ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಹುಬ್ಬಳ್ಳಿ ಬಿವಿಬಿ ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಖಂಡಿಸಿ ಮಂಗಳವಾರ ಕರೆ ನೀಡಿದ್ದ ಮುದ್ದೇಬಿಹಾಳ ಬಂದ್ಗೆ ಬೆಂಬಲ ವ್ಯಕ್ತವಾಯಿತು.ನೇಹಾ ಹಿರೇಮಠ ಯುವತಿಯ ಕೊಲೆ ಪ್ರಕರಣವನ್ನು ಖಂಡಿಸಿ ಪಟ್ಟಣದ ಅಡತ್ ಮರ್ಚಂಟ್ ಅಸೋಶಿಯೇಷನ್, ಕಿರಾಣಾ ವ್ಯಾಪಾರಸ್ಥರ ಸಂಘ, ಸ್ಟೇಶನರಿ ವ್ಯಾಪಾರಸ್ಥರು, ಬುಕ್ ಸ್ಟಾಲ್, ಹಾರ್ಡ್‌ವೇರ್ ವ್ಯಾಪಾರಸ್ಥರು ಸೇರಿದಂತೆ ಇತರೆ ಎಲ್ಲ ವ್ಯಾಪಾರಸ್ಥರು, ನಾಗರಿಕರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಅರ್ಧ ದಿನ ಸ್ವಯಂಪ್ರೇರಿತವಾಗಿ ಬಂದ್ ಮಾಡಿ, ಬೆಂಬಲ ನೀಡಿದರು.
ನಂತರ ಪಟ್ಟಣದ ರಾಘವೇಂದ್ರ ಮಂಗಲಭವನದಲ್ಲಿ ವಿವಿಧ ಹಿಂದುಪರ ಸಂಘಟನೆಗಳ ನೇತೃತ್ವದಲ್ಲಿ ನೇಹಾಳ ಭಾವಪೂರ್ಣ ಶ್ರದ್ಧಾಂಜಲಿ ಸಭೆ ನಡೆಯಿತು. ಈ ವೇಳೆ ಮಾತನಾಡಿದ ಮಾಜಿ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ), ಹುಬ್ಬಳ್ಳಿ ಬಿವಿಬಿ ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠ ಅನ್ನು ಬರ್ಬರವಾಗಿ ಕೊಲೆ ಮಾಡಿದ್ದು ಖಂಡನೀಯ. ಇದರಿಂದ ಇಡೀ ಮಾನವಕುಲವೇ ತಲೆ ತಗ್ಗಿಸುವಂತಾಗಿದೆ. ಪದವೀಧರೆಯಾಗಿ ಹೆತ್ತವರ ಕನಸು ನನಸು ಮಾಡುವ ಆಸೆ ಇಟ್ಟುಕೊಂಡಿದ್ದ ನೇಹಾ ೨೩ನೇ ವಯಸ್ಸಿನಲ್ಲಿಯೇ ಎಲ್ಲರಿಂದ ದೂರವಾಗಿದ್ದು ನಿಜಕ್ಕೂ ನೋವನ್ನುಂಟು ಮಾಡಿದೆ. ಈ ಹಿನ್ನೆಲೆಯಲ್ಲಿ ಭಗವಂತನು ಅವಳ ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದು ಪ್ರಾರ್ಥಿಸಿದರು.ಈ ವೇಳೆ ವಿಶ್ವ ಹಿಂದೂ ಪರಿಷತ್ ವಿಭಾಗಿಯ ಪ್ರಮುಖ ಶ್ರೀಮಂತ ದುದ್ದಗಿ, ಕೆಂಚಪ್ಪ ಬಿರಾದಾರ, ಗಣ್ಯ ಉದ್ಯಮಿಗಳಾದ ವಾಸುದೇವ ಶಾಸ್ತ್ರೀ, ವಿಕ್ರಮ ಓಸ್ವಾಲ್, ಪಟೇಲ್ ಸಮಾಜದ ಅಧ್ಯಕ್ಷ ಉಮಾರಾಮ ಪಟೇಲ್, ದಲಿತ ಮುಖಂಡ ಹರೀಶ ನಾಟಿಕಾರ, ಡಾ.ವಿರೇಶ ಪಾಟೀಲ, ನ್ಯಾಯವಾದಿ ಎಂ ಆರ್ ಪಾಟೀಲ, ಸಿದ್ದರಾಜ ಹೊಳಿ, ಅಶೋಕ ಚಿನಿವಾರ, ರಾಜು ಬಳ್ಳೋಳಿ, ರಾಜಶೇಖರ ಹೊಳಿ, ಸಹನಾ ಬಡಿಗೇರ, ಪ್ರೀತಿ ಕಂಬಾರ, ಸಂಗಮ್ಮ ದೇವರಳ್ಳಿ, ಕಾವೇರಿ ಕಂಬಾರ, ಗೌರಮ್ಮ ಹುನಗುಂದ, ರವೀಂದ್ರ ಬಿರಾದಾರ, ಶ್ರೀಶೈಲ ದೊಡಮನಿ, ಪ್ರಭುಗೌಡ ಪಾಟೀಲ, ಬಸಲಿಂಗಪ್ಪ ರಕ್ಕಸಗಿ, ಶಿವಯೋಗೆಪ್ಪ ರಾಂಪೂರ, ರಜಪೂತ ಸಮಾಜದ ಮದನಸಿಂಗ್ ರಾಜಸ್ಥಾನ, ಪರುಶುರಾಮ ನಾಲತವಾಡ, ಪರುಶುರಾಮ ಪವಾರ, ಲಕ್ಷ್ಮೀಚಂದ ಓಸ್ವಾಲ್, ಸಂಜು ಬಾಗೇವಾಡಿ, ಅಶೋಕ ರಾಠೋಡ, ಪುನೀತ ಹಿಪ್ಪರಗಿ, ಉದಯ ರಾಯಚೂರ ಇತರರು ಇದ್ದರು.
---ಕೋಟ್
ನೇಹಾಳ ಕೊಲೆ ಬಗ್ಗೆ ರಾಜ್ಯ ಸರ್ಕಾರ ಎಲ್ಲ ಹಂತಗಳಲ್ಲೂ ಸಮಗ್ರ ತನಿಖೆ ನಡೆಸಿ ಆರೋಪಿ ಫಯಾಜನಿಗೆ ಜೊತೆಗೆ ಈ ಕೃತ್ಯದ ಹಿಂದೆ ಯಾರಾದರೂ ಭಾಗಿಯಾಗಿದ್ದರೂ ಅವರಿಗೆ ತಕ್ಕ ಶಿಕ್ಷೆಯಾಗಬೇಕು. ಈ ಮೂಲಕ ನೇಹಾಳ ಆತ್ಮಕ್ಕೆ ಶಾಂತಿ ಕೊಡಬೇಕು.-ಎ.ಎಸ್.ಪಾಟೀಲ(ನಡಹಳ್ಳಿ), ಮಾಜಿ ಶಾಸಕ