ರಾಮನಗರ: ಎಲ್ಲಾ ರಾಜಕೀಯ ಪಕ್ಷಗಳು ಹಿಂದುಳಿದ ವರ್ಗಗಳನ್ನು ನಿರ್ಲಕ್ಷಿಸಿದ್ದು, ಮುಖ್ಯ ವಾಹಿನಿಗೆ ಬಂದು ಸೂಕ್ತ ಸ್ಥಾನಮಾನ ಪಡೆಯಲು ಹಿಂದುಳಿದ ಜಾತಿಗಳು ಸಂಘಟಿತರಾಗುವುದು ಅಗತ್ಯವಿದೆ ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಹೇಳಿದರು.
ಹಿಂದುಳಿದ ಸಮುದಾಯಕ್ಕೆ ಸೇರಿದ್ದ ದೇವರಾಜ ಅರಸು ಅವರು ಮುಖ್ಯಮಂತ್ರಿಗಳಾಗಿದ್ದ ಸಮಯದಲ್ಲಿ ಅವರ ಮಾತನ್ನು ಘೋಷಣೆಗೆ ಸೀಮಿತಗೊಳಿಸಲಿಲ್ಲ. ಬದಲಿಗೆ ಸಣ್ಣ ಸಣ್ಣ ಸಮುದಾಯದವರಿಗೆ ಅಧಿಕಾರ ಸಿಗುವಂತಾಯಿತು. ಅದರ ಪರಿಣಾಮ ರಾಜ್ಯದಲ್ಲಿ ಧರಂಸಿಂಗ್, ವೀರಪ್ಪಮೊಯ್ಲಿ, ಎಸ್.ಬಂಗಾರಪ್ಪ ಮುಖ್ಯಮಂತ್ರಿಗಳಾಗಲು, ಡಿ.ಟಿ.ರಾಮು, ಎಚ್.ಎಂ. ರೇವಣ್ಣ, ಅಬ್ದುಲ್ ಸಮದ್, ವಿಶ್ವನಾಥ್ ಶಾಸಕರಾಗಿ, ಸಚಿವರಾಗಿ ಸೇವೆ ಸಲ್ಲಿಸಲು ಸಾಧ್ಯವಾಯಿತು ಎಂದು ಶೇಷಾದ್ರಿ ಹೇಳಿದರು.
ಅಖಿಲ ಭಾರತ ಕುಂಬಾರರ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಡಾ.ಶಿವಕುಮಾರ್ ಚೌಡಶೆಟ್ಟಿ ಮಾತನಾಡಿ, ಹಿಂದುಳಿದವರು ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ನಮಗೆ ದೇವರಾಜ ಅರಸು ಅವರು ಗುರುಗಳಾಗಿದ್ದಾರೆ. ಸಣ್ಣ ಪುಟ್ಟ ಸಮಾಜಗಳಿಗೆ ಅವರು ಕೊಟ್ಟ ಕೊಡುಗೆಗಳ ಪರಿಣಾಮ ಇಂದು ಸಮಾಜದ ಪ್ರಗತಿ ಜೊತೆಗೆ ಶೈಕ್ಷಣಿಕವಾಗಿ ಮುಂದುವರೆಯುತ್ತಿದೆ ಎಂದರು.ರಾಜ್ಯದಲ್ಲಿ ಹಿಂದುಳಿದ ಜಾತಿಗಳ ಗಟ್ಟಿಯಾದ ಧ್ವನಿಗಳು ಇಲ್ಲದ ಕಾರಣ ಅಧಿಕಾರದಲ್ಲಿದ್ದ ನಮ್ಮವರನ್ನು ಅಲ್ಪ ಸಮಯದಲ್ಲಿ ರಾಜಕೀಯ ಹುನ್ನಾರ ನಡೆಸಿ ಕೆಳಗಿಳಿಸಿದ ಉದಾಹರಣೆಗಳು ಸಾಕಷ್ಟಿವೆ. ಹಾಗಾಗಿ ನಾವೆಲ್ಲರೂ ರಾಜ್ಯಾದ್ಯಂತ ಸಂಘಟನೆಯನ್ನು ಗಟ್ಟಿಗೊಳಿಸುವ ಕೆಲಸ ಮಾಡಬೇಕಿರುವುದು ನಮಗೆ ಅನಿವಾರ್ಯವಾಗಿದೆ. ಇದರಿಂದ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡಿ ನಮ್ಮ ಹಕ್ಕುಗಳನ್ನು ಪಡೆಯಬಹುದು ಎಂದು ಹೇಳಿದರು.
ಬಾಕ್ಸ್ ..................
ಬೆಂಗಳೂರು ದಕ್ಷಿಣ ಜಿಲ್ಲಾ ಹಿಂದುಳಿದ ಜಾತಿಗಳ ಮಹಾ ಒಕ್ಕೂಟದ ಮಹಿಳಾ ಘಟಕದ ಅಧ್ಯಕ್ಷರಾಗಿ ಶಶಿಕಲಾ ಶಿವಕುಮಾರ್ ಚೌಡಶೆಟ್ಟಿ, ಗೌರವಾಧ್ಯಕ್ಷರಾಗಿ ಪವಿತ್ರ ಆರ್. ರೆಡ್ಡಿ, ಉಪಾಧ್ಯಕ್ಷರಾಗಿ ಅರ್ಪಿತಾ, ರಾಮನಗರ ತಾಲೂಕು ಅಧ್ಯಕ್ಷರಾಗಿ ಶೃತಿ, ಚನ್ನಪಟ್ಟಣ ತಾಲ್ಲೂಕು ಅಧ್ಯಕ್ಷರಾಗಿ ರುಕ್ಮಿಣಿ, ಕನಕಪುರ ತಾಲೂಕು ಅಧ್ಯಕ್ಷರಾಗಿ ಮಂಜುಳಾ, ಹಾರೋಹಳ್ಳಿ ತಾಲ್ಲೂಕು ಅಧ್ಯಕ್ಷರಾಗಿ ಸುಮಾ ಆಯ್ಕೆ ಯಾಗಿದ್ದಾರೆ.
ನನಗೆ ವಹಿಸಿರುವ ಮಹಿಳಾ ಘಟಕದ ಅಧ್ಯಕ್ಷ ಸ್ಥಾನ ಅಧಿಕಾರವಲ್ಲ ಬದಲಿಗೆ ಜವಬ್ದಾರಿಯಾಗಿದೆ. ಜಿಲ್ಲೆಯಾದ್ಯಂತ ಹಿಂದುಳಿದ ಜಾತಿಗಳ ಮಹಿಳೆ ಯರನ್ನು ಸಂಘಟಿಸಿ ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಮಾಡುತ್ತೇನೆ. ಜೊತೆಗೆ ಸಮಾಜದಲ್ಲಿ ಮಹಿಳೆಯರು ಸಂಘಟನೆಯ ದೊಡ್ಡ ಶಕ್ತಿ ಎಂಬು ದನ್ನು ಎಲ್ಲರ ಸಹಕಾರದಲ್ಲಿ ಮಾಡಿ ತೋರಿಸುತ್ತೇನೆ.
15ಕೆಆರ್ ಎಂಎನ್ 3.ಜೆಪಿಜಿ