ.ಟಿ.ಜೆ ಇದ್ದರು.23ಕೆಟಿಆರ್.ಕೆ.1ಃ

ತರೀಕೆರೆಯ ಅರುಣೋದಯತ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಗಣಿತ ದಿನಾಚರಣೆಯಲ್ಲಿ ಸುಧೀಕ್ಷ ಮಾತನಾಡಿದರು. ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲಸಿದ್ದಪ್ಪ.ಕೆ.ಟಕ್ಕಳಕಿ ಇದ್ದಾರೆ.

Share this article