ಪ್ರಕೃತಿ ಅಗತ್ಯಗಳನ್ನ ಪೂರೈಸುವುದು, ದುರಾಸೆಗಳನ್ನಲ್ಲ

KannadaprabhaNewsNetwork |  
Published : Jun 07, 2026, 03:00 AM IST
ವಿಜಯಪುರ | Kannada Prabha

ಸಾರಾಂಶ

ಪ್ರಕೃತಿ ಪ್ರತಿಯೊಂದು ಜೀವರಾಶಿಯ ಆಗರವಾಗಿದ್ದು, ಪ್ರಕೃತಿ ಪ್ರತಿಯೊಬ್ಬ ಮನುಷ್ಯನ ಅಗತ್ಯಗಳನ್ನು ಪೂರೈಸುತ್ತದೆಯೇ ಹೊರತು ಆತನ ದುರಾಸೆಯಗಳನ್ನಲ್ಲ ಅನ್ನುವುದನ್ನು ಮೊದಲು ನಾವೆಲ್ಲರೂ ತಿಳಿದುಕೊಳ್ಳಬೇಕು ಎಂದು ರೈತ ಭಾರತ ಪಕ್ಷದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಕೆಂಗನಾಳ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಪ್ರಕೃತಿ ಪ್ರತಿಯೊಂದು ಜೀವರಾಶಿಯ ಆಗರವಾಗಿದ್ದು, ಪ್ರಕೃತಿ ಪ್ರತಿಯೊಬ್ಬ ಮನುಷ್ಯನ ಅಗತ್ಯಗಳನ್ನು ಪೂರೈಸುತ್ತದೆಯೇ ಹೊರತು ಆತನ ದುರಾಸೆಯಗಳನ್ನಲ್ಲ ಅನ್ನುವುದನ್ನು ಮೊದಲು ನಾವೆಲ್ಲರೂ ತಿಳಿದುಕೊಳ್ಳಬೇಕು ಎಂದು ರೈತ ಭಾರತ ಪಕ್ಷದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಕೆಂಗನಾಳ ಹೇಳಿದರು.

ನಗರದ ರೈತ ಭಾರತ ಪಕ್ಷದ ಕಚೇರಿಯಲ್ಲಿ ಪರಿಸರ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಕೃತಿಯಲ್ಲಿರುವ ಹಸಿರು ಸಸ್ಯ ಸಮೂಹ ಪ್ರತಿಯೊಂದು ಜೀವರಕ್ಷಕವಾಗಿದೆ. ಹೀಗಾಗಿ ಕೇವಲ ಜೂನ್‌ 5 ಬಂದಾಗ ಮಾತ್ರ ಪರಿಸರ ದಿನ ಆಚರಿಸಿದೇ, ವರ್ಷಪೂರ್ತಿ ಪರಿಸರ ಕಾಳಜಿ ಮಾಡೋಣ. ಇಂದು ನೆಟ್ಟ ಸಸಿಗಳು ಹೆಮ್ಮರವಾಗಿ ಬೆಳೆಸುವಂತ ಜವಾಬ್ದಾರಿಯನ್ನು ನಾವೆಲ್ಲರೂ ಹೊರಬೇಕು ಎಂದು ತಿಳಿಸಿದರು.ನಾವು ಇಂದು ಪರಿಸರ ಉಳಿಸಿದರೇ ಪರಿಸರ ನಮ್ಮ ಮುಂದಿನ ತಲೆಮಾರನ್ನು ಉಳಿಸುತ್ತದೆ. ಹೀಗಾಗಿ ಪರಿಸರ ಸಂರಕ್ಷಣೆ ನಮ್ಮೆಲ್ಲರ ಸಾಮೂಹಿಕ ಹೊಣೆಯಾಗಬೇಕಾಗಿದೆ. ಪರಿಸರ ಸಂರಕ್ಷಿಸುವ ಮೂಲಕ ಮುಂದಿನ ತಲೆಮಾರಿಗೆ ಉತ್ತಮ ಗಾಳಿ ಬಿಟ್ಟುಹೋಗಬೇಕಾಗಿದೆ. ಈ ಪರಿಸರ ದಿನದಂದು ಪ್ರತಿಯೊಬ್ಬರು ಕನಿಷ್ಠ ಒಂದು ಗಿಡವನ್ನಾದರೂ ನೆಟ್ಟು ಭೂಮಿಯನ್ನು ಹಸಿರಾಗಿಸಬೇಕಾಗಿದ್ದು, ಮನೆಗೆ ಕನಿಷ್ಠ ಒಂದು ಸಸಿಯನ್ನಾದರೂ ನೆಟ್ಟು ಮರವನ್ನಾಗಿಸುವ ಪ್ರಯತ್ನ ಮಾಡೋಣ ಎಂದು ಮನವಿ ಮಾಡಿದರು.ಹರಕಾರಿ ಬಡಾವಣೆಯ ಶಿವಾಲಯ ಗಾರ್ಡನ್‌ನಲ್ಲಿ ನಿತ್ಯ ಕೆಲಸ ಮಾಡುತ್ತಿರುವ ಈರಪ್ಪ ನಾಶಿ ಹಾಗೂ ವರುಣ ನಗರದ ಗಾರ್ಡನ್‌ನಲ್ಲಿ ಗಿಡಗಳಿಗೆ ನೀರುಣಿಸುತ್ತಿರುವ ವಿಜಯಪುರ ಮಹಾನಗರ ಪಾಲಿಕೆಯ ನಿವೃತ್ತ ವರ್ಕ್ ಇನ್‌ಸ್ಪೆಕ್ಟರ್‌ ಕೇಸು ಬಿಕ್ಕು ನಾಯಕ್ ಅವರಿಗೆ ವಿಶೇಷವಾಗಿ ಸನ್ಮಾನಿಸುವ ಮೂಲಕ ಅರ್ಥಪೂರ್ಣ ವಿಶ್ವ ಪರಿಸರ ದಿನ ಆಚರಿಸಿದರು.ಗುತ್ತಿಗೆದಾರ ಶಿವು ಉಪ್ಪಲದಿನ್ನಿ, ವಕೀಲರಾದ ಎನ್.ಎಂ.ಕಲ್ಯಾಣಿ ಹಾಗೂ ಬಿ.ಸಿ.ಕಾಳಗಿ ಉಪಸ್ಥಿತರಿದ್ದರು.ಪರಿಸರ ನಮ್ಮ ಬದುಕಿನ ಅವಿಭಾಜ್ಯವಾಗಿದ್ದಲ್ಲದೇ ಪ್ರಕೃತಿಯಲ್ಲಿನ ಸರ್ವ ಜೀವರಾಶಿಗಳಿಗೂ ಆಹಾರ, ಆಶ್ರಯ ಸೇರಿದಂತೆ ಜೀವಾಧಾರ ಒದಗಿಸುತ್ತದೆ. ಹೀಗಾಗಿ ಪರಿಸರದ ಕುರಿತು ನಿತ್ಯ ಚಿಂತನೆಯ ಅಗತ್ಯವಿರುವುದರಿಂದ ಪರಿಸರ ಸಂರಕ್ಷಣೆಯ ಮನೋಭಾವನೆಯನ್ನು ಪ್ರತಿಯೊಬ್ಬರ ಜೀವನಶೈಲಿಯ ಭಾಗವಾಗಬೇಕು.

-ಮಲ್ಲಿಕಾರ್ಜುನ ಕೆಂಗನಾಳ, ರೈತ ಭಾರತ ಪಕ್ಷದ ರಾಜ್ಯಾಧ್ಯಕ್ಷರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನದಿಗೆ ನೀರು ಬರಲಿಲ್ಲ; ಕಬ್ಬಿನ ಬಿಲ್‌ ಪಾವತಿ ಆಗಿಲ್ಲ
30ರಿಂದ ಮನೆ ಮನೆಗೆ ಭೇಟಿ, ಮಾಹಿತಿ ಸಂಗ್ರಹಣೆ: ಡಿಸಿ