ಮೆಸ್ಕಾಂ ಸಿಬ್ಬಂದಿ ಮಹತ್ವ ಸಾರುವ ನವರಾತ್ರಿ ವೇಷ!

KannadaprabhaNewsNetwork |  
Published : Oct 08, 2024, 01:13 AM IST
32 | Kannada Prabha

ಸಾರಾಂಶ

ಮೆಸ್ಕಾಂ ಸಿಬ್ಬಂದಿ ನಮಗಾಗಿ ವಿದ್ಯುತ್ ಕಂಬ ಏರಿದರೆ, ಕೆಳಗೆ ಬರುತ್ತಾರೆಂಬ ವಿಶ್ವಾಸವಿಲ್ಲ. ಹೀಗಾಗಿ ಮೆಸ್ಕಾಂನವರನ್ನು ನಾವು ಎಂದೂ ಕಡೆಗೆಣಿಸಬಾರದು ನಮ್ಮ ಮಿತ್ರರಂತೆ ಕಾಣಬೇಕು’ ಎಂಬುದನ್ನು ಅಳದಂಗಡಿಯ ಶ್ರೀಧರ ನವರಾತ್ರಿ ವೇಷದ ಮೂಲಕ ಅರಳು ಹುರಿದಂತೆ ವಿವರಿಸುತ್ತಿದ್ದಾನೆ. ವಿಲಕ್ಷಣವಾಗಿ ಏನೇನೋ ಮಾತನಾಡಿ ಹೋಗುವ ಕೆಲ ವೇಷಧಾರಿಗಳಿಗಿಂತ ಈತ ಸಮಾಜಕ್ಕೆ ಹೊಸತನ್ನು ನೀಡಿ ಪ್ರಶಂಸೆಗೆ ಪಾತ್ರನಾಗಿದ್ದಾನೆ.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ನವರಾತ್ರಿ ಬಂತೆಂದರೆ, ವಿವಿಧ ವೇಷಗಳು ಪೇಟೆ, ಹಳ್ಳಿಯಲ್ಲಿ ಕಾಣಸಿಗುತ್ತವೆ. ಹುಲಿ- ಸಿಂಹ ಕುಣಿತಗಳು ಒಂದೆಡೆಯಾದರೆ, ಮದ್ದು ಕೊಡುವ ಪಂಡಿತ, ಪೇಪರ್ ಮಾರುವವ, ಮಕ್ಕಳನ್ನು ಆಟವಾಡಿಸುವ ಹೀಗೆ ಜನ ಜೀವನದಲ್ಲಿ ಹಾಸುಹೊಕ್ಕಾಗಿರುವ ವಿವಿಧ ವೃತ್ತಿಗಳ ವೇಷಗಳು ಹೊರಗೆ ಬರುತ್ತವೆ.

ಇಲ್ಲೊಬ್ಬ ಯುವಕ ತನ್ನ ವಿಶಿಷ್ಟ ಮಾತಿನಿಂದಾಗಿ‌ ಮತ್ತು ಸಂದೇಶದಿಂದಾಗಿ ಎಲ್ಲರ ಮೆಚ್ಚುಗೆ ಗಳಿಸಿದ್ದಾನೆ. ಈತನ ಹೊಸ ವಿಧಾನಕ್ಕೆ ಎಲ್ಲರೂ ಮಾರುಹೋಗಿದ್ದಾರೆ.

ಒಂದು ಕೈಯಲ್ಲಿ ವಿದ್ಯುತ್ ತಂತಿಯ ಸುರುಳಿ, ಇನ್ನೊಂದು ಕೈಯಲ್ಲಿ ಕಟ್ಟಿಂಗ್‌ಪ್ಲೇಯರ್ ಹಿಡಿದುಕೊಂಡು, ವೇಷಧಾರಿಯಾಗಿ ಮನೆ ಮನೆಗೆ ಹೋಗಿ, ‘ಅಡುಗೆ ಮಾಡುವಾಗ, ಟಿ.ವಿ.ಧಾರಾವಾಹಿ ನೋಡುವಾಗ ಅಚಾನಕ್ ಆಗಿ ವಿದ್ಯುತ್ ಹೋಗುತ್ತದೆ. ಈ ಸಂದರ್ಭ ಮೆಸ್ಕಾಂ ಸಿಬ್ಬಂದಿಗೆ ಬಯ್ಯುವುದು ತರವಲ್ಲ. ಹಗಲು- ರಾತ್ರಿ ದುಡಿದು ನಮಗೆಲ್ಲ ನಿರಾತಂಕವಾಗಿ ಬೆಳಕಿನ ವ್ಯವಸ್ಥೆ ಮಾಡುವ ಅವರನ್ನು ದೂಷಿಸುವುದನ್ನು ಬಿಡಬೇಕು. ದೇಶದ ಗಡಿಕಾಯುವ ಯೋಧರನ್ನು ನಾವು ಹೇಗೆ ಗೌರವಿಸಿ, ಸಮ್ಮಾನಿಸುತ್ತೇವೆಯೋ ಹಾಗೇ ಲೈನ್ ಮನ್‌ಗಳನ್ನು ಗೌರವಿಸಬೇಕು. ಅವರಿಗೂ ಜೀವನ, ಸಂಸಾರವೆಂಬುದು ಇದೆ. ಅವರು ನಮಗಾಗಿ ವಿದ್ಯುತ್ ಕಂಬ ಏರಿದರೆ, ಕೆಳಗೆ ಬರುತ್ತಾರೆಂಬ ವಿಶ್ವಾಸವಿಲ್ಲ. ಹೀಗಾಗಿ ಮೆಸ್ಕಾಂನವರನ್ನು ನಾವು ಎಂದೂ ಕಡೆಗೆಣಿಸಬಾರದು ನಮ್ಮ ಮಿತ್ರರಂತೆ ಕಾಣಬೇಕು’ ಎಂಬುದನ್ನು ಅರಳು ಹುರಿದಂತೆ ವಿವರಿಸುತ್ತಿದ್ದಾನೆ.

ವಿಲಕ್ಷಣವಾಗಿ ಏನೇನೋ ಮಾತನಾಡಿ ಹೋಗುವ ಕೆಲ ವೇಷಧಾರಿಗಳಿಗಿಂತ ಅಳದಂಗಡಿಯ ಶ್ರೀಧರ ಸಮಾಜಕ್ಕೆ ಹೊಸತನ್ನು ನೀಡಿ ಪ್ರಶಂಸೆಗೆ ಪಾತ್ರನಾಗಿದ್ದಾನೆ.

ಉಲ್ಲಂಜೆ: 3000 ಭಕ್ತರಿಗೆ ಶೇಷ ವಸ್ತ್ರದಾನ

ಮೂಲ್ಕಿ: ಕಟೀಲು ಸಮೀಪದ ಉಲ್ಲಂಜೆಯ ಶ್ರೀ ಕ್ಷೇತ್ರ ಕೊರಗಜ್ಜ, ಮಂತ್ರದೇವತಾ , ಚಾಮುಂಡೇಶ್ವರೀ, ಗುಳಿಗ, ಭದ್ರಕಾಳಿ ಸನ್ನಿಧಿಯಲ್ಲಿ ನವರಾತ್ರಿ ಮಹೋತ್ಸವದ ಐದನೇ ದಿನದಂದು ಲಲಿತಾ ಪಂಚಮಿಯ ಪ್ರಯುಕ್ತ ಶೇಷವಸ್ತ್ರದಾನ ನಡೆಯಿತು.ಬೆಳಗ್ಗೆ ಸೀಯಾಳಾಭಿಷೇಕ, ಮಹಾ ಪೂಜೆ ನಡದು ಬಳಿಕ ಸುಮಾರು 3000 ಮಂದಿ ಮಹಿಳೆಯರಿಗೆ ಶೇಷ ವಸ್ತ್ರ ದಾನ ಮಾಡಲಾಯಿತು.ಕ್ಷೇತ್ರದ ಧರ್ಮದರ್ಶಿ ಹರೀಶ್‌ ಪೂಜಾರಿ, ಪ್ರಕಾಶ್‌ ಆಚಾರ್ಯ, ಸಮಿತಿ ಪದಾದಿಕಾರಿಗಳು ಇದ್ದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ