ನೆಲ್ಲಿಕಾರು: ಸ್ವಾಮಿ ವಿವೇಕಾನಂದ, ಸುಭಾಷ್‌ ಚಂದ್ರ ಬೋಸ್‌ ಜಯಂತಿ ಆಚರಣೆ

KannadaprabhaNewsNetwork |  
Published : Feb 04, 2025, 12:34 AM IST
32 | Kannada Prabha

ಸಾರಾಂಶ

ಹಿಂದೂ ಜಾಗರಣ ವೇದಿಕೆ ಮೂಡುಬಿದಿರೆ ತಾಲೂಕು, ಮಂಗಳೂರು ಗ್ರಾಮಾಂತರ ಜಿಲ್ಲೆ ಆಶ್ರಯದಲ್ಲಿ ಸ್ವಾಮೀ ವಿವೇಕಾನಂದ ಮತ್ತು ನೇತಾಜಿ ಸುಭಾಷ್‌ ಚಂದ್ರ ಬೋಸ್ ಜಯಂತಿಯ ಪ್ರಯುಕ್ತ ನೆಲ್ಲಿಕಾರಿನ ಶೋಭಾ ಯಾತ್ರೆ ಮತ್ತು ಯುವ ಸಮಾವೇಶ ನೆರವೇರಿತು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ನಮ್ಮ ಸಮಾಜ ಸರಿಯಾಗಬೇಕು. ಧರ್ಮ ಸದೃಢವಾಗಬೇಕು ಎಂದು ಕನಸು ಕಂಡವರು ನೇತಾಜಿ ಮತ್ತು ವಿವೇಕಾನಂದರು. ದೇಶ, ದೇವರು ಮತ್ತು ಧರ್ಮ ಉಳಿಯಬೇಕೆಂದು ಅವರು ಅಂದು ಮಾಡಿದ ಪಾಠ ಇಂದಿನ ಮಕ್ಕಳಿಗೆ ಸಿಕ್ಕಿದರೆ ಆಗ ಅವರೂ ಈ ದೇಶದ ಆ ಇಬ್ಬರು ಮಹಾ ಪುರುಷರಂತೆ ಆಗಲು ಸಾಧ್ಯವಿದೆ ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದ್ದಾರೆ.

ಹಿಂದೂ ಜಾಗರಣ ವೇದಿಕೆ ಮೂಡುಬಿದಿರೆ ತಾಲೂಕು, ಮಂಗಳೂರು ಗ್ರಾಮಾಂತರ ಜಿಲ್ಲೆ ಆಶ್ರಯದಲ್ಲಿ ಸ್ವಾಮೀ ವಿವೇಕಾನಂದ ಮತ್ತು ನೇತಾಜಿ ಸುಭಾಷ್‌ ಚಂದ್ರ ಬೋಸ್ ಜಯಂತಿಯ ಪ್ರಯುಕ್ತ ನೆಲ್ಲಿಕಾರಿನಲ್ಲಿ ನಡೆದ ಶೋಭಾ ಯಾತ್ರೆ ಮತ್ತು ಯುವ ಸಮಾವೇಶ ಉದ್ಘಾಟಿಸಿದ ಅವರು ದಿಕ್ಸೂಚಿ ಭಾಷಣ ಮಾಡಿದರು.

ಯುವ ಜನತೆಯಲ್ಲಿ ದೇಶ ಭಕ್ತಿ ಹುಟ್ಟಿಸುವ ನಿಟ್ಟಿನಲ್ಲಿ ಹಿಂ.ಜಾ.ವೇ. ಅಲ್ಲಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿ ಸಮಾಜವನ್ನು ಸಂಘಟಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಯೋಜಕ ನರಸಿಂಹ ಮಾಣಿ ಮಾತನಾಡಿ, ಕಾರ್ಯಕರ್ತನ ಕೈಯಲ್ಲಿ ಪುರಸಭೆ ಮಾರುಕಟ್ಟೆ ಇರುವುದನ್ನು ಸ್ವಪಕ್ಷೀಯರೇ ಸಹಿಸದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಬೆನ್ನಿಗೆ ಚೂರಿ ಹಾಕುವ, ಮತ್ಸರ್ಯ ತೋರುವ ಗುಣ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.

ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಪುಷ್ಪರಾಜ್ ಕಮ್ಮಜೆ, ಜಿಲ್ಲಾ ಸಹ ಸಂಯೋಜಕ ಸಮಿತ್ ರಾಜ್ ದರಗುಡ್ಡೆ, ತಾಲೂಕು ಸಂಯೋಜಕ ಹರಿಶ್ಚಂದ್ರ ಕೆ.ಸಿ. ಹಾಜರಿದ್ದರು.

ತಾಲೂಕು ಸಹಸಂಯೋಜಕ ಶರತ್ ಮಿಜಾರು, ಸಂತೋಷ್ ಕುಮಾರ್ ಜೈನ್, ಸಂದೀಪ್ ಹೆಗ್ಡೆ ಸಂದೀಪ್ ಸುವರ್ಣ, ಸುಂದರ ಪೂಜಾರಿ, ಗಣೇಶ್, ಧರಣೇಂದ್ರ ಜೈನ್, ಸುಚೇತನ್ ಜೈನ್, ಮಂಜುನಾಥ್ ಬೆಳುವಾಯಿ, ಮೂಡುಬಿದಿರೆ ದರೆಗುಡ್ಡೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಶೋಕ್ ಶೆಟ್ಟಿ ಬೇಲೊಟ್ಟು, ನೆಲ್ಲಿಕಾರು ಪಂಚಾಯಿತಿ ಅಧ್ಯಕ್ಷ ಉದಯ ಪೂಜಾರಿ, ಪಂಚಾಯಿತಿ ಸದಸ್ಯರು, ನೆಲ್ಲಿಕಾರ್ ಸಹಕಾರಿ ಸಂಘದ ನಿರ್ದೇಶಕ ಅಶ್ವಥ್ ಪಣಪಿಲ ಮತ್ತಿತರರು ಇದ್ದರು.

ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಹ ಸಂಯೋಜಕ ಸಮಿತ್ ರಾಜ್ ದರೆಗುಡ್ಡೆ ಸ್ವಾಗತಿಸಿದರು.

ಗಣೇಶ ಅಳಿಯೂರು ನಿರೂಪಿಸಿದರು. ಸಂದೀಪ್ ಸುವರ್ಣ ಕೆಲ್ಲಪುತ್ತಿಗೆ ವಂದಿಸಿದರು.

ನೆಲ್ಲಿಕಾರು ಜಂಕ್ಷನ್‌ನಿಂದ ಗಣಪತಿ ಕಟ್ಟೆಯವರಿಗೆ ಕುಣಿತ ಭಜನೆಯೊಂದಿಗೆ ವೈಭವದ ಮೆರವಣಿಗೆ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸ್ತೆ ಅಪಘಾತ ಸೈಕಲ್‌ ಸವಾರ ಸಾವು
ವಿದ್ಯುತ್‌ ತೊಂದರೆ ಸರಿಪಡಿಸದಿದ್ದರೇ ಅಹೋರಾತ್ರಿ ಧರಣಿ