ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಬೆಂಗಳೂರು ವಿಶ್ವವಿದ್ಯಾಲಯದ 59ನೇ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಇಷ್ಟಬಂದ ವಿಷಯ ಆಯ್ಕೆ ಮಾಡಿಕೊಳ್ಳುವ, ಯಾವುದೇ ವರ್ಷದಲ್ಲಿ ಪದವಿಯಿಂದ ನಿರ್ಗಮನ, ಮತ್ತೆ ಸೇರ್ಪಡೆಯಂತಹ ಪಾಶ್ಚಿಮಾತ್ಯ ಶಿಕ್ಷಣ ಪದ್ಧತಿಗಳನ್ನು ಅಳವಡಿಸಿರುವುದು ನಮ್ಮ ದೇಶಕ್ಕೆ ಸರಿ ಹೊಂದುವುದಿಲ್ಲ. ಹಾಗಾಗಿ ನಾವು ಎನ್‌ಇಪಿ ಮಾರ್ಪಡಿಸಿ ರಾಜ್ಯ ಶಿಕ್ಷಣ ನೀತಿ ಅಳವಡಿಸಿಕೊಳ್ಳುತ್ತಿದ್ದೇವೆ ಎಂದರು.
ಎನ್‌ಇಪಿ ಸರ್ಕಾರಿ ವಿವಿ, ಶಿಕ್ಷಣ ಸಂಸ್ಥೆಗಳಿಗೆ ಸರಿಹೊಂದುವುದಿಲ್ಲ. ಕೆಲ ಖಾಸಗಿ ವಿವಿಗಳಿಗೆ ಮಾತ್ರ ಇದರ ಸಮರ್ಪಕ ಜಾರಿ ಸಾಧ್ಯವಾಗಬಹುದು. ಏಕೆಂದರೆ ಸರ್ಕಾರಿ ಶಿಕ್ಷಣ ಸಂಸ್ಥೆಗಳು ತಾಂತ್ರಿಕ, ವೈದ್ಯಕೀಯ, ಇತರೆ ಸಾಮಾನ್ಯ ಪದವಿ, ಸ್ನಾತಕೋತ್ತರ ಪದವಿ, ಪಾಲಿಟೆಕ್ನಿಕ್ ಹೀಗೆ ನಿರ್ದಿಷ್ಟ ಕೋರ್ಸುಗಳ ವ್ಯಾಸಂಗಕ್ಕೆ ಸೀಮಿತಗೊಂಡಿವೆ. ಎಲ್ಲವನ್ನೂ ಒಂದೇ ಸೂರಿನಡಿ ಕಲಿಯಲು ಅವಕಾಶವಿಲ್ಲ ಎಂದರು.ಕರ್ನಾಟಕದ ಅನೇಕ ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಕರ ಕೊರತೆಯಿದೆ. 14 ಸಾವಿರ ಅತಿಥಿ ಉಪನ್ಯಾಸಕರು ಕಾರ್ಯ ನಿರ್ವಹಿಸುತ್ತಿದ್ದರೂ ಕೊರತೆ ಮಾತ್ರ ನೀಗಿಲ್ಲ. ಅದೇ ರೀತಿ ಉನ್ನತ ಶಿಕ್ಷಣದ ಪ್ರವೇಶ ಪಡೆಯುವವರ ಪ್ರಮಾಣ ಕಡಿಮೆ ಇರುವಂತಹ ರಾಜ್ಯಗಳಲ್ಲಿ ಪದವಿ ವ್ಯಾಸಂಗದ ನಡುವೆ ಓದು ನಿಲ್ಲಿಸುವ, ಮತ್ತೆ ಬೇಕಾದಾಗ ಪುನಾರಂಭಿಸುವ ಅವಕಾಶ ನೀಡುವುದು ಕಷ್ಟ. ಇದು ಇನ್ನಷ್ಟು ಪ್ರವೇಶ ಪ್ರಮಾಣ ಇಳಿಕೆಗೆ ಕಾರಣವಾಗಬಹುದು. ಎನ್‌ಇಪಿ ಅಳವಡಿಕೆಗೆ ಕರ್ನಾಟಕವೇ ಇಷ್ಟು ಸಮಸ್ಯೆ ಎದುರಿಸಿದರೆ ಹಿಂದುಳಿದ ರಾಜ್ಯಗಳ ಸ್ಥಿತಿ ಏನು? ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಎನ್‌ಇಪಿಯನ್ನು ಪುನರ್ ಪರಿಶೀಲಿಸಬೇಕು ಎಂದರು.
ಇದಕ್ಕೂ ಮುನ್ನ ಘಟಿಕೋತ್ಸವ ಭಾಷಣ ಮಾಡಿದ ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗದ ಉಪಾಧ್ಯಕ್ಷ ಪ್ರೊ.ದೀಪಕ್ ಕುಮಾರ್ ಶ್ರೀವಾಸ್ತವ, ಎನ್‌ಇಪಿ ಬಹುಶಿಸ್ತೀಯ, ಬಹು ಪ್ರವೇಶ, ನಿರ್ಗಮನದಂತಹ ಉಪಕ್ರಮಗಳಿಂದ ದೇಶದ ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಅತ್ಯುತ್ತಮ ಬದಲಾವಣೆಗೆ ಕಾರಣವಾಗಿವೆ ಎಂದು ಹೇಳಿದರು.
ಗುರುಕಿರಣ್, ರಾಜಣ್ಣಗೆ ಗೌಡಾ
ಘಟಿಕೋತ್ಸವದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಮತ್ತು ಅಂಗವಿಕಲರ ಅಧಿನಿಯಮದ ಮಾಜಿ ರಾಜ್ಯ ಆಯುಕ್ತ ಕೆ.ಎಸ್.ರಾಜಣ್ಣ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿ ಗೌರವಿಸಲಾಯಿತು.ಅನ್ನಪೂರ್ಣ, ಅನುರಾಧಗೆ ತಲಾ 9 ಚಿನ್ನ