ಲಯನ್ಸ್ ಸೇವಾ ಸಂಸ್ಥೆಗೆ ದೇಶಾದ್ಯಂತ ಉತ್ತಮ ಹೆಸರು: ಮೆಲ್ವಿನ್ ಡಿಸೋಜ

KannadaprabhaNewsNetwork |  
Published : Dec 09, 2023, 01:15 AM IST
ಶುಕ್ರವಾರ ತ್ಯಾಗರಾಜ ರಸ್ತೆಯ ಲಯನ್ಸ್ ಸೇವಾ ಭವನದಲ್ಲಿ ಹರಿಹರಪುರ, ಬಾಳೆಹೊನ್ನೂರು, ನ.ರಾ.ಪುರ ಮೂರು ಲಯನ್ಸ್ ಕ್ಲಬ್‌ಗಳ ಸಂಗಮ ಕಾರ್ಯಕ್ರಮದಡಿ ಲಯನ್ಸ್ ಜಿಲ್ಲಾ ಗವರ್ನರ್ ಮೆಲ್ವಿನ್ ಡಿಸೋಜ ಅಧಿಕೃತ ಭೇಟಿ ನೀಡಿದ ಸಂದರ್ಭದಲ್ಲಿ ಲಯನ್ಸ್ ಅಧ್ಯಕ್ಷರು, ಪದಾಧಿಕಾರಿಗಳು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದರು | Kannada Prabha

ಸಾರಾಂಶ

ಲಯನ್ಸ್ ಸೇವಾ ಸಂಸ್ಥೆಗೆ ದೇಶಾದ್ಯಂತ ಉತ್ತಮ ಹೆಸರು: ಮೆಲ್ವಿನ್ ಡಿಸೋಜ

ಮೂರು ಲಯನ್ಸ್ ಕ್ಲಬ್‌ಗಳ ಸಂಗಮ ಕಾರ್ಯಕ್ರಮದಡಿ ಲಯನ್ಸ್ ಜಿಲ್ಲಾ ಗವರ್ನರ್‌ ಅಧಿಕೃತ ಭೇಟಿ

ಕನ್ನಡಪ್ರಭ ವಾರ್ತೆ, ಕೊಪ್ಪ

ದಕ್ಷಿಣ ಕನ್ನಡ, ಹಾಸನ, ಕೊಡಗು, ಚಿಕ್ಕಮಗಳೂರು ಈ ನಾಲ್ಕು ಕಂದಾಯ ಜಿಲ್ಲೆಗಳನ್ನೊಳಗೊಂಡ ಲಯನ್ಸ್ ಜಿಲ್ಲಾ 317ಡಿ ಸೇವಾ ಸಂಸ್ಥೆ ತಮ್ಮ ಸೇವಾ ಚಟುವಟಿಕೆಗಳಿಂದ ದೇಶಾದ್ಯಂತ ಉತ್ತಮ ಹೆಸರು ಗಳಿಸಿದೆ ಎಂದು ಲಯನ್ಸ್ ಜಿಲ್ಲಾ ಗವರ್ನರ್ ಮೆಲ್ವಿನ್ ಡಿಸೋಜ ಪಿಎಂಜೆಎಫ್ ಹೇಳಿದರು.

ಶುಕ್ರವಾರ ತ್ಯಾಗರಾಜ ರಸ್ತೆಯ ಲಯನ್ಸ್ ಸೇವಾ ಭವನದಲ್ಲಿ ಹರಿಹರಪುರ, ಬಾಳೆಹೊನ್ನೂರು, ನ.ರಾ.ಪುರ ಮೂರು ಲಯನ್ಸ್ ಕ್ಲಬ್‌ಗಳ ಸಂಗಮ ಕಾರ್ಯಕ್ರಮದಡಿ ಅಧಿಕೃತ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ಲಯನ್ಸ್ ಜಿಲ್ಲೆಯು 121 ಕ್ಲಬ್‌ಗಳನ್ನು ಹೊಂದಿದ್ದು 4650 ಸದಸ್ಯರಿದ್ದಾರೆ. ಸಮಾಜದಲ್ಲಿ ಮಹಿಳೆಯರಿಗೆ ಸಮಾನತೆ, ಗೌರವ ನೀಡುವ ಉದ್ದೇಶದಿಂದ ಪ್ರಸಕ್ತ ಸಾಲಿನಲ್ಲಿ ಹರಿಹರಪುರ, ಕೊಪ್ಪ ಲಯನ್ಸ್ ಸಂಸ್ಥೆಗಳಲ್ಲಿ ಮಹಿಳೆಯರನ್ನೇ ಪದಾಧಿಕಾರಿಗಳನ್ನಾಗಿಸಿದೆ. ಲಯನ್ಸ್ ಜಿಲ್ಲೆ 317ಡಿ ಯಿಂದ ಲಯನ್ಸ್ ಫೌಂಡೇಶನ್‌ಗೆ ಪ್ರಸ್ತುತ 1 ಕೋಟಿ ಹಣ ನೀಡಲಾಗಿದೆ. ಅಂತರಾಷ್ಟ್ರೀಯ ಲಯನ್ಸ್ ಇದಕ್ಕೂ ಹೆಚ್ಚಿನ ಪಟ್ಟು ಹಣ ಸೇವಾ ಕಾರ್ಯಗಳಿಗಾಗಿ ವಾಪಾಸು ನೀಡುತ್ತಿದೆ. ಕೊಪ್ಪ ಸೇರಿದಂತೆ ಹಲವೆಡೆ ಡಯಾಲಿಸಿಸ್ ಕೇಂದ್ರ, ಸಣ್ಣ ಮಕ್ಕಳ ಕ್ಯಾನ್ಸರ್ ತಪಾಸಣಾ ವಾಹನ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಮೊದಲ ಆದ್ಯತೆ ನೀಡಿ ಸೇವಾ ಚಟುವಟಿಕೆಗಳು ಲಯನ್ಸ್ ಹಮ್ಮಿಕೊಳ್ಳುತ್ತಿದೆ. ಈ ಬಾರಿ ಮಕ್ಕಳಲ್ಲಿ ಶಾಂತಿ ಬಗ್ಗೆ ಅರಿವು ಮೂಡಿಸಲು ಸುಮಾರು 200ಕ್ಕೂ ಹೆಚ್ಚು ಶಾಲೆಗಳಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹರಿಹರಪುರ, ಬಾಳೆಹೊನ್ನೂರು, ನ.ರಾ.ಪುರ ಲಯನ್ಸ್ ಕ್ಲಬ್ ಗಳಿಗೆ ಅಧಿಕೃತ ಭೇಟಿ ನೀಡಿದ ಸಂದರ್ಭದಲ್ಲಿ ಉತ್ತಮ ಸೇವಾ ಚಟುವಟಿಕೆಗಳು ನಡೆದಿರುವುದು ಗಮನಾರ್ಹ ಸಂಗತಿಯಾಗಿದ್ದು ಮೂರೂ ಕ್ಲಬ್‌ಗಳ ಅಧ್ಯಕ್ಷರು, ಪದಾಧಿಕಾರಿಗಳು ಸದಸ್ಯರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಹರಿಹರಪುರ ಲಯನ್ಸ್ ಅಧ್ಯಕ್ಷೆ ಪಲ್ಲವಿ ದೀಪಕ್, ಬಾಳೆಹೊನ್ನೂರು ಲಯನ್ಸ್ ಅಧ್ಯಕ್ಷ ಎಂ.ಡಿ.ಶಿವರಾಮ್, ಎನ್.ಆರ್.ಪುರ ಲಯನ್ಸ್ ಅಧ್ಯಕ್ಷ ರವಿಚಂದ್ರರವರು ತಮ್ಮ ಕ್ಲಬ್ ವ್ಯಾಪ್ತಿಯಲ್ಲಿ ಪ್ರಸ್ತುತ ವರ್ಷದಲ್ಲಿ ನಡೆದ ಸೇವಾ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು.

ಕೊಪ್ಪ ಬಸ್‌ನಿಲ್ದಾಣದಲ್ಲಿ ಒಂದು ದಿನದ ಬಾಣಂತಿ ಮಗು ಅನಾಥವಾಗಿ ಸಿಕ್ಕಿದ್ದು ಹರಿಹರಪುರ ಲಯನ್ಸ್ ಅಧ್ಯಕ್ಷೆ ಪಲ್ಲವಿ ಮಗುವನ್ನು ತಮ್ಮ ಮನೆಗೆ ಕರೆದೊಯ್ದು 3 ತಿಂಗಳ ಆರೈಕೆ ಮಾಡಿ ಮನೆಯ ವಿಳಾಸ ಪಡೆದು ಮನೆಯವರಿಗೆ ವಿಚಾರಮುಟ್ಟಿಸಿ ತಾಯಿ ಮಗುವನ್ನು ಅವರ ಕುಟುಂಬಕ್ಕೆ ಸೇರಿಸಿದ್ದಾರೆ. ಮಾನವೀಯತೆ ಈ ಕಾರ್ಯವನ್ನು ಶ್ಲಾಘನೀಯ ಎಂದು ಜಿಲ್ಲಾ ಗವರ್ನರ್ ಕೃತಜ್ಞತೆ ಸಲ್ಲಿಸಿದರು.

ಹರಿಹರಪುರ ಲಯನ್ಸ್ ಕಾರ್ಯದರ್ಶಿ ಅನುಷ, ಪ್ರಶಾಂತ್, ಖಜಾಂಚಿ ಅಮಿತಾ, ಜಗದೀಶ್, ಬಾಳೆಹೊನ್ನೂರು ಲಯನ್ಸ್ ಕಾರ್ಯದರ್ಶಿ ವಿಂಲಿಯಂ ಡಯಾಸ್, ಖಜಾಂಚಿ ಕೆ.ನಾರಾಯಣ ಶೆಟ್ಟಿ, ನ.ರಾ.ಪುರ ಲಯನ್ಸ್ ಕಾರ್ಯದರ್ಶಿ ಕೃಷ್ಣಯ್ಯ, ಖಜಾಂಚಿ ಕೆ.ಜೆ.ರಾಮರೆಡ್ಡಿ, ತಾರಾನಾಥ್, ಕೆ.ಕೆ. ಭಾಸ್ಕರ್ ಸುದ್ಧಿಗೋಷ್ಠಿಯಲ್ಲಿದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ