ನೀಟ್‌ ಪರೀಕ್ಷೆ: ಎಸ್‌ಬಿಆರ್‌ ವಿದ್ಯಾರ್ಥಿ ವಿನಯಕುಮಾರ್‌ ಕಲ್ಯಾಣ ಕರ್ನಾಟಕಕ್ಕೇ ಟಾಪರ್‌

KannadaprabhaNewsNetwork |  
Published : Jun 06, 2024, 12:30 AM IST
ಫೋಟೋ- ಎಸ್‌ಬಿಆರ್‌ ನೀಟ್‌ ಚಾಪ್ಪರ | Kannada Prabha

ಸಾರಾಂಶ

ರಾಷ್ಟ್ರಮಟ್ಟದ ನೀಟ್‌ ಪರೀಕ್ಷೆಯಲ್ಲಿ ಕಲಬುರಗಿ ಎಸ್‌ಬಿಆರ್‌ ಕಾಲೇಜಿನ ವಿನಯಕುಮಾರ ಕೆ. 705/720 ಅಂಕ ಪಡೆದು ಕಲ್ಯಾಣ ಕರ್ನಾಟಕ್ಕೆ ಪ್ರಥಮ ರ್‍ಯಾಂಕ್‌, ಪಂಚಾಕ್ಷರಿ ಆರ್. 700/720 ಅಂಕ ಪಡೆದು ಕಲ್ಯಾಣ ಕರ್ನಾಟಕ್ಕೆ ದ್ವಿತೀಯ ರ್‍ಯಾಂಕ್‌, 155 ವಿದ್ಯಾರ್ಥಿಗಳಿಗೆ 600ಕ್ಕೂ ಹೆಚ್ಚು ಅಂಕ, 823ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮೆಡಿಕಲ್‌ಗೆ ಅರ್ಹರಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಇಲ್ಲಿನ ಶರಣಬಸವೇಶ್ವರ ವಸತಿ ಸಂಯುಕ್ತ ಪದವಿ ಪೂರ್ವ ಎಸ್‌ಬಿಆರ್‌ ಕಾಲೇಜಿನಲ್ಲಿ ಅಭ್ಯಾಸ ಮಾಡಿದ ವಿದ್ಯಾರ್ಥಿಗಳು ವೈದ್ಯ ಶಿಕ್ಷಣಕ್ಕಾಗಿರುವ ರಾಷ್ಟ್ರ ಮಟ್ಟದ ನೀಟ್ ಪರೀಕ್ಷೆಯಲ್ಲಿ ಅಪ್ರತಿಮ ಸಾಧನೆ ಮಾಡಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಗೌರವ ಹೆಚ್ಚಿಸಿದ್ದಾರೆ.

ಗುಣಮಟ್ಟದ ಶಿಕ್ಷಣ ಮತ್ತು ಸಂಸ್ಕೃತಿಗೆ ಪ್ರಾಮುಖ್ಯತೆ ಕೊಡುವ ಎಸ್.ಬಿ.ಆರ್ ಕಾಲೇಜು ರಾಷ್ಟ್ರ ಮಟ್ಟದ ನೀಟ್ ಪರೀಕ್ಷೆಯಲ್ಲಿ ಪ್ರತೀ ವರ್ಷವೂ ಕೂಡಾ ಅಮೋಘ ಸಾಧನೆಯನ್ನು ಮಾಡುತ್ತಾ ಬಂದಿದ್ದು, ಈ ವರ್ಷದಲ್ಲಿ 155 ವಿದ್ಯಾರ್ಥಿಗಳು 600ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆಯುವುದರೊಂದಿಗೆ ಇತಿಹಾಸ ಸೃಷ್ಠಿಸಿದ್ದಾರೆ. ಜೊತೆಗೆ ಈ ವರ್ಷ 823ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮೆಡಿಕಲ್ ವಿಭಾಗಕ್ಕೆ ಪ್ರವೇಶ ಪಡೆಯಲು ಅರ್ಹರಾಗಿದ್ದಾರೆ. ಎಂದು ಕಾಲೇಜಿನ ಪ್ರಾಚಾರ್ಯರು ತಿಳಿಸಿದ್ದಾರೆ.

ವಿನಯಕುಮಾರ ಕೆ. 705/720 ಅಂಕಗಳನ್ನು ಗಳಿಸುವುದರೊಂದಿಗೆ ಕಲ್ಯಾಣ ಕರ್ನಾಟಕ ವಿಭಾಗಕ್ಕೆ ಪ್ರಥಮ ರ್‍ಯಾಂಕ್‌ ಪಡೆದರೆ, ಕು. ಪಂಚಾಕ್ಷರಿ ಆರ್. 700/720 ಕಲ್ಯಾಣ ಕರ್ನಾಟಕ ವಿಭಾಗಕ್ಕೆ ದ್ವಿತೀಯ ರ್‍ಯಾಂಕ್‌ ಪಡೆದು, ಸಾಧನೆ ಮೆರೆದಿದ್ದಾರೆ.

ಈ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು 700 ಕ್ಕೂ ಹೆಚ್ಚು ಅಂಕ ಪಡೆದರೆ, 32 ವಿದ್ಯಾರ್ಥಿಗಳು 650 - 699 ಕ್ಕೂ ಹೆಚ್ಚು ಅಂಕ ಗಳಿಸಿದ್ದಾರೆ, 12 ವಿದ್ಯಾರ್ಥಿಗಳು 600 - 649 ಕ್ಕೂ ಹೆಚ್ಚು ಅಂಕ ಪಡೆದರೆ, 7 ವಿದ್ಯಾರ್ಥಿಗಳು 550 - 599 ಕ್ಕೂ ಹೆಚ್ಚು ಅಂಕ ಪಡೆದಿದ್ದಾರೆ.

102 ವಿದ್ಯಾರ್ಥಿಗಳು 500 - 549ಕ್ಕೂ ಹೆಚ್ಚು, 92 ವಿದ್ಯಾರ್ಥಿಗಳು 450 - 499 ಕ್ಕೂ ಹೆಚ್ಚು ಅಂಕ, 60 ವಿದ್ಯಾರ್ಥಿಗಳು 400 - 449 ಕ್ಕೂ ಹೆಚ್ಚು ಅಂಕ ಪಡೆದಿದ್ದಾರೆ.

ವಿನಯಕುಮಾರ್‌ ಕಸ್ಬೇಗೌಡರ್‌, ಪಂಚಾಕ್ಷರಿ, ಮೊಹ್ಮದ್‌ ಬಹರುದ್ದೀನ್‌, ಮೇಘನಾ, ಸಿದ್ದನಗೌಡ, ಮಲಲಿಕಾರ್ಜುನ, ಅಂಬರೇಶ, ವಿಸಾಳ, ಅಪ್ಪಣ್ಣ, ವಿಶ್ವರಾಜ್‌, ಶ್ರೀಶಾಂತರೆಡ್ಡಿ, ಅರುಣ, ಸಮರ್ಥ, ವಿರೇಶ ಮಠಪತಿ, ಆನಂದರಾಜ, ಆನಂದರಾಜ, ಪವನ ಪೋದ್ದಾರ್‌, ಅಶ್ವಿನಿ, ರಂಜಿತ, ಶರಣ, ಅರುಣ ಸೇರಿದಂತೆ ನೂರಾರು ಮಕ್ಕಳು ಅಪ್ರತಿಮ ಸಾಧನೆಯ ಪಟ್ಟಿಯಲ್ಲಿ ಇದ್ದಾರೆ.

ವಿದ್ಯಾಭಂಡಾರಿ ಡಾ. ಶರಣಬಸವಪ್ಪ ಅಪ್ಪ ಇವರು ಶರಣಬಸವೇಶ್ವರರ ಕೃಪಾ ಆಶೀರ್ವಾದಿಂದ ಎಸ್.ಬಿ.ಆರ್ ಕಾಲೇಜು ಅಮೋಘ ಸಾದನೆ ಮಾಡಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ ಎಸ್.ಬಿ.ಆರ್ ನೀಟ್ ನಲ್ಲಿ ನಂಬರ್ ಒನ್ ಫಲಿತಾಂಶ ಬಂದಿರುವುದಕ್ಕೆ, ಗುರುಗಳ ಕಾಯಕ ಹಾಗೂ ಶಿಷ್ಯರ ಸಮರ್ಪಣೆಯ ಮನೋಭಾವದಿಂದ ಈ ಸಾಧನೆ ಸಾದ್ಯವಾಗಿದೆ. ಈ ಪ್ರತಿಭಾನ್ವಿತ ವಿದ್ಯಾರ್ಥಿಗಳ ಭವಿಷ್ಯ ಅರ್ಥಪೂರ್ಣವಾಗಲಿ ಎಂದು ಆಶೀರ್ವದಿಸಿದ್ದಾರೆ.

ಶರಣಬಸವೇಶ್ವರ ವಿದ್ಯಾವರ್ಧಕ ಸಂಘ ಅಧ್ಯಕ್ಷರಾದ ಮಾತೋಶ್ರಿ ಡಾ. ದಾಕ್ಷಾಯಿಣಿ ಅವ್ವಾಜಿ ಇವರು ವಿಚಾರವಂತ ಪಾಲಕರು, ತಮ್ಮ ಮಕ್ಕಳನ್ನು ನಮ್ಮ ಸಂಸ್ಥೆಯಲ್ಲಿ ಓದಲು ಕಳುಹಿಸಿದ್ದಾರೆ. ಗುರು-ಶಿಷ್ಯರು ಶೃದ್ಧೆಯಿಂದ ಪರಿಶ್ರಮ ಪಟ್ಟಿದ್ದಕ್ಕೆ ಈ ಫಲಿತಾಂಶ ಪಡೆಯಲು ಸಾಧ್ಯವಾಯಿತು. ಎಂದು ಹೇಳಿ, ವಿದ್ಯಾರ್ಥಿಗಳ ಈ ಸಾಧನೆಗೆ ಹರ್ಷ ವ್ಯಕ್ತಪಡಿಸಿ, ಅವರ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸಿದ್ದಾರೆ.

ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಇ‍ವರು, ಸಾಧನೆಗೈದ ಪ್ರತಿಭಾಸಂಪನ್ನ ವಿದ್ಯಾರ್ಥಿಗಳ ಪರಿಶ್ರಮ ಕೊಂಡಾಡಿದ್ದಾರೆ. ಪ್ರಾಚಾರ್ಯರಾದ ಎನ್.ಎಸ್.ದೇವರಕಲ್ ಸರ್ ಅವರ ತ್ಯಾಗ ಮತ್ತು ಸಮಪರ್ಣೆಯಿಂದ ಈ ರೀತಿ ವಿದ್ಯಾರ್ಥಿಗಳು ಗರಿಷ್ಠ ಮಟ್ಟದ ಫಲಿತಾಂಶ ಪಡೆಯಲು ಸಾಧ್ಯವಾಯಿತು. ಡಾ. ಶ್ರೀಶೈಲ್ ಹೋಗಾಡೆ ಅವರ ಮೇಲ್ವಿಚಾರಣೆಯಲ್ಲಿ ಹಗಲಿರುಳು ನಿಷ್ಠೆಯಿಂದ ಕಾಯಕ ತತ್ವದಂತೆ ವಿದ್ಯಾರ್ಥಿಗಳ ಜೊತೆಗೆ ನಿರಂತರ ಪರಿಶ್ರಮ ಪಟ್ಟ ಗುರು-ಶಿಷ್ಯರ ಗೆಲುವಿಗೆ ಕನ್ನಡಿ ಹಿಡಿದಂತೆ ಈ ಫಲಿತಾಂಶವಿದೆ ಎಂದು ದೇಶಮುಖ ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಾಳಿಪಟ ದಾರ ಕುತ್ತಿಗೆ ಸೀಳಿ ಮಗಳನ್ನು ಹಾಸ್ಟೆಲ್‌ನಿಂದ ಕರೆತರಲು ಹೊರಟಿದ್ದ ಅಪ್ಪ ದಾರುಣ ಸಾವು
ಪೌರಾಯುಕ್ತೆಗೆ ಬೆಂಕಿ: ಕಾಂಗ್ರೆಸ್ಸಿಗನಿಂದ ಧಮ್ಕಿ