ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ: ಕೇಂದ್ರದ ವಿರುದ್ಧ ಪತ್ರಿಭಟನೆ

KannadaprabhaNewsNetwork |  
Published : May 27, 2026, 01:30 AM IST
ಶಿರ್ಷಿಕೆ-26ಕೆ.ಎಂ.ಎಲ್‌.ಆರ್.1-ಮಾಲೂರಿನ ಕರವೇ ಕಾರ್ಯಕರ್ತರು ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ತಡೆಗಟ್ಟಲು ವಿಫಲವಾದ ಕೇಂದ್ರ ಸರ್ಕಾರದ ವಿರುದ್ಧ ಪತ್ರಿಭಟನೆ ನಡೆಸಿದರು. | Kannada Prabha

ಸಾರಾಂಶ

ದೇಶಾದ್ಯಂತ ಸುಮಾರು 26 ಲಕ್ಷ ವಿದ್ಯಾರ್ಥಿಗಳು ನೀಟ್‌ ಪರಿಕ್ಷೆಯಲ್ಲಿ ಭಾಗವಹಿಸಿ ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಹೊರಟಿದ್ದರು. ವೈದ್ಯ ಪದವಿಯ ಕನಸು ಕಂಡಿದ್ದ ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆಯ ಸೋರಿಕೆಯಿಂದ ಕಂಗಾಲಾಗುವಂತೆ ಮಾಡಿದೆ. ಕೆಲವು ಮಕ್ಕಳು ಇದರಿಂದ ಹತಾಶರಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಕ್ಕಳ ಮೂಲಕ ಸುಂದರ ಕನಸು ಕಂಡಿದ್ದ ಪೋಷಕರ ನೋವು ಹೇಳತೀರದಾಗಿದೆ

ಕನ್ನಡಪ್ರಭ ವಾರ್ತೆ,ಮಾಲೂರು

ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ತಡೆಗಟ್ಟಲು ವಿಫಲವಾಗಿರುವ ಕೇಂದ್ರ ಸರ್ಕಾರದ ನಿರ್ಲಕ್ಷ್ಯವನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಪಟ್ಟಣದಲ್ಲಿ ಮೆರವಣಿಗೆ ನಡೆಸಿ ತಹಸೀಲ್ದಾರ್‌ ಅವರಿಗೆ ಮನವಿ ಪತ್ರ ಸಲ್ಲಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಕರವೇ ಅಧ್ಯಕ್ಷ ದೊಡ್ಡಶಿವಾರ ನಾಣಿ ಅವರು ದೇಶಾದ್ಯಂತ ಸುಮಾರು 26 ಲಕ್ಷ ವಿದ್ಯಾರ್ಥಿಗಳು ನೀಟ್‌ ಪರಿಕ್ಷೆಯಲ್ಲಿ ಭಾಗವಹಿಸಿ ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಹೊರಟಿದ್ದರು. ವೈದ್ಯ ಪದವಿಯ ಕನಸು ಕಂಡಿದ್ದ ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆಯ ಸೋರಿಕೆಯಿಂದ ಕಂಗಾಲಾಗುವಂತೆ ಮಾಡಿದೆ. ಕೆಲವು ಮಕ್ಕಳು ಇದರಿಂದ ಹತಾಶರಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಕ್ಕಳ ಮೂಲಕ ಸುಂದರ ಕನಸು ಕಂಡಿದ್ದ ಪೋಷಕರ ನೋವು ಹೇಳತೀರದಾಗಿದೆ ಎಂದರು.

ಕೇಂದ್ರ ಸರ್ಕಾರವು ಈ ವಿಷಯದಲ್ಲಿ ಸಂಪೂರ್ಣ ವಿಫಲವಾಗಿದೆ. ಇನ್ನೂ ಮುಂದೆ ಕೇಂದ್ರ ಸರ್ಕಾರ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳ ಸೋರಿಕೆ ಆಗದಂತೆ ನೋಡಿಕೊಂಡು ಪರೀಕ್ಷೆಗಳು ವ್ಯವಸ್ಥಿತವಾಗಿ ನಡೆಯುವಂತೆ ಮಾಡಬೇಕು. ಪುನರಾರ್ತನೆ ಆದರೆ ಕರವೇ ರಾಜ್ಯ ಮಟ್ಟದಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.ವೇದಿಕೆಯ ಜಿಲ್ಲಾಧ್ಯಕ್ಷ ಚಂಬೆ ರಾಜೇಶ್‌, ದಯಾನಂದ್‌, ತಿಮ್ಮರಾಯಪ್ಪ, ರಾಮಕೃಷ್ಣಪ್ಪ, ಕಡತೂರು ರಮೇಶ್‌, ಕೆ.ಕೆ .ನಾರಾಯಣಸ್ವಾಮಿ, ಸಿ.ಡಿ. ನಾಗರಾಜ್‌ . ಸುಧಾಕರ್‌, ಮುನಿವೆಂಕಟಪ್ಪ, ಮಣಿಗಂಡನ್‌, ಸುಜಾತ, ದಾಕ್ಷಾಯಿಣಿ, ಕೆಂಪನಹಳ್ಳಿ ರವಿ ಇನ್ನಿತರರು ಇದ್ದರು.

-ಶೀರ್ಷಿಕೆ-26ಕೆ.ಎಂ.ಎಲ್‌.ಆರ್.1-

ಮಾಲೂರಿನಲ್ಲಿ ಕರವೇ ಕಾರ್ಯಕರ್ತರು ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ತಡೆಗಟ್ಟಲು ವಿಫಲವಾದ ಕೇಂದ್ರ ಸರ್ಕಾರದ ವಿರುದ್ಧ ಪತ್ರಿಭಟನೆ ನಡೆಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾಳ ಸಂತೆಯಲ್ಲಿ ರಸಗೊಬ್ಬರ ಮಾಡಿದರೆ ಕಠಿಣ ಕ್ರಮ
ಸಿಲೆಂಡರ್‌ ಪೂರೈಕೆ ಮಾಡುತ್ತಿದ್ದ ವ್ಯಕ್ತಿಯಿಂದ ವಂಚನೆ