ನವರಾತ್ರಿ: ಶ್ರೀಶಿವಶೈಲದಲ್ಲಿ ಮಾಜಿ ಸಚಿವ ಜಿ.ಟಿ.ದೇವೇಗೌಡರಿಂದ ಸುದರ್ಶನ ಹೋಮ

KannadaprabhaNewsNetwork |  
Published : Oct 18, 2026, 02:45 AM IST
14ಕೆಎಂಎನ್ ಡಿ24 | Kannada Prabha

ಸಾರಾಂಶ

ಹಲವು ವರ್ಷಗಳಿಂದ ಇಲ್ಲಿ ನಡೆಯುವ ನವರಾತ್ರಿ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದೇವೆ. ದೇವಿಯಲ್ಲಿ ಪ್ರಾರ್ಥಿಸಿ ಮಹಾಸುದರ್ಶನ ಹೋಮ ಸೇರಿ ಇತರೆ ವಿಶೇಷ ಪೂಜೆಗಳನ್ನು ಸಲ್ಲಿಸಿ ಜನರ ಸಂಕಷ್ಟ ನಿವಾರಣೆಯಾಗಲಿ, ದೇಶ ಸುಭಿಕ್ಷೆಯಾಗಿರಬೇಕೆಂಬ ಆಶಯದಿಂದ ಪ್ರಾರ್ಥಿಸಲಾಗಿದೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ಪಟ್ಟಸೋಮನಹಳ್ಳಿ ಹೊರವಲಯದ ಶ್ರೀಶಿವಶೈಲ ದೇವಾಲಯದ ಆವರಣದಲ್ಲಿ ಶರನ್ನವರಾತ್ರಿ ಅಂಗವಾಗಿ ಮಾಜಿ ಸಚಿವ, ಮೈಸೂರು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡರು ಕುಟುಂಬ ಸಮೇತರಾಗಿ ಪಾಲ್ಗೊಂಡು ಸುದರ್ಶನ ಹೋಮ ನಡೆಸಿದರು.

ಕಾಮಾಕ್ಷಿ ಚಂದ್ರಮೌಳೇಶ್ವರ ಸ್ವಾಮಿ ದೇವಾಲಯದಲ್ಲಿ ನವರಾತ್ರಿ ಮಹೋತ್ಸವದ ಅಂಗವಾಗಿ 9 ದಿನಗಳ ಕಾಲ ವಿವಿಧ ಹೋಮ ಹವನಗಳು ನಡೆಯಲಿವೆ. ನವರಾತ್ರಿ 4ನೇ ದಿನವಾದ ಬುಧವಾರ ಮಹಾ ಸುದರ್ಶನ ಹೋಮದಲ್ಲಿ ದೇವೇಗೌಡರು ಪಾಲ್ಗೊಂಡರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಲವು ವರ್ಷಗಳಿಂದ ಇಲ್ಲಿ ನಡೆಯುವ ನವರಾತ್ರಿ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದೇವೆ. ದೇವಿಯಲ್ಲಿ ಪ್ರಾರ್ಥಿಸಿ ಮಹಾಸುದರ್ಶನ ಹೋಮ ಸೇರಿ ಇತರೆ ವಿಶೇಷ ಪೂಜೆಗಳನ್ನು ಸಲ್ಲಿಸಿ

ಜನರ ಸಂಕಷ್ಟ ನಿವಾರಣೆಯಾಗಲಿ, ದೇಶ ಸುಭಿಕ್ಷೆಯಾಗಿರಬೇಕೆಂಬ ಆಶಯದಿಂದ ಪ್ರಾರ್ಥಿಸಲಾಗಿದೆ ಎಂದರು.

ಈ ವೇಳೆ ನಿವೃತ್ತ ನ್ಯಾಯಾಧೀಶ ಶಿವಶೈಲ, ದತ್ತಿ ಧಾರ್ಮಿಕ ಸಂಸ್ಥೆ ಮುಖ್ಯಸ್ಥರಾದ ಸಿ.ಶಿವಪ್ಪ, ನರೆನ್‌ ಶಿವಪ್ಪ, ರಾಜ್ಯ ಪತ್ತಿನ ಸಹಕಾರ ಸಂಘಗಳ ಮಹಾಮಂಡಳ ಮಾಜಿ ಅಧ್ಯಕ್ಷೆ ಲಲಿತಾ ದೇವೇಗೌಡ, ಜಿಟಿಡಿ ಪುತ್ರಿಯರಾದ ಅನ್ನಪೂರ್ಣ, ಯಶೋಧ ಆನಂದ್, ಮಹಾಲಕ್ಷ್ಮೀ ಸ್ವೀಟ್ ಮಾಲೀಕ ಶಿವಕುಮಾರ್, ವಕೀಲ ಪಾಲಾಕ್ಷ, ಬಿಜೆಪಿ ಮುಖಂಡ ರೈಸ್‌ಮಿಲ್ ತಮ್ಮಣ್ಣ, ಜಿ.ಟಿ.ಡಿ.ಅಪ್ತ ಕಾರ್ಯದರ್ಶಿ ಹನುಮೇಶ್, ಮಧು, ಬೆಳವಾಡಿ ಶಿವಕುಮಾರ್, ರಮೇಶ್, ಬೋರಪ್ಪ, ಇಲವಾಲ ನಾಗರಾಜು, ಎ.ಪಿ.ಎಂ.ಸಿ.ಸತೀಶ್, ಕಾಮನಕೆರೆಹುಂಡಿ ರಾಮೇಗೌಡ, ಮಾದೇಶ್, ನಾಗನಹಳ್ಳಿ ಮಂಜು, ಗುರುಮೂರ್ತಿ, ಪ್ರಧಾನ ಅರ್ಚಕರಾದ ಮಂಜುನಾಥ್‌ಶಾಸ್ತ್ರಿ, ಕೀರ್ತಿನಾರಾಯಣಭಟ್ಟ, ಶಿವಶೈಲ ಮ್ಯಾನೇಜರ್ ನಂಜುಂಡೇಗೌಡ ಹಾಗೂ ಭಕ್ತರು ಪಾಲ್ಗೊಂಡಿದ್ದರು.

ನವರಾತ್ರಿ ಪ್ರಯುಕ್ತ ಶ್ರೀ ಬೆಟ್ಟದರಸಮ್ಮ ಮೂರ್ತಿಗೆ ವಿಶೇಷ ಪೂಜೆ

ಹಲಗೂರು:ಸಮೀಪದ ಗುಂಡಾಪುರದ ಬೆಟ್ಟದ ತಪ್ಪಲಿನಲ್ಲಿ ನೆಲೆಸಿರುವ ಆರಾಧ್ಯ ದೇವತೆ ಶ್ರೀಬೆಟ್ಟದರಸಮ್ಮ ದೇವಸ್ಥಾನದಲ್ಲಿ ನವರಾತ್ರಿ ಅಂಗವಾಗಿ ಕಾತ್ಯಾಯಿನಿ ದೇವರ ಹೆಸರಿನಲ್ಲಿ ಮೂರ್ತಿಗೆ ಹಾಲಿನ ಅಭಿಷೇಕ, ಪಂಚಾಮೃತ ಅಭಿಷೇಕ ನಡೆಸಿ ವಿವಿಧ ಪುಷ್ಪಗಳಿಂದ ಅಲಂಕರಿಸಿ ವಿಶೇಷ ಪೂಜೆಯನ್ನು ನಡೆಸಿದರು.

ಅರ್ಚಕ ಪುಟ್ಟಮಲ್ಲಪ್ಪ ಮಾತನಾಡಿ, ಶಕ್ತಿ ದೇವತೆ ಬೆಟ್ಟದರಸಮ್ಮ ನ ದೇವಸ್ಥಾನದಲ್ಲಿ ಪ್ರತಿ ಮಂಗಳವಾರ, ಶುಕ್ರವಾರ ವಿಶೇಷ ಪೂಜೆಯನ್ನು ನಡೆಸಲಾಗುತ್ತದೆ. ನವರಾತ್ರಿ ಅಂಗವಾಗಿ ವಿಶೇಷ ಪೂಜೆ ನಡೆಸಿ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗಿಸಿದ್ದೇವೆ ಎಂದರು.ದೇವಿ ಭಕ್ತ ದೇವಿರಹಳ್ಳಿ ಪಟೇಲ್ ರಾಜಣ್ಣ ಮಾತನಾಡಿ, ಗುಂಡಾಪುರ ಸೇರಿದಂತೆ ಸುತ್ತಮುತ್ತಲ 9 ಗ್ರಾಮಗಳಿಗೆ ಆರಾಧ್ಯ ದೇವತೆ ಬೆಟ್ಟದರಸಮ್ಮ ತಾಯಿ ಭಕ್ತರ ಕಷ್ಟ ಕಾರ್ಪಣ್ಯಗಳನ್ನು ನಿವಾರಿಸುತ್ತಾ ಜಿಲ್ಲೆ ಮತ್ತು ರಾಜ್ಯಾದ್ಯಂತ ಅಪಾರ ಭಕ್ತಾದಿಗಳನ್ನು ಒಳಗೊಂಡಿದ್ದು,ತಾಯಿ ವಿಶೇಷವಾಗಿ ಪೂಜೆ ನಡೆದಿದೆ ಎಂದರು.

ಈ ವೇಳೆ ದೇವಿರಹಳ್ಳಿ ಪಟೇಲ್ ರಾಜಣ್ಣ, ತೊರೆಕಾಡನಹಳ್ಳಿ ಮೂರ್ತಿ, ವಿಜಯ, ಸಹನಾ ,ಬಿಂದು ,ಶಶಿ, ಯತೀಶ್, ಅನಿಲ್ ಕುಮಾರ್ ಮತ್ತು ಕುಮಾರ್ ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಏಷ್ಯನ್ ಪ್ಯಾರಾ ಗೇಮ್ಸ್‌ಗೆ ಬಳ್ಳಾರಿಯ ಗೋಪಿಚಂದ್ ಲಿಂಗುಟ್ಲ ಆಯ್ಕೆ
ಪಡಿತರ ಚೀಟಿದಾರರ ಇ-ಕೆವೈಸಿ ಗಡುವು ವಿಸ್ತರಿಸಿ