ಕನ್ನಡಪ್ರಭ ವಾರ್ತೆ ಹಾಸನ
ಚುನಾವಣೆ ಆಯೋಗವೇ ಸರಿಯಿಲ್ಲ, ಮತದ ಪೆಟ್ಟಿಗೆ ಸರಿಯಿಲ್ಲ ಎಂದು ಕಾಂಗ್ರೆಸ್ ಪಕ್ಷದವರು ಅಪಪ್ರಚಾರ ಮಾಡುತ್ತಿದ್ದರು. ಈ ಸೋಲಿನಿಂದ ಮತದಾರರೆ ಸರಿಯಿಲ್ಲ ಎಂದು ಹತಾಶೆಯಾಗಿ ರಾಹುಲ್ ಗಾಂಧಿ ಹೇಳಬಹುದು ಎಂದು ವ್ಯಂಗ್ಯವಾಡಿದರು. ಚೋರ್ ಚೋರ್ ಎಂದು ರಾಹುಲ್ ಗಾಂಧಿ ಹೇಳಿ ಇಂದು ದೇಶವನ್ನೇ ಬಿಟ್ಟು ವಿದೇಶಕ್ಕೆ ಹೋಗಿದ್ದಾರೆ. ಬಿಹಾರದ ಜನತೆ ಸತ್ಯ ಹಾಗೂ ಅಭಿವೃದ್ಧಿಯ ಪರವಾಗಿ ತೀರ್ಪು ನೀಡಿದ್ದಾರೆ. ೨೪೩ ಸ್ಥಾನಗಳಲ್ಲಿ ೨೦೮ ಸ್ಥಾನಗಳನ್ನು ಎನ್.ಡಿ.ಎ. ಪಡೆದು ದೇಶದ ನಾಯಕ ನರೇಂದ್ರ ಮೋದಿಯವರ ಜನಮೆಚ್ಚಿನ ನಾಯಕತ್ವ ಮತ್ತೊಮ್ಮೆ ಸಾಬೀತಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ಟೀಕೆಗಳನ್ನು ಪ್ರಶ್ನಿಸಿದ ಅವರು, ನಮ್ಮ ಮೇಲೆ ‘ಚೋರ್’ ಎಂದು ಆರೋಪ ಮಾಡುತ್ತಿದ್ದ ಕಾಂಗ್ರೆಸ್ ಈಗ ಬಿಹಾರದಲ್ಲಿ ಕೇವಲ ಎರಡು ಸೀಟು ಗೆಲ್ಲುವಷ್ಟು ಹೀನಾಯ ಸ್ಥಿತಿಗೆ ಬಂದಿದೆ. ೧೩೫ ವರ್ಷಗಳ ಇತಿಹಾಸ ಹೊಂದಿದ ಕಾಂಗ್ರೆಸ್ ಇಂದು ಒಂದು ಅಂಕಿಗೆ ಸೀಮಿತವಾಗಿದೆ. ಮತ ಯಂತ್ರ ತಪ್ಪು, ಚುನಾವಣಾ ಆಯೋಗ ತಪ್ಪು ಎಂದು ಹೇಳುತ್ತಿದ್ದವರು ಈಗ ಮತದಾರರನ್ನೇ ತಪ್ಪು ಎಂದು ಆರೋಪಿಸುವ ಪರಿಸ್ಥಿತಿಗೆ ಬಂದಿದ್ದಾರೆ ಎಂದು ವ್ಯಂಗ್ಯವಾಡಿದರು. ರಾಹುಲ್ ಗಾಂಧಿ ಇತ್ತೀಚೆಗೆ ದೇಶ ಬಿಟ್ಟು ವಿದೇಶಕ್ಕೆ ತೆರಳಿರುವುದು ಜನರ ನಿರಾಸೆಯನ್ನು ಹೆಚ್ಚಿಸಿದೆ. ದೇಶದಲ್ಲಿ ಮುಂದಿನ ಎಲ್ಲಾ ಚುನಾವಣೆಯಲ್ಲೂ ಗೆಲುವಿನ ಅಲೆ ಮುಂದುವರಿಯಲಿದೆ, ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ನಮಗಿದೆ ಎಂದು ಹೇಳಿದರು.ಇತ್ತೀಚಿನ ಬಾಂಬ್ ಸ್ಫೋಟದ ಘಟನೆಯನ್ನು ಉಲ್ಲೇಖಿಸಿ, ಮೊನ್ನೆ ನಡೆದಂತಹ ಬಾಂಬ್ ಬ್ಲಾಸ್ಟ್ ಇಡೀ ದೇಶವೇ ನೋಡುವಂತಹ ಘಟನೆಯಾಗಿದೆ. ಭದ್ರತೆ ವೈಫಲ್ಯ ಇದ್ದಿದ್ದರೆ ದೇಶದ ಹಲವೆಡೆ ಇಂತಹ ಘಟನೆಗಳು ಸಂಭವಿಸಬೇಕಾಗಿತ್ತು. ಆದರೆ ಪ್ರಧಾನಿ ಮೋದಿಯವರ ಸದೃಢ ನಾಯಕತ್ವದಿಂದ ದೇಶ ಸುರಕ್ಷಿತವಾಗಿರುತ್ತದೆ ಎಂದು ಅಭಿಪ್ರಾಯಪಟ್ಟರು.ಸಂಭ್ರಮಾಚರಣೆಯಲ್ಲಿ ನಗರಾಧ್ಯಕ್ಷ ಯೋಗೇಶ್ ಗೌಡ, ಮುಖಂಡರಾದ ಶೋಭನ್ ಬಾಬು, ರಾಜಕುಮಾರ್, ರಾಜೀವ್, ಪ್ರಸನ್ನಕುಮಾರ್, ಚನ್ನಕೇಶವ, ಮೋಹನ್, ವೇದಾವತಿ, ಶೋಭ, ಪ್ರಕಾಶ್ ಸೇರಿದಂತೆ ಅನೇಕ ಕಾರ್ಯಕರ್ತರು ಪಾಲ್ಗೊಂಡಿದ್ದರು.