ಪ್ರಕೃತಿ ವಿಕೋಪ: ಜನರ ರಕ್ಷಣೆ ಪ್ರಾತ್ಯಕ್ಷಿಕೆ

KannadaprabhaNewsNetwork |  
Published : Jul 24, 2024, 12:23 AM IST
ಹೊನ್ನಾಳಿ ಫೋಟೋ 23ಎಚ್.ಎಲ್.ಐ3ಎ. ಎನ್.ಡಿ.ಆರ್.ಎಫ್, ತಂಡದವರು ನದಿಯಲ್ಲಿ ಬೋಟ್ ಮೂಲಕ ತೆರಳಿ ಜೀವ ರಕ್ಷಣೆಯ ಅಣಕು ಪ್ರದರ್ಶನ ನಡೆಸಿದರು.  | Kannada Prabha

ಸಾರಾಂಶ

ನೆರೆಹಾವಳಿ ಹಾಗೂ ಪ್ರಕೃತಿ ವಿಕೋಪ ಪರಿಸ್ಥಿತಿಗಳು ಹೆಚ್ಚಾಗುತ್ತಿರುವ ಹಿನ್ನೆಲೆ ನೆರೆಗೆ ಸಿಲುಕಿದ ಜನರನ್ನು ರಕ್ಷಿಸುವ, ಅವರನ್ನು ರಕ್ಷಣೆ ಮಾಡಿ ಅವರ ಜೀವವನ್ನು ರಕ್ಷಿಸಬೇಕೆಂಬುದನ್ನು ಸಾರ್ವಜನಿಕರ ಸಮ್ಮುಖ ಎನ್‌ಡಿಆರ್‌ಎಫ್‌ ತಂಡದವರು ದಾವಣಗೆರೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ, ಜಿಪಂ ಸಿಇಒ ಸುರೇಶ್ ಇಟ್ನಾಳ್ ಹಾಗೂ ತಾಲೂಕುಮಟ್ಟದ ಅಧಿಕಾರಿಗಳ ಸಮ್ಮುಖ ಹೊನ್ನಾಳಿ ಪಟ್ಟಣದ ರಾಘವೇಂದ್ರ ಸ್ವಾಮಿ ಮಠದ ಸಮೀಪದ ತುಂಗಭದ್ರಾ ನದಿಯಲ್ಲಿ ಮಂಗಳವಾರ ಅಣಕು ಪ್ರದರ್ಶನ ಮಾಡಿದರು.

- ಎನ್‌ಡಿಆರ್‌ಎಫ್‌ ತಂಡದಿಂದ ತುಂಗಾನದಿಯಲ್ಲಿ ಸಾರ್ವಜನಿಕರಿಗೆ ಅಣಕು ಪ್ರದರ್ಶನ

- - - ಕನ್ನಡಪ್ರಭ ವಾರ್ತೆ ಹೊನ್ನಾಳಿ

ನೆರೆಹಾವಳಿ ಹಾಗೂ ಪ್ರಕೃತಿ ವಿಕೋಪ ಪರಿಸ್ಥಿತಿಗಳು ಹೆಚ್ಚಾಗುತ್ತಿರುವ ಹಿನ್ನೆಲೆ ನೆರೆಗೆ ಸಿಲುಕಿದ ಜನರನ್ನು ರಕ್ಷಿಸುವ, ಅವರನ್ನು ರಕ್ಷಣೆ ಮಾಡಿ ಅವರ ಜೀವವನ್ನು ರಕ್ಷಿಸಬೇಕೆಂಬುದನ್ನು ಸಾರ್ವಜನಿಕರ ಸಮ್ಮುಖ ಎನ್‌ಡಿಆರ್‌ಎಫ್‌ ತಂಡದವರು ದಾವಣಗೆರೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ, ಜಿಪಂ ಸಿಇಒ ಸುರೇಶ್ ಇಟ್ನಾಳ್ ಹಾಗೂ ತಾಲೂಕುಮಟ್ಟದ ಅಧಿಕಾರಿಗಳ ಸಮ್ಮುಖ ಪಟ್ಟಣದ ರಾಘವೇಂದ್ರ ಸ್ವಾಮಿ ಮಠದ ಸಮೀಪದ ತುಂಗಭದ್ರಾ ನದಿಯಲ್ಲಿ ಮಂಗಳವಾರ ಅಣಕು ಪ್ರದರ್ಶನ ಮಾಡಿದರು.

ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಮಾತನಾಡಿ, ದಾವಣಗೆರೆ ಎನ್‌ಡಿಆರ್‌ಎಫ್ ತಂಡ, ರಕ್ಷಣಾ ಪರಿಕರಣಗಳ ಪೂರ್ವತಯಾರಿ ಮಾಡಿಕೊಂಡು ನದಿಯಲ್ಲಿ ಪ್ರಾತ್ಯಕ್ಷತೆ ಮಾಡಿ ತೋರಿಸಿದರು. ಪ್ರಕೃತಿ ವಿಕೋಪಗಳನ್ನು ತಡೆಯಲು ಅಸಾಧ್ಯವಾದರೂ ಅವುಗಳ ಬಗ್ಗೆ ಅರಿವು ಇದ್ದರೆ, ಸಾರ್ವಜನಿಕರ ಜೀವ ಹಾಗೂ ಆಸ್ತಿ ಹಾನಿ ತಡೆಯಬಹುದು ಎಂದು ಹೇಳಿದರು.

ಎನ್‌ಡಿಆರ್‌ಎಫ್ ಡೆಪ್ಯೂಟಿ ಕಮಾಂಡೆಂಟ್ ಹೇಮಕುಮಾರ್ ಮಾತನಾಡಿದರು. ಜಿಪಂ ಸಿಇಒ ಸುರೇಶ್ ಇಟ್ನಾಳ್, ಉಪವಿಭಾಗಾಧಿಕಾರಿ ಅಭಿಷೇಕ್ ತಹಸೀಲ್ದಾರ್ ಪಟ್ಟರಾಜ ಗೌಡ, ನ್ಯಾಮತಿ ತಹಸೀಲ್ದಾರ್ ಗೋವಿಂದಪ್ಪ, ಪಿಎಸ್‌ಐ ತಿಪ್ಪೇಸ್ವಾಮಿ, ನ್ಯಾಮತಿ ಸಿಪಿಐ ರವಿ, ಎನ್‌ಡಿಆರ್‌ಎಫ್‌ ಹೇಮಕುಮಾರ್, ಎಸ್.ಐ. ವೆಂಕಟರಾಯ್ ನಾಯಕ, ಡಿಎಚ್ಒ ಷಣ್ಮುಖಪ್ಪ, ಪುರಸಭೆ ಮುಖ್ಯಾಧಿಕಾರಿ ಟಿ.ಲೀಲಾವತಿ, ಅವಳಿ ತಾಲೂಕಿನ ಅಧಿಕಾರಿಗಳು ಹಾಜರಿದ್ದರು.

- - - -23ಎಚ್.ಎಲ್.ಐ3:

ಹೊನ್ನಾಳಿ ರಾಘವೇಂದ್ರ ಸ್ವಾಮಿ ಮಠ ಸಮೀಪದ ತುಂಗಭದ್ರಾ ನದಿಯಲ್ಲಿ ಎನ್‌ಡಿಆರ್‌ಎಫ್‌ ತಂಡ ವತಿಯಿಂದ ಪ್ರವಾಹ ಸಂದರ್ಭ ಜೀವ ರಕ್ಷಣೆ ಬಗ್ಗೆ ಅಣಕು ಪ್ರದರ್ಶನ ಮಾಡಲಾಯಿತು.

-23ಎಚ್.ಎಲ್.ಐ3ಎ.:

ಎನ್.ಡಿ.ಆರ್.ಎಫ್, ತಂಡದವರು ನದಿಯಲ್ಲಿ ಬೋಟ್ ಮೂಲಕ ತೆರಳಿ ಜೀವ ರಕ್ಷಣೆಯ ಅಣಕು ಪ್ರದರ್ಶನ ನಡೆಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ