ಯಲ್ಲಾಪುರದಲ್ಲಿ ಪ್ರಾಕೃತಿಕ ತಾಣಗಳು ಹೇರಳ: ಪ್ರಮೋದ ಹೆಗಡೆ

KannadaprabhaNewsNetwork | Published : Sep 25, 2024 12:57 AM

ಸಾರಾಂಶ

ಯಲ್ಲಾಪುರದಲ್ಲಿ ಪ್ರಕೃತಿದತ್ತವಾದ ಸುಂದರ ತಾಣಗಳು ಹೇರಳವಾಗಿವೆ. ಜಲಪಾತಗಳ ತವರೂರು ಇದಾಗಿದೆ. ಇವುಗಳನ್ನು ಅಭಿವೃದ್ಧಿಪಡಿಸುವ ಮೂಲಕ ಜಿಲ್ಲೆಯ ಅಭಿವೃದ್ಧಿಯೂ ಸಾಧ್ಯ.

ಯಲ್ಲಾಪುರ: ಜಿಲ್ಲೆಗೆ ಯಲ್ಲಾಪುರ ಕೇಂದ್ರ ಸ್ಥಾನವಾಗುವ ಎಲ್ಲ ಲಕ್ಷಣವಿದೆ. ಕೈಗಾ, ಅಂಕೋಲಾ, ಹುಬ್ಬಳ್ಳಿ, ರಾಷ್ಟ್ರೀಯ ಹೆದ್ದಾರಿ ಮತ್ತು ರೈಲ್ವೆ ಮಾರ್ಗ ಯಲ್ಲಾಪುರದ ಮೂಲಕ ಹಾದುಹೋಗಲಿದೆ. ಅಲ್ಲದೇ, ರಾಜ್ಯದಲ್ಲೇ ಅತ್ಯುತ್ತಮ ಪ್ರವಾಸಿ ತಾಣಗಳನ್ನೂ ಹೊಂದಿದ ಜಿಲ್ಲೆ ನಮ್ಮದಾಗಿದೆ ಎಂದು ಯು.ಕೆ. ಸೌಹಾರ್ದ ಸಹಕಾರಿ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ ತಿಳಿಸಿದರು.

ಪಟ್ಟಣದ ಅಡಿಕೆ ಭವನದಲ್ಲಿ ಸೆ. ೨೩ರಂದು ವಿಕಾಸ ಅರ್ಬನ್ ಕೋ ಆಪರೇಟೀವ್ ಬ್ಯಾಂಕಿನ ೨೭ನೇ ವಾರ್ಷಿಕ ಸರ್ವ ಸಾಧಾರಣ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.ಯಲ್ಲಾಪುರದಲ್ಲಿ ಪ್ರಕೃತಿದತ್ತವಾದ ಸುಂದರ ತಾಣಗಳು ಹೇರಳವಾಗಿವೆ. ಜಲಪಾತಗಳ ತವರೂರು ಇದಾಗಿದೆ. ಇವುಗಳನ್ನು ಅಭಿವೃದ್ಧಿಪಡಿಸುವ ಮೂಲಕ ಜಿಲ್ಲೆಯ ಅಭಿವೃದ್ಧಿಯೂ ಸಾಧ್ಯ. ಇಂದು ಎಲ್ಲೆಡೆ ಯುವಕರು ದೇಶ- ವಿದೇಶಗಳ ಮಹಾನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಇದರಿಂದ ಹಳ್ಳಿಯ ಸ್ಥಿತಿ ಗಂಭೀರವಾಗಲಿದೆ. ಆದರೂ, ಯಲ್ಲಾಪುರದಲ್ಲಿ ಕೆಲವು ಯುವಕರನ್ನು ಉದ್ಯೋಗದಲ್ಲಿ ಕಾಣಬಹುದು ಎಂದರು.ಬ್ಯಾಂಕಿನ ಅಧ್ಯಕ್ಷ ಮುರಳಿ ಹೆಗಡೆ ಮಾತನಾಡಿ, ನಮ್ಮ ಷೇರುದಾರರು ತಮ್ಮ ಡಿವಿಡೆಂಡನ್ನು ೩ ವರ್ಷದೊಳಗಾಗಿ ಪಡೆಯದಿದ್ದರೆ, ಬ್ಯಾಂಕಿನ ಕಾನೂನಿನಂತೆ ಆ ಡಿವಿಡೆಂಡ್ ಕಾಯ್ದಿಟ್ಟ ನಿಧಿಗೆ ಸೇರ್ಪಡೆಯಾಗುತ್ತದೆ. ಅಲ್ಲದೇ, ಕಡ್ಡಾಯವಾಗಿ ತಮ್ಮ ಠೇವುದಾರರು ನಾಮನಿರ್ದೇಶನ ಮಾಡಲೇಬೇಕು ಎಂದರು. ಈ ಸಂದರ್ಭದಲ್ಲಿ ಬ್ಯಾಂಕಿನ ಸದಸ್ಯರಾದ ಪದ್ಮರಾಜ ಉಪಾಧ್ಯಾಯ, ಪಿ.ಜಿ. ಹೆಗಡೆ, ಕೃಷ್ಣಮೂರ್ತಿ ಹೆಗಡೆ, ನಾರಾಯಣ ಭಟ್ಟ, ಮಧುಕೇಶ್ವರ ಭಟ್ಟ, ರಾಮಪ್ಪ ಜಿ.ಕೆ. ಮುಂತಾದವರು ಪ್ರಶ್ನೋತ್ತರದಲ್ಲಿ ಭಾಗವಹಿಸಿದ್ದರು. ವ್ಯವಸ್ಥಾಪಕ ನಿರ್ದೇಶಕ ಉಮೇಶ ಭಾಗ್ವತ ಸ್ವಾಗತಿಸಿ, ನಿರ್ವಹಿಸಿದರು. ವ್ಯವಸ್ಥಾಪಕ ನರಸಿಂಹ ಹೆಬ್ಬಾರ ವರದಿ ವಾಚಿಸಿದರು. ಉಪಾಧ್ಯಕ್ಷೆ ಅಪರ್ಣಾ ಘಟ್ಟಿ ವಂದಿಸಿದರು. ಹಿರಿಯ ಸಹಕಾರಿಗಳಾದ ಡಿ.ಶಂಕರ ಭಟ್ಟ, ನಿರ್ದೇಶಕರಾದ ಗೋಪಾಲಕೃಷ್ಣ ಭಟ್ಟ, ನರಸಿಂಹ ಭಟ್ಟ, ಪ್ರವೀಣ ಭಟ್ಟ, ಮಹಾಬಲೇಶ್ವರ ಭಟ್ಟ, ಪಕೀರಪ್ಪ ಗುಲ್ಯಾನವರ, ನಾಗೇಶ ದೇವಳಿ, ಮಾರುತಿ ಭೋವಿ, ಮಾಲತೇಶ ಗೌಳಿ, ರಾಜೇಂದ್ರ ಬದ್ದಿ, ಲೋಕೇಶ ಗಿಡ್ಡನ್, ಸುಬ್ರಾಯ ಭಾಗ್ವತ, ಗಣೇಶ ಹೆಗಡೆ, ಬಸಯ್ಯ ನಡುವಿನಮನಿ, ಮತ್ತಿತರರು ಉಪಸ್ಥಿತರಿದ್ದರು.

Share this article