ಕನ್ನಡಪ್ರಭ ವಾರ್ತೆ ಹುಕ್ಕೇರಿ
ಪಟ್ಟಣದ ಸಂಸ್ಥೆಯ ಆವರಣದಲ್ಲಿ ಗುರುವಾರ ನಡೆದ 2025-26ನೇ ಸಾಲಿನ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಹಕ-ಸದಸ್ಯರಿಗೆ ತ್ವರಿತಗತಿಯಲ್ಲಿ ಸಮರ್ಪಕ ಮತ್ತು ಗುಣಮಟ್ಟದ ವಿದ್ಯುತ್ ಪೂರೈಸಲು ಆಡಳಿತ ಮಂಡಳಿ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಲು ರೂಪುರೇಷೆ ಸಿದ್ಧಪಡಿಸಿದೆ. ಇದರೊಂದಿಗೆ ಗ್ರಾಹಕಸ್ನೇಹಿ ಸಂಸ್ಥೆ ಎಂಬ ಹಿರಿಮೆಗೆ ಪಾತ್ರವಾಗಿದೆ ಎಂದರು.
ಸಂಸ್ಥೆ ಕಾರ್ಯವ್ಯಾಪ್ತಿಯಲ್ಲಿ ಈಗಾಗಲೇ 11 ಉಪ ವಿದ್ಯುತ್ ವಿತರಣಾ ಕೇಂದ್ರಗಳಿದ್ದು, ಬರುವ ದಿನಗಳಲ್ಲಿ ಬೆಳವಿ, ನಿಡಸೋಸಿ, ಪಾಶ್ಚಾಪೂರ ಹಾಗೂ ಶೇಕಿನ ಹೊಸೂರ ಗ್ರಾಮಗಳಲ್ಲಿ ಉಪ ವಿದ್ಯುತ್ ವಿತರಣಾ ಕೇಂದ್ರಗಳು ಮಂಜೂರಾಗಿದ್ದು, ಕಾಮಗಾರಿಗಳು ಟೆಂಡರ್ ಹಂತದಲ್ಲಿದೆ. ಇದರೊಂದಿಗೆ ಗ್ರಾಹಕ ಸದಸ್ಯರಿಗೆ ಅನುಕೂಲ ಕಲ್ಪಿಸಲು ಹಗಲಿರುಳು ಅವರ ಶ್ರೇಯೋಭಿವೃದ್ಧಿಗೆ ಶ್ರಮಿಸಲಾಗುತ್ತಿದೆ. 91,562 ಗ್ರಾಹಕರು ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಸೌಲಭ್ಯ ಪಡೆಯುತ್ತಿದ್ದಾರೆ ಎಂದು ನಿಲಜಗಿ ತಿಳಿಸಿದರು.ಯುವ ನಿರ್ದೇಶಕ ಪೃಥ್ವಿ ಕತ್ತಿ ಮಾತನಾಡಿ, 2025-26ನೇ ಸಾಲಿನಲ್ಲಿ ಒಟ್ಟು ₹ 288.15 ಕೋಟಿ ವಿದ್ಯುತ್ ಖರೀದಿ, ಇತರೆ ₹ 30.92 ಕೋಟಿ ಖರ್ಚು ಸೇರಿ ಒಟ್ಟು ₹ 319.07 ಕೋಟಿ ವೆಚ್ಚವಾಗಿದೆ. ವಿದ್ಯುತ್ ಮಾರಾಟದಿಂದ ₹ 314.72 ಕೋಟಿ ಹಾಗೂ ಇತರ ಆದಾಯದಿಂದ ₹16.58 ಕೋಟಿ ಸೇರಿ ಒಟ್ಟು 331.30 ಕೋಟಿ ಸಂಗ್ರಹವಾಗಿದೆ. ಇದರಿಂದ ಸಂಸ್ಥೆಗೆ ₹ 12.23 ಕೋಟಿ ಉಳಿತಾಯವಾಗಿದ್ದರೂ ಸಹ ಹುಬ್ಬಳ್ಳಿ ಹೆಸ್ಕಾಂನಿಂದ ಬಾಕಿ ಮೇಲಿನ ಬಡ್ಡಿ ₹ 24.77 ಕೋಟಿ ಆಕರಣೆ ಮಾಡಿದ್ದರಿಂದ ಹಾಗೂ ಸರ್ಕಾರದಿಂದ ಬರುವ ಸಹಾಯಧನ ₹ 40.37 ಕೋಟಿ ರೈಟ್ ಆಫ್ ಮಾಡಿದ್ದರಿಂದ ಸಂಘಕ್ಕೆ ₹ 52.91 ಕೋಟಿ ಹಾನಿಯವಾಗಿದೆ ಎಂದು ವಿವರಿಸಿದರು.
ವ್ಯವಸ್ಥಾಪಕ ನಿರ್ದೇಶಕ ಎಸ್.ಎಸ್.ಪೂಜಾರಿ ಸ್ವಾಗತಿಸಿದರು. ಸ್ಥಾನಿಕ ಅಭಿಯಂತರ ಎನ್.ಜೆ.ಖೆಮಲಾಪೂರೆ ನಿರೂಪಿಸಿದರು. ಜಿ.ಎಸ್.ಗಡದ ಸಭೆಯ ನಡವಳಿಕೆ ಓದಿದರು. ಲೆಕ್ಕಾಧಿಕಾರಿ ಎಸ್.ಎನ್.ಹಿರೇಮಠ ವಾರ್ಷಿಕ ಲೆಕ್ಕಪತ್ರಗಳಿಗೆ ಮಂಜೂರಿ ಪಡೆದರು. ಎಸ್.ಆರ್.ಮಲಗೌಡನವರ 2026-27ನೇ ಸಾಲಿಗೆ ತಯಾರಿಸಿದ ಅಂದಾಜು ಪತ್ರಿಕೆಗೆ ಮಂಜೂರಿ ಪಡೆದರು.