ರಾಷ್ಟ್ರಕವಿ ಕುವೆಂಪು ಅವರ ಸಂದೇಶಗಳು ನಮ್ಮೆಲ್ಲರಿಗೂ ಮಾರ್ಗದರ್ಶನ: ಸುನಂದ ಜಯರಾಂ

KannadaprabhaNewsNetwork | Published : May 25, 2025 11:49 PM
ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಅಣ್ಣನ ನೆನಪು ಪ್ರತಿಯೊಬ್ಬ ಕನ್ನಡಿಗರಿಗೂ ಚಿರಪರಿಚಿತ. ಯುಗದ ಕವಿ ರಾಷ್ಟ್ರಕವಿ ಕುವೆಂಪು ಅವರು ಆ ಸ್ಥಾನದಲ್ಲಿ ಸದಾ ಹಸಿರಾಗಿ ನಿಲ್ಲುತ್ತಾರೆ. ಅಂದಿನ ಕಾಲದಲ್ಲಿದ್ದ ಮೌಢ್ಯತೆಯ ವಿರುದ್ಧ ಧ್ವನಿ ಎತ್ತಿ ವೈಚಾರಿಕ ವಿಷಯಗಳನ್ನು ಸಂದೇಶವಾಗಿ ನೀಡಿದ್ದು, ಅವರು ಸದಾ ನೆನಪಿನಲ್ಲಿ ಉಳಿಯುತ್ತಾರೆ.
Follow Us

ಕನ್ನಡಪ್ರಭ ವಾರ್ತೆ ಮಂಡ್ಯ

ಮೌಢ್ಯತೆ ವಿರುದ್ಧ ಧ್ವನಿಯೆತ್ತಿ ವೈಚಾರಿಕತೆ ಪ್ರತಿಪಾದಿಸಿದ ರಾಷ್ಟ್ರಕವಿ ಕುವೆಂಪು ಅವರ ಸಂದೇಶಗಳು ನಮ್ಮೆಲ್ಲರಿಗೂ ಮಾರ್ಗದರ್ಶನವಾಗಿದೆ ಎಂದು ರೈತ ನಾಯಕಿ ಸುನಂದ ಜಯರಾಂ ತಿಳಿಸಿದರು.

ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾ ಮಂದಿರದಲ್ಲಿ ನೆಲದನಿ ಬಳಗ ಮಂಗಲ ಅಸೋಸಿಯೇಷನ್ ಆಫ್ ಅಲಯನ್ಸ್ ಸಂಸ್ಥೆ ಇಂಟರ್ ನ್ಯಾಷನಲ್ ಹಾಗೂ ಡಿಆರ್ ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸಹಯೋಗದಲ್ಲಿ ಆಯೋಜಿಸಿದ್ದ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಅಣ್ಣನ ನೆನಪು ನಾಟಕ ಪ್ರದರ್ಶನ ಮತ್ತು ಅಭಿನಂದನ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.

ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಅಣ್ಣನ ನೆನಪು ಪ್ರತಿಯೊಬ್ಬ ಕನ್ನಡಿಗರಿಗೂ ಚಿರಪರಿಚಿತ. ಯುಗದ ಕವಿ ರಾಷ್ಟ್ರಕವಿ ಕುವೆಂಪು ಅವರು ಆ ಸ್ಥಾನದಲ್ಲಿ ಸದಾ ಹಸಿರಾಗಿ ನಿಲ್ಲುತ್ತಾರೆ. ಅಂದಿನ ಕಾಲದಲ್ಲಿದ್ದ ಮೌಢ್ಯತೆಯ ವಿರುದ್ಧ ಧ್ವನಿ ಎತ್ತಿ ವೈಚಾರಿಕ ವಿಷಯಗಳನ್ನು ಸಂದೇಶವಾಗಿ ನೀಡಿದ್ದು, ಅವರು ಸದಾ ನೆನಪಿನಲ್ಲಿ ಉಳಿಯುತ್ತಾರೆ ಎಂದರು.

ಮಂತ್ರ ಮಾಂಗಲ್ಯ ಎಂಬ ಸರಳ ವಿವಾಹ ಪದ್ಧತಿ ಅನುಕರಣೆಯ ಮೂಲಕ ಕುವೆಂಪು ಅವರ ವೈಚಾರಿಕತೆಯನ್ನು ಈಗಲೂ ನಾವು ಪಾಲಿಸುತ್ತಿದ್ದೇವೆ. ಸಂಪ್ರದಾಯ ಮೌಢ್ಯತೆಯ ವಿರುದ್ಧವಾಗಿ ಬದುಕು ನಡೆಸಲು ಕುವೆಂಪು ಅವರೇ ಪ್ರೇರಣೆ ಎಂದರು.

ಸಮಾಜ ಇಂದು ದಿಕ್ಕು ತಪ್ಪಿ ಹೋಗುತ್ತಿದೆ ಎಂದರೆ ಇದರಲ್ಲಿ ನಾವು ಆದಿ ತಪ್ಪುತಿಲ್ಲ, ಬದಲಾಗಿ ಆಳುವ ವ್ಯವಸ್ಥೆಯು ಪ್ರಜಾ ಪ್ರಭುತ್ವವನ್ನೇ ಮರೆತು ಸಾಗುತ್ತಾ ಅವರು ಹೇಳಿದ್ದೆ ಮಾತಾಗಿ ಹೋಗಿದೆ. ಇದರ ಬದಲಾವಣೆ ಆಗಬೇಕಾದರೆ ಇಂತಹ ನಾಟಕ ಪ್ರದರ್ಶನಗಳು ಹೆಚ್ಚು ಪ್ರದರ್ಶನಗೊಂಡು ಬೆಳಕು ಚೆಲ್ಲುತ್ತವೆ ಎಂದು ಅಭಿಪ್ರಾಯಪಟ್ಟರು.

ಕೆಂಗೇರಿ ವಿಶ್ವ ಒಕ್ಕಲಿಗ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ನಿಶ್ಚಲಾನಂದನಾಥ ಸ್ವಾಮೀಜಿ ಮಾತನಾಡಿ, ರಾಷ್ಟ್ರಕವಿ ಕುವೆಂಪು ಅವರು ಪ್ರತಿಪಾದಿಸಿದ ಮನುಜ ಮತ ವಿಶ್ವಪಥ ಎಂಬ ಮಾತು ಇಂದಿಗೂ ಪ್ರಸ್ತುತವಾಗಿದೆ ಎಂದರು.

ರೈತ ಸಮುದಾಯಕ್ಕೆ ದುಡಿಯುವವರಿಗೆ ಸನ್ಮಾನ ಮಾಡುತ್ತಿರುವುದು ಮೆಚ್ಚುವ ಕೆಲಸ. ಸಾಂಸ್ಕೃತಿಕ ಸಮಾರಂಭಕ್ಕೆ ಆಗಮಿಸಿ ನಾಟಕ ವೀಕ್ಷಣೆಗೆ ಆಗಮಿಸಿರುವ ಕಲಾ ಪ್ರೇಕ್ಷಕರಿಂದ ಇದೇ ರೀತಿ ಪ್ರೋತ್ಸಾಹ ಸಿಗಲಿ ಎಂದು ಆಶೀರ್ವಚನ ನೀಡಿದರು.

ಮಂಗಲ ಗ್ರಾಮದ ನೆಲದನಿ ಬಳಗ ಮಾಡುತ್ತಿರುವ ವಿವಿಧ ಸೇವಾ ಕಾರ್ಯಗಳು ಜನಪರ ಮೆಚ್ಚುಗೆಗೆ ಪಾತ್ರವಾಗಿವೆ. ರಕ್ತದಾನ ಹಾಗೂ ಗುಣಮಟ್ಟದ ನಾಟಕ ಪ್ರದರ್ಶನ ಸೇರಿದಂತೆ ಹತ್ತಾರು ಸಮಾಜಮುಖಿ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಎಂದು ಶ್ಲಾಘಿಸಿದರು.

ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಮಿಮ್ಸ್‌ನ ವೈದ್ಯರಾದ ಡಾ.ಮನೋಹರ್, ಡಾ.ರವಿಕುಮಾರ್ ಹಾಗೂ ನವೋದಯ ತರಬೇತಿ ಕೇಂದ್ರದ ಕಾರ್ಯದರ್ಶಿ ಎಚ್.ಆರ್.ಕನ್ನಿಕಾ ಅವರನ್ನು ಗಣ್ಯರ ಸಮ್ಮುಖದಲ್ಲಿ ಅಭಿನಯಿಸಲಾಯಿತು.

ಬಳಿಕ ಪ್ರದರ್ಶನಗೊಂಡ ಅಣ್ಣ ನೆನಪು ಸಾಕ್ಷ್ಯ ನಾಟಕವು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಹಲವರು ನಾಟಕಕ್ಕೆ ಪ್ರೋತ್ಸಾಹ ಧನ ನೀಡಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ ನಿರ್ದೇಶಕ ಡಾ.ವಿ.ನಾಗರಾಜ ಬೈರಿ, ಸೌತ್ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು, ರಾಜ್ಯಪಾಲ ಮಾದೇಗೌಡ, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶ್ ಗೌಡ, ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ಎ.ಸಿ.ರಮೇಶ್, ನೆಲದನಿ ಬಳಗ ಅಧ್ಯಕ್ಷ ಎಂ.ಸಿ.ಲಂಕೇಶ್, ಗೌರವಾಧ್ಯಕ್ಷೆ ರುಕ್ಮಿಣಿ, ಮುಖಂಡರಾದ ತಗ್ಗಹಳ್ಳಿ ವೆಂಕಟೇಶ್, ಡಾ.ಎಸ್.ನಾರಾಯಣ್, ಕನ್ನಡ ಸೇನೆ ಮಂಜುನಾಥ್, ಇನ್ಸ್ ಪೈರ್ ವಿನಯ್ ಕುಮಾರ್, ಎಂ.ಆರ್.ಮಂಜುನಾಥ್, ಮುತ್ತಗೆರೆ ಎನ್ ನಾಗೇಶ್, ಕೋಮಲ್ ಕುಮಾರ್ ಹಲವರು ಇದ್ದರು.