ಸಮಾಜದ ಅಭಿವೃದ್ಧಿಯ ಹರಿಕಾರ ನಜೀರ್‌ ಸಾಬ್‌: ಶಾಸಕ ಎಚ್.ಎಂ.ಗಣೇಶಪ್ರಸಾದ್‌ ಬಣ್ಣನೆ

KannadaprabhaNewsNetwork | Published : Dec 28, 2023 1:45 AM

ಸಾರಾಂಶ

ಅಂದಿನ ಮುಖ್ಯಮಂತ್ರಿ ಎಸ್‌.ಆರ್. ಬೊಮ್ಮಾಯಿಗೆ ಪಂಚಾಯತ್‌ ರಾಜ್‌ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಗುಂಡ್ಲುಪೇಟೆಯ ಅಬ್ದುಲ್‌ ನಜೀರ್‌ ಸಾಬ್‌ ಮನವಿ ಮಾಡಿದ್ದನ್ನು ಗಮನಿಸಿದರೆ ನಜೀರ್‌ ಸಾಬ್‌ ಅವರ ಸಮಾಜದ ಮೇಲಿದ್ದ ಕಳಕಳಿ ಜನಪ್ರತಿನಿಧಿಗಳು ಗಮನಿಸಬೇಕಿದೆ ಎಂದು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಹೇಳಿದರು. ಗುಂಡ್ಲುಪೇಟೆಯಲ್ಲಿ ಆಯೋಜಿಸಿದ್ದ ಪಂಚಾಯತ್‌ರಾಜ್ ಸಬಲೀಕರಣ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಅಬ್ದುಲ್ ನಜೀರ್ ಸಾಬ್ ಜನ್ಮ ದಿನದ ಅಂಗವಾಗಿ ಪಂಚಾಯತ್‌ರಾಜ್ ಸಬಲೀಕರಣ ದಿನಾಚರಣೆ

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ ಸಾಯುವ ಹಂತದಲ್ಲೂ ವಸತಿರಹಿತರಿಗೆ ಹಣ ಇಟ್ಟಿದ್ದೇನೆ. ನೀವು ಮನೆ ಕೊಡುವುದಾಗಿ ಭರವಸೆ ಕೊಡಿ ಎಂದು ಅಂದಿನ ಮುಖ್ಯಮಂತ್ರಿ ಎಸ್‌.ಆರ್. ಬೊಮ್ಮಾಯಿಗೆ ಪಂಚಾಯತ್‌ ರಾಜ್‌ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಗುಂಡ್ಲುಪೇಟೆಯ ಅಬ್ದುಲ್‌ ನಜೀರ್‌ ಸಾಬ್‌ ಮನವಿ ಮಾಡಿದ್ದನ್ನು ಗಮನಿಸಿದರೆ ನಜೀರ್‌ ಸಾಬ್‌ ಅವರ ಸಮಾಜದ ಮೇಲಿದ್ದ ಕಳಕಳಿ ಜನಪ್ರತಿನಿಧಿಗಳು ಗಮನಿಸಬೇಕಿದೆ ಎಂದು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಹೇಳಿದರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ಪಂಚಾಯತ್‌ರಾಜ್ ಪರಿಷತ್, ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ಸದಸ್ಯರ ಮಹಾ ಒಕ್ಕೂಟ, ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಸಂಸ್ಥೆ ಸಂಪನ್ಮೂಲ ವ್ಯಕ್ತಿಗಳ ಕ್ಷೇಮಾಭಿವೃದ್ಧಿ ಸಂಘ ಏರ್ಪಡಿಸಿದ್ದ ಅಬ್ದುಲ್ ನಜೀರ್ ಸಾಬ್ ಜನ್ಮ ದಿನದ ಅಂಗವಾಗಿ ಪಂಚಾಯತ್‌ರಾಜ್ ಸಬಲೀಕರಣ ದಿನಾಚರಣೆ ಹಾಗೂ ಡಾ.ಚಿಕ್ಕ ಕೋಮಾರಿ ಗೌಡದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ‘ಪಂಚಾಯತ್ ರಾಜ್ ದಾರಿ ದೀಪ’ ನಜೀರ್ ಸಾಬ್ ಪುಸ್ತಕ ಲೋಕಾರ್ಪಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಢಿದರು.

ಅಂದಿನ ಮುಖ್ಯಮಂತ್ರಿ ಎಸ್‌.ಆರ್. ಬೊಮ್ಮಾಯಿಗೆ ಪಂಚಾಯತ್‌ ರಾಜ್‌ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಗುಂಡ್ಲುಪೇಟೆಯ ಅಬ್ದುಲ್‌ ನಜೀರ್‌ ಸಾಬ್‌ ಮನವಿ ಮಾಡಿದ್ದನ್ನು ಗಮನಿಸಿದರೆ ನಜೀರ್‌ ಸಾಬ್‌ ಅವರ ಸಮಾಜದ ಮೇಲಿದ್ದ ಕಳಕಳಿ ಜನಪ್ರತಿನಿಧಿಗಳು ಗಮನಿಸಬೇಕಿದೆ ಎಂದು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಹೇಳಿದರು. ಗುಂಡ್ಲುಪೇಟೆಯಲ್ಲಿ ಆಯೋಜಿಸಿದ್ದ ಪಂಚಾಯತ್‌ರಾಜ್ ಸಬಲೀಕರಣ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಸ್ವಾರ್ಥ ಪ್ರಪಂಚದಲ್ಲಿ ನಜೀರ್‌ ಸಾಬ್‌ ರಂತ ನಾಯಕ ಗುಂಡ್ಲುಪೇಟೆಯವರು ಎಂದು ಹೇಳಿಕೊಳ್ಳಲಿ ಹೆಮ್ಮೆ ಎನಿಸುತ್ತಿದೆ. ಕೊಳವೆಬಾವಿ ಕೊರೆಸಿ ನೀರು ಕೊಡುವ ಮೂಲಕ ನೀರ್‌ ಸಾಬ್‌ ಎನಿಸಿಕೊಂಡರು ಎಂದರು.ಅಬ್ದುಲ್‌ ನಜೀರ್‌ ಸಾಬ್‌ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆ ಜಾರಿಗೆ ತರುವ ದೇಶಕ್ಕೆ ಮಾದರಿಯಾದರು ಎಂದರು.

ಕ್ಷೇತ್ರಕ್ಕೆ ಹಾಗೂ ರಾಜ್ಯಕ್ಕೆ ಗುಂಡ್ಲುಪೇಟೆ ಕ್ಷೇತ್ರದಲ್ಲಿ ಆಯ್ಕೆಯಾದ ಕೆ.ಎಸ್. ನಾಗರತ್ನಮ್ಮ ಶಾಸಕರಾಗಿ, ಸಚಿವರಾಗಿ, ವಿಪಕ್ಷ ನಾಯಕಿಯಾಗಿ,ಸ್ಪೀಕರ್‌ ಆಗಿ ಸೇವೆ ಸಲ್ಲಿಸಿ ಸೇವೆ ಸಲ್ಲಿಸಿದರೆ, ಎಚ್.ಕೆ. ಶಿವರುದ್ರಪ್ಪ, ಎಚ್.ಎಸ್. ಮಹದೇವಪ್ರಸಾದ್‌ ತನ್ನದೇ ಆದ ಕೊಡುಗೆ ನೀಡಿದ್ದಾರೆ.

‘ಇನ್ನೂ ಹೆಜ್ಜೆ ಮುಂದೆ ಹೋದ ನಜೀರ್‌ ಸಾಬ್‌ ವಿಧಾನ ಪರಿಷತ್‌ ಸದಸ್ಯರಾಗಿ ಪಂಚಾಯತ್‌ ರಾಜ್‌ ವ್ಯವಸ್ಥೆ ಜಾರಿಗೆ ತಂದು ದೇಶಕ್ಕೆ ಮಾದರಿಯಾದರು. ನಾನು ಸಹ ಕೆಎಸ್‌ಎನ್‌, ಎಚ್‌ಕೆಎಸ್‌, ನಜೀರ್‌ ಸಾಬ್‌, ಎಚ್‌ಎಸ್ಎಂ ಹಾದಿಯಲ್ಲೇ ಸಾಗುವೆ’ ಎಂದು ಭರವಸೆ ನೀಡಿದರು.

ವಿಧಾನ ಪರಿಷತ್‌ ಸದಸ್ಯ ಡಾ.ಡಿ. ತಿಮ್ಮಯ್ಯ, ಮಾಜಿ ಶಾಸಕ ಡಿ.ಆರ್.ಪಾಟೀಲ್‌,ಕರ್ನಾಟಕ ಪಂಚಾಯತ್‌ ರಾಜ್‌ ಪರಿಷತ್‌ ಉಪಾಧ್ಯಕ್ಷ ವಿ.ವೈ. ಘೋರ್ಪಡೆ, ಕರ್ನಾಟಕ ರಾಜ್ಯ ಗ್ರಾಪಂ ಸದಸ್ಯರು ಮಹಾ ಒಕ್ಕೂಟದ ಅಧ್ಯಕ್ಷ ಕಾಡಶೆಟ್ಟಹಳ್ಳಿ ಸತೀಶ್‌, ಕೋಶಾಧ್ಯಕ್ಷ ಡಾ. ಚಿಕ್ಕಕೋಮಾರಿ ಗೌಡ,ಮೈಸೂರು ಜಿಲ್ಲಾ ಪಂಚಾಯತ್‌ ಅಭಿವೃದ್ಧಿ ಕ್ಷೇಮಾಭಿವೃದ್ಧಿ ಸಂಘದ ಕುಮಾರಸ್ವಾಮಿ, ಗ್ರಾಪಂ ಸದಸ್ಯರಾದ ಹೆಚ್.ಪಿ. ಮಹೇಂದ್ರ, ಹಂಗಳ ವೃಷಬೇಂದ್ರ ಹಾಗು ಜಯಂತಿ, ಜಿಪಂ ಮಾಜಿ ಉಪಾಧ್ಯಕ್ಷ ಕೆ.ಎಸ್. ಮಹೇಶ, ಜಿಪಂ ಮಾಜಿ ಸದಸ್ಯ ಕೆರಹಳ್ಳಿ ನವೀನ್‌, ಎಪಿಎಂಸಿ ಮಾಜಿ ಅಧ್ಯಕ್ಷ ಎಸ್.ಶಿವನಾಗಪ್ಪ ಸೇರಿದಂತೆ ಸಾವಿರಾರು ಮಂದಿ ಗ್ರಾಪಂ ಅಧ್ಯಕ್ಷ,ಉಪಾಧ್ಯಕ್ಷ,ಸದಸ್ಯರು ಇದ್ದರು.

Share this article