ನಾಯಕ ಸಮುದಾಯದ ಬೆಳವಣಿಗೆ ಸಂಘಟಿತರಾಗಿ

KannadaprabhaNewsNetwork |  
Published : Oct 14, 2025, 01:00 AM IST
೧೩ಶಿರಾ೧: ಶಿರಾ ತಾಲೂಕಿನ ತಾವರೆಕೆರೆ ಗ್ರಾಮದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ಶಿರಾ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಿವು ಚಂಗಾವರ ಸೇರಿದಂತೆ ಹಲವರು ಭಾಗವಹಿಸಿದ್ದರು. | Kannada Prabha

ಸಾರಾಂಶ

ನಾಯಕ ಸಮುದಾಯದ ಬೆಳೆವಣಿಗೆಗೆ ಎಲ್ಲರೂ ಸಹ ಸಂಘಟಿತರಾಗಿ ಒಗ್ಗಟ್ಟಿನಿಂದ ಮುನ್ನಡೆಯಬೇಕು

ಕನ್ನಡಪ್ರಭ ವಾರ್ತೆ ಶಿರಾ

ನಾಯಕ ಸಮುದಾಯದ ಬೆಳೆವಣಿಗೆಗೆ ಎಲ್ಲರೂ ಸಹ ಸಂಘಟಿತರಾಗಿ ಒಗ್ಗಟ್ಟಿನಿಂದ ಮುನ್ನಡೆಯಬೇಕು ನಮ್ಮ ಪೂರ್ವಿಕರ ತ್ಯಾಗವನ್ನು ನಾವೆಲ್ಲರೂ ಪ್ರತಿನಿತ್ಯ ಸ್ಮರಿಸಬೇಕಿದೆ, ಅವರ ಆದರ್ಶ ತತ್ವ ಸಿದ್ದಂತಾಗಳನ್ನು ನಾವೆಲ್ಲರೂ ಜೀವನದಲ್ಲಿ ಪಾಲಿಸಬೇಕು ಶಿರಾ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಿವು ಚಂಗಾವರ ಹೇಳಿದರು.

ಅವರು ತಾಲೂಕಿನ ತಾವರೆಕೆರೆ ಗ್ರಾಮದಲ್ಲಿ ನಡೆದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ನಾಯಕ ಸಮುದಾಯ ಸಂಘಟಿತರಾಗಿ ಒಗ್ಗೂಡುವ ಅವಶ್ಯಕತೆ ಇದ್ದು ಅಕ್ಟೋಬರ್ ದಿ. ೧೮ ರ ಶನಿವಾರ ಶಿರಾದಲ್ಲಿ ನಡೆಯುವ ಅದ್ದೂರಿ ಶ್ರೀ ವಾಲ್ಮೀಕಿ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಎಲ್ಲರೂ ಪಾಲ್ಗೊಂಡು ನಾಯಕ ಸಮುದಾಯದ ಒಗ್ಗಟ್ಟನ್ನು ಪ್ರದರ್ಶಿಸಬೇಕು. ಇಂತಹ ವಾಲ್ಮೀಕಿ ಜಯಂತೋತ್ಸವಗಳು ಸೌಹಾರ್ದತೆ, ಸಹಬಾಳ್ವೆ, ಸಹ ಜೀವನದ ಪಾಠ ಕಲಿಸುತ್ತವೆ ಎಂದರು.

ಕಾರ್ಯಕ್ರಮಕ್ಕೂ ಮುನ್ನ ತಾವರೆಕೆರೆ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಭಾವಚಿತ್ರವನ್ನು ಅದ್ಧೂರಿಯಾಗಿ ಮೆರವಣಿಗೆ ಮಾಡಲಾಯಿತು. ಈ ಸಂದರ್ಭದಲ್ಲಿ ಮುಖಂಡರಾದ ಮನೋಹರ್ ನಾಯಕ, ವಿ ನಾಗರಾಜ್, ಟಿಸಿ ದೇವರಾಜ್, ಯಜಮಾನ ನಾಗರಾಜ್, ಡಿ ರಾಮಯ್ಯ , ಕೃಷ್ಣಮೂರ್ತಿ ಪಾಂಡಪ್ಪ, ಪ್ರಸನ್ನ ಕುಮಾರ್, ಮಹೇಶ್, ಮೋಹನ್, ಲಕ್ಷ್ಮಣ್ , ರಾಜು , ಗೋಪಾಲ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಸತ್ಯಭಾಮ, ರಾಮು , ಬಸವರಾಜ್, ಸೇರಿದಂತೆ ವಾಲ್ಮೀಕಿ ಸಮುದಾಯದ ಹಲವಾರು ಮುಖಂಡರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉ.ಕರ್ನಾಟಕ ಬಗ್ಗೆ ರಾಜ್ಯ ಸರ್ಕಾರ ದಿವ್ಯ ನಿರ್ಲಕ್ಷ್ಯ: ವಿಜಯೇಂದ್ರ
ಡ್ರಗ್ಸ್‌ ಸಪ್ಲೈಗೆ ಸ್ತ್ರೀಯರ ಬಳಕೆ ಅಧಿಕ! ಆಫ್ರಿಕಾ ಖಂಡದ ಸ್ತ್ರೀಯರೇ ಅಧಿಕ