- ರೈತರ ಸಂಕಷ್ಟಗಳಿಗೆ ಸಿಎಂ ಸ್ಪಂದಿಸಿಲ್ಲ: ವಿಜಯೇಂದ್ರ ಆರೋಪ
- - - ಕನ್ನಡಪ್ರಭ ವಾರ್ತೆ ಜಗಳೂರುರಾಜ್ಯದ ಮೂರು ಕ್ಷೇತ್ರಗಳಲ್ಲಿ ನಡೆಯಲಿರುವ ಉಪ ಚುನಾವಣೆಯಲ್ಲಿ ಜೆಡಿಎಸ್ ಸೇರಿ ಬಿಜೆಪಿ ಮೂರು ಕ್ಷೇತ್ರದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.
ಶುಕ್ರವಾರ ಕಾರ್ಯಕ್ರಮದ ನಿಮಿತ್ತ ಸಂಡೂರಿನಿಂದ ಉಜ್ಜಯಿನಿ ಮಹಾಸಂಸ್ಥಾನ ಮಠದ ದರ್ಶನ ಪಡೆದು ಸಿರಿಗರೆ ಸ್ವಾಮಿಗಳ ಆಶೀರ್ವಾದದಿಂದ ಕೆರೆ ಕೋಡಿ ಬಿದ್ದು ತುಂಬಿ ಹರಿಯುತ್ತಿರುವ ಜಗಳೂರು ಕೆರೆಗೆ ಭೇಟಿ ನೀಡಿ, ವೀಕ್ಷಿಸಿ ಅವರು ಮಾತನಾಡಿದರು.ರೈತರಿಗೆ ಸ್ಪಂದಿಸದ ಮುಖ್ಯಮಂತ್ರಿ:
ರಾಜ್ಯದಲ್ಲಿ ಒಂದು ಚುನಾಯಿತ ಸರ್ಕಾರವಿದೆ, ಅದಕ್ಕೊಬ್ಬರು ಸಿಎಂ ಇದ್ದಾರೆ ಎಂಬುವುದನ್ನು ರಾಜ್ಯದ ಜನರು ಮರೆತುಬಿಟ್ಟಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಸಿಎಂ ಬರಗಾಲದ ಸಂದರ್ಭದಲ್ಲೂ ರೈತರ ಸಂಕಷ್ಟಗಳಿಗೆ ಸ್ಪಂದನೆ ಮಾಡಲಿಲ್ಲ. ಅತಿವೃಷ್ಟಿ ಬಂದು ಮೆಕ್ಕೆಜೋಳ, ಹತ್ತಿ, ರಾಗಿ, ಶೇಂಗಾ, ಭತ್ತ ಬೆಳೆಗಳೆಲ್ಲ ನಾಶವಾಗಿವೆ. ಇಂತಹ ಅಹಿತಕರ ಸಮಯದಲ್ಲೂ ರೈತರಿಗೆ ಸ್ಪಂದಿಸುವ ಸೌಜನ್ಯ ಕೂಡ ಅವರಿಗಿಲ್ಲ ಎಂದು ಟೀಕಿಸಿದರು.ರಾಜ್ಯದಲ್ಲಿ ಸಿಎಂ, ಉಸ್ತುವಾರಿ ಸಚಿವರು ಎಲ್ಲೂ ಪ್ರವಾಸ ಮಾಡುತ್ತಿಲ್ಲ. ಒಂದೂ ರೀತಿ ಅಭಿವೃದ್ಧಿ ಶೂನ್ಯ ಸರ್ಕಾರವಿದೆ. ಈ ರಾಜ್ಯದ ದುರ್ದೈವ. ನೆರೆಯಿಂದ ಜನರು ಸಂಕಷ್ಟ ಎದುರಿಸುತ್ತಿದ್ದಾರೆ. ಆದರೆ, ಜಿಲ್ಲಾ ವ್ಯಾಪ್ತಿಯ ಮಂತ್ರ್ರಿಗಳು, ಕ್ಷೇತ್ರದ ಶಾಸಕರನ್ನು ಮೂರು ಕ್ಷೇತ್ರಗಳ ಉಪ ಚುನಾವಣೆಗೆ ಹಾಕಿದ್ದಾರೆ. ಆದರೂ, ಚನ್ನಪಟ್ಟಣ ಜೆಡಿಎಸ್ ಸೇರಿದಂತೆ ಮೂರು ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳು ಗೆಲುವ ಪಡೆಯುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಮಾಜಿ ಶಾಸಕರಾದ ಎಸ್.ವಿ. ರಾಮಚಂದ್ರ, ಎಚ್.ಪಿ. ರಾಜೇಶ್, ಪಪಂ ಅಧ್ಯಕ್ಷ ನವೀನ್‌ಕುಮಾರ್, ಸದಸ್ಯರಾದ ಆರ್. ತಿಪ್ಪೇಸ್ವಾಮಿ, ಮುಖಂಡರಾದ ಬಿಸ್ತುವಳ್ಳಿ ಬಾಬು, ಮರುಳಾರಾಧ್ಯ, ಬಾಣೇಶ್, ಲ್ಯಾಬ್ ಶಿವು, ರಘು ಜಾಗ್ವಾರ್, ಪೂಜಾರಿ ಸಿದ್ದಪ್ಪ, ಮಂಜುನಾಥ್, ಬಿ.ಲೋಕೇಶ್ ಮತ್ತಿತರರಿದ್ದರು.- - - -25ಜೆಎಲ್ಆರ್ಚಿತ್ರ3:
ಜಗಳೂರು ಪಟ್ಟಣದ ಕೆರೆ ಭರ್ತಿಯಾಗಿದ್ದನ್ನು ವೀಕ್ಷಿಸಿದ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸುದ್ದಿಗಾರರೊಂದಿಗೆ ಮಾತನಾಡಿದರು.