ಎಂಡಿಎ ಅವ್ಯವಹಾರ ನ್ಯಾಯಾಂಗ ತನಿಖೆಗೆ ವಹಿಸಿ

KannadaprabhaNewsNetwork |  
Published : Jul 04, 2024, 01:04 AM IST
2 | Kannada Prabha

ಸಾರಾಂಶ

ಪರಿಹಾರದ ನಿವೇಶನ ನೀಡುವಲ್ಲಿ 50:50 ಅನುಪಾತದಲ್ಲಿ ನಿವೇಶನ ಹಂಚಿಕೆಯಲ್ಲಿ ನಡೆದಿರುವ ಹಗರಣವೂ ಸೇರಿದಂತೆ ಈ ಹಿಂದೆ ನಡೆದಿರುವ ಎಲ್ಲಾ ಅಕ್ರಮಗಳನ್ನು ನ್ಯಾಯಾಂಗ ತ ನಿಖೆಗೆ ಒಳಪಡಿಸಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿರುವ ನಿವೇಶನ ಹಂಚಿಕೆ ಅವ್ಯವಹಾರವನ್ನು ನ್ಯಾಯಾಂಗ ತ ನಿಖೆಗೆ ವಹಿಸುವಂತೆ ಒತ್ತಾಯಿಸಿ ಭಾರತ ಕಮ್ಯುನಿಸ್ಟ್‌ (ಮಾರ್ಕ್ಸವಾದಿ)ಜಿಲ್ಲಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು.

ಹಳೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸಮಾವೇಶಗೊಂಡ ಸಮಿತಿ ಸದಸ್ಯರು ವಿವಿಧ ಘೋಷಣೆಗಳನ್ನು ಕೂಗಿದರು. ಆರ್ಥಿಕವಾಗಿ ದುರ್ಬಲರಾದ ಬಡವರಿಗೆ ಮನೆ ರಿಯಾಯಿತಿ ದರದಲ್ಲಿ ನಿವೇಶನ ನೀಡಬೇಕಾದ ಅಭಿವೃದ್ಧಿ ಪ್ರಾಧಿಕಾರವು ರಿಯಲ್ಎಸ್ಟೇಟ್ ಉದ್ಯಮಿಗಳಿಗೆ, ದಲ್ಲಾಳಿಗಳಿಗೆ ಪೂರಕವಾಗಿ ಕೆಲಸ ಮಾಡುತ್ತಿರುವುದನ್ನು ಖಂಡಿಸಿದರು. ಇದು ಅಕ್ರಮಗಳನ್ನು ಸಕ್ರಮ ಮಾಡುವ ಪ್ರಾಧಿಕಾರ ಎಂದು ಆರೋಪಿಸಿದರು.

ಪರಿಹಾರದ ನಿವೇಶನ ನೀಡುವಲ್ಲಿ 50:50 ಅನುಪಾತದಲ್ಲಿ ನಿವೇಶನ ಹಂಚಿಕೆಯಲ್ಲಿ ನಡೆದಿರುವ ಹಗರಣವೂ ಸೇರಿದಂತೆ ಈ ಹಿಂದೆ ನಡೆದಿರುವ ಎಲ್ಲಾ ಅಕ್ರಮಗಳನ್ನು ನ್ಯಾಯಾಂಗ ತ ನಿಖೆಗೆ ಒಳಪಡಿಸಬೇಕು. ಅಕ್ರಮವಾಗಿ ಹಂಚಿರುವ ನಿವೇಶನ ಹಿಂದಕ್ಕೆ ಪಡೆದು ಬಡವರಿಗೆ ಹಂಚಬೇಕು. ಹಲವು ವರ್ಷಗಳಿಂದ ಎಂಡಿಎ ನಲ್ಲಿ ಇರುವ ಅಧಿಕಾರಿ ಸಿಬ್ಬಂದಿ ವರ್ಗಾಯಿಸಿ ಅವರ ಮೇಲಿರುವ ಅಕ್ರಮಗಳನ್ನು ತೀವ್ರ ತನಿಖೆಗೆ ಒಳಪಡಿಸಬೇಕು ಎಂದು ಅವರು ಆಗ್ರಹಿಸಿದರು.

ಹಿಂದಿನ ಬಿಜೆಪಿ ಸರ್ಕಾರ ಭೂ ಸ್ವಾಧೀನ ಮಸೂದೆಗೆ ತಿದ್ದುಪಡಿ ತಂದು ರೈತರಲ್ಲದವರು ರೈತರಿಂದ ಭೂಮಿಕೊಳ್ಳಲು ಅವಕಾಶ ನೀಡಿರುವುದು ಕೂಡ ಈ ರೀತಿಯ ಹಗರಣಗಳಿಗೆ ಕಾರಣವಾಗಿ ರೈತರಿಗೆ ಅನ್ಯಾಯವಾಗಲಿದೆ. ಆದ್ದರಿಂದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಭೂ ಸ್ವಾಧೀನ ಮಸೂದೆಗೆ ತಿದ್ದುಪಡಿ ಹಿಂದಕ್ಕೆ ಪಡೆಯಬೇಕು ಎಂದು ಅವರು ಒತ್ತಾಯಿಸಿದರು.

ಜಿಲ್ಲಾ ಕಾರ್ಯದರ್ಶಿ ಜಗದೀಶ್ ಸೂರ್ಯ, ಜಿಲ್ಲಾ ಸಮಿತಿ ಸದಸ್ಯರಾದ ಜಿ. ಜಯರಾಂ, ಲ. ಜಗನ್ನಾಥ್, ಎನ್. ವಿಜಯ್ಕುಮಾರ್, ಸ್ಥಳೀಯ ಸಮಿತಿ ಕಾರ್ಯದರ್ಶಿ ರಾಜೇಂದ್ರ, ಸದಸ್ಯರಾದ ಆರ್. ಸುಬ್ರಹ್ಮಣ್ಯ, ಕೃಷ್ಣಮೂರ್ತಿ, ಶಾಕುಂತಲಾ ಬಾಲಾಜಿರಾವ್, ಬಲರಾಂ, ಶ್ರೀಧರ್, ಎನ್. ಸುಬ್ರಹ್ಮಣ್ಯ, ಕಲಿಂ ಪಾಷಾ, ಈಶ್ವರ್, ವಿಜಯ್ಕುಮಾರ್ಗೌಡ, ಶಿವಕುಮಾರ್, ಪುಟ್ಟಮಲ್ಲಯ್ಯ, ಸಿದ್ದಯ್ಯ, ರಾಘವೇಂದ್ರ, ನಾಗರಾಜ್, ಕುಮಾರ್, ಮೋನಿಷ್, ಯರಗಲ್, ಶ್ರೀಕಂಠ ಮೂರ್ತಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!