ವಿಶ್ವದ ಬೃಹತ್ ಪ್ರಜಾಪ್ರಭುತ್ವ ಹೊಂದಿರುವ ರಾಷ್ಟ್ರ ಭಾರತ

KannadaprabhaNewsNetwork | Published : Jan 26, 2024 1:51 AM

ಸಾರಾಂಶ

ಭಾರತದ ಸಂವಿಧಾನವು ದೇಶದ ಪ್ರತಿಯೊಬ್ಬ ಪ್ರಜೆಗೆ ಚುನಾವಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಲು ಮತ್ತು ಮತದಾನ ಮಾಡಲು ಅಗತ್ಯ ಸೌಲಭ್ಯ ಒದಗಿಸಿದ್ದು, ಅದರಂತೆ 18 ವರ್ಷ ತುಂಬಿದ ಪ್ರತಿಯೊಬ್ಬ ಪ್ರಜೆಯೂ ಸಹ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕಾದದ್ದು ಆ ಪ್ರಜೆಯ ಹಕ್ಕು ಮತ್ತು ಕರ್ತವ್ಯವಾಗಿರುತ್ತದೆ ಎಂದು ಮಾನ್ಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಬಿ. ಜಯಂತ ಕುಮಾರ್ ತಿಳಿಸಿದರು.

ನ್ಯಾ.ಬಿ.ಜಯಂತ್‌ ಕುಮಾರ್‌ ಅಭಿಮತ । ಗುಬ್ಬಿ ವೀರಣ್ಣ ಕ್ಷೇತ್ರದಲ್ಲಿ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆ

ಕನ್ನಡಪ್ರಭ ವಾರ್ತೆ ತುಮಕೂರು

ಭಾರತದ ಸಂವಿಧಾನವು ದೇಶದ ಪ್ರತಿಯೊಬ್ಬ ಪ್ರಜೆಗೆ ಚುನಾವಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಲು ಮತ್ತು ಮತದಾನ ಮಾಡಲು ಅಗತ್ಯ ಸೌಲಭ್ಯ ಒದಗಿಸಿದ್ದು, ಅದರಂತೆ 18 ವರ್ಷ ತುಂಬಿದ ಪ್ರತಿಯೊಬ್ಬ ಪ್ರಜೆಯೂ ಸಹ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕಾದದ್ದು ಆ ಪ್ರಜೆಯ ಹಕ್ಕು ಮತ್ತು ಕರ್ತವ್ಯವಾಗಿರುತ್ತದೆ ಎಂದು ಮಾನ್ಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಬಿ. ಜಯಂತ ಕುಮಾರ್ ತಿಳಿಸಿದರು.

ಭಾರತ ಚುನಾವಣಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ವತಿಯಿಂದ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಡಾ. ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತ ಚುನಾವಣಾ ಆಯೋಗವು 25-1-1950 ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ಇದರ ವಜ್ರ ಮಹೋತ್ಸವ ಅಂಗವಾಗಿ ರಾಷ್ಟ್ರೀಯ ಮತದಾರರ ದಿನವನ್ನಾಗಿ ಆಚರಿಸಲಾಗುತ್ತಿದೆ. ಅದರಂತೆ 25-1-2011 ರಿಂದ ಪ್ರತಿ ವರ್ಷ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಆಚರಿಸಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶುಭ ಕಲ್ಯಾಣ್ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಗೆ ಇಡೀ ವಿಶ್ವದಲ್ಲಿ ಮನ್ನಣೆ ಇದೆ. ಅದರಲ್ಲಿ ಪ್ರಮುಖವಾಗಿ ಭಾರತದ ಸಂವಿಧಾನ ವಿಶ್ವದಲ್ಲಿಯೇ ಶ್ರೇಷ್ಟ ಸಂವಿಧಾನವಾಗಿದೆ. ನಮ್ಮ ದೇಶದ ಭವಿಷ್ಯ ಯುವ ಜನತೆ ಕೈಯಲ್ಲಿ ಇದೆ. ಆದುದರಿಂದ ಯುವ ಜನತೆ ಚುನಾವಣೆಯಲ್ಲಿ ತಪ್ಪದೇ ಭಾಗವಹಿಸಿ ಮತದಾನ ಮಾಡಬೇಕು. ವೃದ್ಧರಿಗೆ ಮನೆಯಿಂದಲೇ ಚುನಾವಣೆಯಲ್ಲಿ ಮತ ಚಲಾಯಿಸಲು ಅವಕಾಶ ಮಾಡಿಕೊಡಲಾಗಿದೆ. ಛಿಗಿIಉIಐ ಅಪ್ಲಿಕೇಶನ್ ಮೂಲಕ ಭ್ರಷ್ಟಾಚಾರ, ಲಂಚಗಳ ಬಗ್ಗೆ ದೂರು ದಾಖಲೆ ಮಾಡಿದರೆ ಕೆಲವೇ ಕ್ಷಣಗಳಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

ಜಿಪಂ ಸಿಇಒ ಜಿ.ಪ್ರಭು ಮಾತನಾಡಿ, ಭಾರತದ ಚುನಾವಣಾ ಆಯೋಗವನ್ನು "ಸಂವಿಧಾನಾತ್ಮಕ ಸಂಸ್ಥೆ " ಎಂದು ಕರೆಯುತ್ತೇವೆ. ನಮ್ಮ ದೇಶದ ವ್ಯವಸ್ಥೆ ಬಗ್ಗೆ ನಮಗೆ ಹೆಮ್ಮೆ ಇರಬೇಕು. 14ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಆಚರಿಸುತಿದ್ದೇವೆ ಎಂದರು.

ಆತ್ಮವಿಶ್ವಾಸದಿಂದ ನಿಮ್ಮ ಭವ್ಯ ಭವಿಷ್ಯಕ್ಕಾಗಿ ಮತದಾನ ಮಾಡಿ, ಈ ವರ್ಷ "ಮತದಾನಕ್ಕಿಂತ ಇನ್ನೊಂದಿಲ್ಲ, ನಾನು ಖಚಿತವಾಗಿ ಮತದಾನ ಮಾಡುವೆ " ಎಂಬ ಘೋಷವಾಕ್ಯವಾಗಿದೆ. ನಮ್ಮ ದೇಶದ ಸದೃಢವಾದ ಮತದಾನ ವ್ಯವಸ್ಥೆಯನ್ನು ಸಾಮೂಹಿಕ ಮತದಾನದಲ್ಲಿ ನಾವು ಕಾಣಬಹುದು. ದೇಶದ ಎಲ್ಲಾ ಮತಗಳಿಗೂ ಒಂದೇ ಮೌಲ್ಯ ಇದೆ ಎಂದರು.

ಈ ಸಂದರ್ಭ ನೂತನವಾಗಿ ಸೇರ್ಪಡೆಗೊಂಡ ನೊಂದಾಯಿತ ಗುರುತಿನ ಚೀಟಿಗಳನ್ನು ವಿತರಣೆ ಮಾಡಲಾಯಿತು. ಜಿಲ್ಲಾ ಮಟ್ಟದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಜಿಲ್ಲಾಡಳಿತ ವತಿಯಿಂದ ಬಹುಮಾನಗಳನ್ನು ವಿದ್ಯಾರ್ಥಿಗಳಿಗೆ ನೀಡಿ ಪ್ರೋತ್ಸಾಹಿಸಲಾಯಿತು. ಉತ್ತಮ ಸೇವೆ ಸಲ್ಲಿಸಿರುವ ಶಿಕ್ಷಕರಿಗೆ, ಅಂಗನವಾಡಿ ಕಾರ್ಯಕರ್ತರಿಗೆ ಪ್ರಶಸ್ತಿ ಪ್ರಮಾಣ ಪತ್ರಗಳನ್ನು ನೀಡಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಶ್ರೀಮತಿ ನೂರುನ್ನೀಸ, ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ, ಉಪವಿಭಾಗಾಧಿಕಾರಿ ಗೌರವ್ ಕುಮಾರ್ ಶೆಟ್ಟಿ ಹಾಗೂ ಜಿಲ್ಲೆಯ ಪದಾಧಿಕಾರಿಗಳು, ಶಿಕ್ಷಕರು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಮತ್ತಿತರರು ಭಾಗವಹಿಸಿದ್ದರು.

ಸಂವಿಧಾನ ಜಾಗೃತಿ ಜಾಥಾ ಅಭಿಯಾನದಲ್ಲಿ ಪಾಲ್ಗೊಳ್ಳಿಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮನವಿ । ಸ್ತಬ್ಧಚಿತ್ರದ ಮೂಲಕ ಸಂವಿಧಾನ ಮಹತ್ವದ ಜಾಗೃತಿಕನ್ನಡಪ್ರಭ ವಾರ್ತೆ ತುಮಕೂರುಸಂವಿಧಾನದ ಮಹತ್ವದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಜಿಲ್ಲೆಯ ಎಲ್ಲ ನಗರ ಸ್ಥಳೀಯ ಸಂಸ್ಥೆ ಹಾಗೂ ಗ್ರಾಪಂಗಳಲ್ಲಿ ಇಂದಿನಿಂದ ಸಂವಿಧಾನ ಜಾಗೃತಿ ಜಾಥಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ಅಭಿಯಾನದಲ್ಲಿ ಎಲ್ಲರೂ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮನವಿ ಮಾಡಿದ್ದಾರೆ.ಸಂವಿಧಾನ ಜಾಗೃತಿ ಜಾಥಾ ಅಭಿಯಾನವನ್ನು ಸುಸೂತ್ರವಾಗಿ ನಡೆಸುವ ನಿಟ್ಟಿನಲ್ಲಿ ಪ್ರತಿ ಗ್ರಾಪಂಗೆ ತಾಲೂಕು ಮಟ್ಟದ ಅಧಿಕಾರಿಗಳನ್ನು ಹಾಗೂ ಎಲ್ಲ ತಾಲೂಕುಗಳಿಗೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನಿಯೋಜಿಸಲಾಗಿದೆ.ಜಿಲ್ಲೆಯಲ್ಲಿ 2 ಸ್ತಬ್ಧಚಿತ್ರ ವಾಹನದ ಮೂಲಕ ಸಂವಿಧಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲಾಗುವುದು. ನಿಗಧಿತ ದಿನಾಂಕದಂದು ನಗರ ಸ್ಥಳೀಯ ಸಂಸ್ಥೆ/ಗ್ರಾಪಂಗಳಲ್ಲಿ ಸಂಚರಿಸಿ ಜನಸಾಮಾನ್ಯರಿಗೆ ಸಂವಿಧಾನದ ಮಹತ್ವದ ಬಗ್ಗೆ ಜನ ಜಾಗೃತಿ ಮೂಡಿಸಲಿದೆ. ಸಂವಿಧಾನದ ಮೂಲ ತತ್ವಗಳಾದ ಸ್ವಾತಂತ್ರ, ಸಮಾನತೆ, ಅಖಂಡತೆ, ಏಕತೆ, ಸಾಮಾಜಿಕ ನ್ಯಾಯ ತತ್ವಗಳ ಬಗ್ಗೆ ಪ್ರಚಾರ ಮಾಡಲಿದೆ.ಸ್ತಬ್ಧಚಿತ್ರ 2 ವಾಹನಗಳಿಗೂ ಪ್ರತ್ಯೇಕ ಮಾರ್ಗನಕ್ಷೆ ಸಿದ್ಧಪಡಿಸಿ ದಿನಾಂಕವನ್ನು ನಿಗಧಿಪಡಿಸಲಾಗಿದೆ. ಮಾರ್ಗನಕ್ಷೆ ಪ್ರಕಾರ 1ನೇ ಸ್ತಬ್ಧಚಿತ್ರ ವಾಹನವು ಜನವರಿ 26 ರಿಂದ 31 ರವರೆಗೆ ತುಮಕೂರು ತಾಲೂಕು, ಫೆಬ್ರುವರಿ 1 ರಿಂದ 7ರವರೆಗೆ ಕುಣಿಗಲ್, ಫೆ. 8ರಿಂದ 12ರ ವರೆಗೆ ಗುಬ್ಬಿ, ಫೆ. 13ರಿಂದ 18ರ ವರೆಗೆ ತುರುವೇಕೆರೆ, ಫೆ.19 ರಿಂದ 23 ರವರೆಗೆ ತಿಪಟೂರು ತಾಲೂಕಿನಲ್ಲಿ ಹಾಗೂ 2ನೇ ಸ್ತಬ್ಧಚಿತ್ರ ವಾಹನವು ಜ. 26 ರಿಂದ 30 ರವರೆಗೆ ಚಿಕ್ಕನಾಯಕನಹಳ್ಳಿ, ಜನವರಿ 31ರಿಂದ ಫೆ.6ರ ವರೆಗೆ ಶಿರಾ, ಫೆ.7ರಿಂದ 10ರ ವರೆಗೆ ಕೊರಟಗೆರೆ, ಫೆ.11 ರಿಂದ 16ರ ವರೆಗೆ ಮಧುಗಿರಿ, ಫೆ.17 ರಿಂದ 23ರ ವರೆಗೆ ಪಾವಗಡ ತಾಲೂಕು ವ್ಯಾಪ್ತಿಯ ನಗರ ಸ್ಥಳೀಯ ಸಂಸ್ಥೆ, ಗ್ರಾಪಂಗಳಲ್ಲಿ ಸಂಚರಿಸಿ ಸಂವಿಧಾನ ಮಹತ್ವದ ಬಗ್ಗೆ ಅರಿವು ಮೂಡಿಸಲಿದೆ.ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು, ಕಲಾವಿದರು, ಸಂಘ-ಸಂಸ್ಥೆಗಳು, ಸಾರ್ವಜನಿಕರು ಒಟ್ಟಾಗಿ ಈ ಅಭಿಯಾನದಲ್ಲಿ ಪಾಲ್ಗೊಂಡು ವಿಶ್ವ ಶ್ರೇಷ್ಠ ಭಾರತ ಸಂವಿಧಾನದ ಆಶಯದಂತೆ ಭಾರತದ ಏಕತೆ, ಅಖಂಡತೆ ಬಗ್ಗೆ ಎಲ್ಲರಿಗೂ ಅರಿವು ಮೂಡಿಸೋಣ ಎಂದು ಅವರು ಮನವಿ ಮಾಡಿದ್ದಾರೆ.

ಶಿರಾ: 31 ರಿಂದ ಫೆ. 6 ರವರೆಗೆ ಸಂವಿಧಾನ ಜಾಗೃತಿ ಜಾಥಾ

ಪೂರ್ವಭಾವಿ ಸಭೆಯಲ್ಲಿ ತಹಸೀಲ್ದಾರ್‌ ದತ್ತಾತ್ರೆಯ ಮಾಹಿತಿ । ನೀಲನಕ್ಷೆ ಸಿದ್ಧಕನ್ನಡಪ್ರಭ ವಾರ್ತೆ ಶಿರಾಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮವನ್ನು ತಾಲೂಕು ಮಟ್ಟದಲ್ಲಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಜ.31 ರಿಂದ ಫೆ. 6 ರವರೆಗೆ ಜಾಥಾ ರಥಯಾತ್ರೆಯನ್ನು ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಹಸೀಲ್ದಾರ್ ದತ್ತಾತ್ರೆಯ ಹಾಗೂ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಅನಂತರಾಜು ತಿಳಿಸಿದರು.ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದರು. ಜ. 31 ರಂದು ಸಂವಿಧಾನ ಜಾಗೃತಿ ಜಾಥಾವು ಶಿರಾದಿಂದ ಹೊರಟು ಬುಕ್ಕಾಪಟ್ಟಣ, ರಾಮಲಿಂಗಾಪುರ, ಕುರುಬರಹಳ್ಳಿ, ನೇರಳಗುಡ್ಡ, ಹುಯಿಲ್ದೊರೆ, ದೊಡ್ಡ ಅಗ್ರಹಾರ ಗ್ರಾಪಂಗಳಿಗೆ ತೆರಳಲಿದೆ. ಫೆ. 1 ರಂದು ಗೋಪಾಲದೇವರಹಳ್ಳಿ, ಯಲದಬಾಗಿ, ಶೀಬಿ, ಶೀಬಿ ಅಗ್ರಹಾರ, ಕಳ್ಳಂಬೆಳ್ಳ, ಭೂವನಹಳ್ಳಿ, ಫೆ. 2ರಂದು ಲಕ್ಷ್ಮೀಸಾಗರ, ತಾವರೆಕೆರೆ, ಹುಣಸೆಹಳ್ಳಿ, ಹೊಸೂರು, ಗೌಡಗೆರೆ, ಬೇವಿನಹಳ್ಳಿ, ಫೆ. 3 ರಂದು ಚಂಗಾವರ, ದ್ವಾರನಕುಂಟೆ, ಹುಲಿಕುಂಟೆ, ತಡಕಲೂರು, ದೊಡ್ಡಬಾಣಗೆರೆ, ಬರಗೂರಿಗೆ ತೆರಳಲಿದೆ.ಫೆ. 4 ರಂದು ಹಂದಿಕುಂಟೆ, ಹೊಸಹಳ್ಳಿ, ನಾದೂರು, ಹೆಂದೊರೆ, ಬಂದಕುಂಟೆ, ಮೇಲುಕುಂಟೆಗೆ, ಫೆ. 5 ರಂದು ಕೊಟ್ಟ, ಮದಲೂರು, ಹೊನ್ನಗೊಂಡನಹಳ್ಳಿ, ಮಾಗೋಡು, ರತ್ನಸಂದ್ರ, ಯಲಿಯೂರುಗೆ ತಲುಪಲಿದೆ. ಫೆ. 6 ರಂದು ಚಿಕ್ಕನಹಳ್ಳಿ, ಹಾಲೇನಹಳ್ಳಿ, ತಾಳಗುಂದ, ಭೂಪಸಂದ್ರ, ತರೂರು, ಚಿನ್ನೇನಹಳ್ಳಿ ಗ್ರಾಮ ಪಂಚಾಯಿತಿಗೆ ತೆರಳಲಿದೆ ಎಂದು ತಿಳಿಸಿದರು.ಈ ಕಾರ್ಯಕ್ರಮಕ್ಕೆ ಪ್ರತಿಯೊಂದ ಗ್ರಾಮ ಪಂಚಾಯಿತಿಗೂ ಒಬ್ಬರು ನೋಡಲ್ ಅಧಿಕಾರಿಗಳು ಹಾಗೂ ಸಂಪನ್ಮೂಲ ವ್ಯಕ್ತಿಗಳನ್ನು ನೇಮಿಸಲಾಗಿದೆ ಎಂದರು. ಪೂರ್ವಭಾವಿ ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಯತೀಶ್‌ ಕುಮಾರ್, ಪೌರಾಯುಕ್ತ ರುದ್ರೇಶ್ ಸೇರಿದಂತೆ ಹಲವರು ಹಾಜರಿದ್ದರು.

Share this article