ನೇಹಾ ಹತ್ಯೆ ಪ್ರಕರಣ ಮುಚ್ಚಿಹಾಕುವ ಹುನ್ನಾರ

KannadaprabhaNewsNetwork |  
Published : May 01, 2024, 01:20 AM IST
44 | Kannada Prabha

ಸಾರಾಂಶ

ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ತಮ್ಮ ಭಾಷೆಯಲ್ಲಿ ವಿಚಾರಣೆ ನಡೆಸಿದ್ದರೆ ಅವನು ಕೊಲೆಗೆ ಸಂಬಂಧಿಸಿದಂತೆ ಎಲ್ಲ ವಿಷಯ ಹೇಳುತ್ತಿದ್ದ. ಅವನನ್ನು ನೋಡಿದರೆ ಸಮಾಜ ವಿರೋಧಿ ಸಂಘಟನೆಯವರೊಂದಿಗೆ ಸಂಬಂಧ ಹೊಂದಿರಬಹುದು ಎಂಬ ಅನುಮಾನವಿದೆ.

ಹುಬ್ಬಳ್ಳಿ:

ನೇಹಾ ಕೊಲೆ ಪ್ರಕರಣವನ್ನು ವಿಳಂಬ ಮಾಡುವ ಮೂಲಕ ರಾಜ್ಯ ಸರ್ಕಾರ ಹಾಗೂ ಪೊಲೀಸ್‌ ಇಲಾಖೆ ಮುಚ್ಚಿಹಾಕಲು ಪ್ರಯತ್ನಿಸುತ್ತಿದೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್‌. ಅಶೋಕ ಆರೋಪಿಸಿದರು.

ಇಲ್ಲಿನ ನೇಹಾಳ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಯಾವುದೇ ಒಂದು ಕೊಲೆ ಅಥವಾ ದುರ್ಘಟನೆ ನಡೆದಾಗ 24 ಗಂಟೆಯೊಳಗಾಗಿ ಘಟನೆ ನಡೆದ ಸ್ಥಳದಲ್ಲಿನ ಸೂಕ್ತ ಸಾಕ್ಷಾಧಾರಗಳನ್ನು ಪೊಲೀಸರು ಸಂಗ್ರಹಿಸಬೇಕು. ಆದರೆ, ನೇಹಾ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಿರುವುದನ್ನು ಬಿಟ್ಟರೆ ಮತ್ಯಾವ ಪ್ರಕ್ರಿಯೆ ನಡೆದಿಲ್ಲ ಎಂದರು.

ಘಟನೆ ನೋಡಿದರೆ ಲವ್ ಜಿಹಾದ್ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಇದು ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ ಎಂಬ ಕಾರಣಕ್ಕೆ ಅದನ್ನು ಮರೆಮಾಚಲು ಸುಖಾಸುಮ್ಮನೆ ವಿಳಂಬ ಮಾಡುವ ಕಾರ್ಯ ನಡೆದಿದೆ. ಪೊಲೀಸರೇ ಆರೋಪಿಯನ್ನು ರಕ್ಷಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿದರು.

ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ತಮ್ಮ ಭಾಷೆಯಲ್ಲಿ ವಿಚಾರಣೆ ನಡೆಸಿದ್ದರೆ ಅವನು ಕೊಲೆಗೆ ಸಂಬಂಧಿಸಿದಂತೆ ಎಲ್ಲ ವಿಷಯ ಹೇಳುತ್ತಿದ್ದ. ಅವನನ್ನು ನೋಡಿದರೆ ಸಮಾಜ ವಿರೋಧಿ ಸಂಘಟನೆಯವರೊಂದಿಗೆ ಸಂಬಂಧ ಹೊಂದಿರಬಹುದು ಎಂಬ ಅನುಮಾನವಿದೆ. ಈ ಕುರಿತು ಸರ್ಕಾರ ಸೂಕ್ತ ತನಿಖೆ ನಡೆಸುವ ಅವಶ್ಯಕತೆ ಇದೆ. ಈ ಪ್ರಕರಣ ಮುಚ್ಚಿ ಹಾಕಲು ಕೆಲವು ಕಾಣದ ಕೈಗಳು ಕೆಲಸ ಮಾಡುತ್ತಿವೆಯಾ ಎಂಬ ಅನುಮಾನ ಮೂಡುತ್ತಿದೆ ಎಂದು ಹರಿಹಾಯ್ದರು.

ಇದೀಗ ಸರ್ಕಾರ ಈ ಪ್ರಕರಣವನ್ನು ಸಿಐಡಿ ತನಿಖೆಗೆ ಒಳಪಡಿಸಿದೆ. ಆದರೆ, ಇದರಲ್ಲಿ ನಮಗೆ ನಂಬಿಕೆ ಇಲ್ಲ, ಹೀಗಾಗಿ ನೇಹಾ ಪಾಲಕರೇ ಒತ್ತಾಯಿಸಿದಂತೆ ಪ್ರಕರಣವನ್ನು ಸಿಬಿಐಗೆ ವಹಿಸಲಿ ಎಂದರು.

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶಾಸಕ ಮಹೇಶ ಟೆಂಗಿನಕಾಯಿ, ನೇಹಾ ತಂದೆ ನಿರಂಜನ ಹಿರೇಮಠ ಸೇರಿದಂತೆ ಹಲವರಿದ್ದರು.

PREV

Recommended Stories

ಬೆಂಗಳೂರು ನಗರದ ಅಭಿವೃದ್ಧಿಗೆ 1.35 ಲಕ್ಷ ಕೋಟಿ ರು. ಯೋಜನೆ
ಒಂದೇ ದಿನ ಮೆಟ್ರೋದಲ್ಲಿ 11 ಲಕ್ಷ ಜನ ಪ್ರಯಾಣ - ಹೊಸ ದಾಖಲೆ ಸೃಷ್ಟಿ