ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಮಾಜಿ ಸಚಿವ ಎನ್ ಮಹೇಶ್ ಮಾತನಾಡಿ, ನಮ್ಮ ಮೈತ್ರಿ ಕೂಟದ ಅಭ್ಯರ್ಥಿ ಬಾಲರಾಜು ಅವರು ಸಜ್ಜನ ವ್ಯಕ್ತಿ, ಜನರ ಸಮಸ್ಯೆಗಳನ್ನು ಆಲಿಸುವ ಶಕ್ತಿ ಇದೆ. ಅವರು ಸ್ಥಳೀಯರು, ಅವರನ್ನು ಬೆಂಬಲಿಸಿ ಈಬಾರಿ ಸಂಸತ್ ಗೆ ಕಳುಹಿಸಿಕೊಟ್ಟರೆ ನರೇಂದ್ರ ಮೋದಿಯವರನ್ನು ಮೂರನೇ ಬಾರಿ ಪ್ರಧಾನಿಯನ್ನಾಗಿಸಿ ಅವರ ಕೈ ಬಲಪಡಿ ಸಲು ಸಾಧ್ಯವಿದೆ. ಹಾಗಾಗಿ ಅವರನ್ನು ಅತ್ಯಧಿಕ ಮತದಿಂದ ಗೆಲ್ಲಿಸಿ ಎಂದರು. ಬಾಲರಾಜು ಸರಳ ವ್ಯಕ್ತಿ, ಬಾಲರಾಜ್ ನಿಮ್ಮ ಮನೆ ಮಗನಿದ್ದಂತೆ, ಹಾಗಾಗಿ ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.
ಈ ಗಿರುವ ಗ್ಯಾರಂಟಿಗಳಿಗೆ ಕಾಂಗ್ರೆಸ್ ಸರ್ಕಾರದ ಬಳಿ ಹಣವಿಲ್ಲದೆ ಎಸ್ಸಿ, ಎಸ್ಟಿಗೆ ನೀಡಲಾದ ಅನುಧಾನ ಬಳಕೆ ಮಾಡಿಕೊಂಡಿದೆ, ಎಸ್ಸಿ, ಎಸ್ ಟಿ ಜನಾಂಗಕ್ಕೆ ಜಮೀನು ಖರೀದಿ, ಕೊಳವೆಬಾವಿ, ಸ್ಕಾಲರ್ ಶಿಪ್, ರಸ್ತೆ, ಚರಂಡಿಗೆ ಖರ್ಚು ಮಾಡಬೇಕಾದ 25ಸಾವಿರ ಕೋಟಿಯನ್ನು ಗ್ಯಾರಂಟಿಗೆ ಬಳಸಿಕೊಂಡಿದ್ದಾರೆ.ಕಾರಣ ಸರ್ಕಾರದ ಬಳಿ ಹಣವಿಲ್ಲ, ಇದೊಂದು ಅವ್ಯವಸ್ಥೆಯ ಅನ್ಯಾಯಕಾರರ ಸರ್ಕಾರ, ದೇಶದ ರೈತರು, ಬಡವರು, ಮಹಿಳೆಯರ ಹಿತದೃಷ್ಟಿಯಿಂದ ನರೇಂದ್ರಮೋದಿ ಮೂರನೇ ಬಾರಿ ಪ್ರಧಾನಿಯಾಗಬೇಕು, ಈ ನಿಟ್ಟಿನಲ್ಲಿ ತಾಯಂದಿರು ಆಶೀರ್ವಾದ ಮಾಡಬೇಕಿದೆ ಎಂದರು.
ಪುತ್ರನ ಅಧಿಕಾರಕ್ಕಾಗಿ ಬೇಡುತ್ತಿದ್ದಾರೆ: ಬಾಲರಾಜುಮೈತ್ರಿ ಕೂಟದ ಅಭ್ಯರ್ಥಿ ಎಸ್ ಬಾಲರಾಜು ಮಾತನಾಡಿ, ಇಂದು ಅಧಿಕಾರ ಇರುವವರು ತಮ್ಮ ಪುತ್ರನ ಅಧಿಕಾರಕ್ಕೆ ಬೇಡುತ್ತಿದ್ದಾರೆ, ಅವರು ಅಧಿಕಾರ ಅನುಭವಿಸುತ್ತಿದ್ದಾರೆ, ಅವರ ಮಗನಿಗೂ ಅಧಿಕಾರ ಕೊಡಿಸಲು ಪ್ರಯತ್ನಿಸುತ್ತಾ, ಈಗ ಅಧಿಕಾರಕ್ಕಾಗಿ ಮತದಾರರ ಬಳಿ ಬೇಡುತ್ತಿದ್ದಾರೆ, ಪ್ರಜ್ಞಾವಂತ ಮತದಾರರು ಅವರನ್ನು ತಿರಸ್ಕರಿಸಿ ಸಾಮಾನ್ಯ ಮನುಷ್ಯನಾದ ನನ್ನನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು ನನಗೆ ಇದೊಂದು ಅವಕಾಶ ಸಿಕ್ಕಿದೆ, ಈಬಾರಿ ನನಗೆ ಮೋದಿಯವರು, ದೇವೆಗೌಡರು, ಯಡಿಯೂರಪ್ಪ, ಬಿವೈ ವಿಜಯೇಂದ್ರ, ಎಚ್ ಡಿ ಕುಮಾರಸ್ವಾಮಿ ಸೇರಿದಂತೆ ಅನೇಕ ಗಣ್ಯರು, ಹಿರಿಯರು ನನಗೆ ಆಶೀರ್ವಾದ ಮಾಡಿದ್ದಾರೆ, ಮತದಾರರನ್ನು ನರೇಂದ್ರ ಮೋದಿಯವರ ಕೈ ಬಲಪಡಿಸುವ ನಿಟ್ಟಿನಲ್ಲಿ ನನಗೆ ಆಶೀರ್ವಾದ ಮಾಡಿ ಎಂದರು.
ಡಾ.ದತ್ತೇಶ್ ಕುಮಾರ್. ಬಿಜೆಪಿ ಮುಖಂಡರುಬಿಜೆಪಿ ದೇಶದಲ್ಲಿ ಪಡೆಯುವ 400 ಕ್ಷೇತ್ರಗಳ ಪೈಕಿ ಚಾ.ನಗರ ಕ್ಷೇತ್ರವೂ ಸಹಾ ಪ್ರಮುಖ ಸಾಲಿನಲ್ಲಿ ನಿಲ್ಲಬೇಕು, ಡಾ. ಪ್ರೀತನ್ ನಾನೂರು ಸೀಟುಗಳ ಪೈಕಿ ಚಾ.ನಗರ ಅಭ್ಯರ್ಥಿ ಬೆಂಬಲಿಸಿ ಜೆಡಿಎಸ್, ಬಿಜೆಪಿ ಮೈತ್ರಿಯನ್ನು ಕಾರ್ಯಕರ್ತರೆಲ್ಲರೂ ಒಗ್ಗೂಡಿ ಮನದಟ್ಟು ಮಾಡಿ ಬಾಲರಾಜು ಅವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸುವ ನಿಟ್ಟಿನಲ್ಲಿ ನಾವೆಲ್ಲರೂ ಪಕ್ಷಬೇದ ಮರೆತು ಒಗ್ಗೂಡಿ ಶ್ರಮಿಸೋಣ.