ಕನ್ನಡಪ್ರಭ ವಾರ್ತೆ ಬಾದಾಮಿ: 2024-25 ನೇ ಶೈಕ್ಷಣಿಕ ವರ್ಷವನ್ನು ಅದ್ಧೂರಿಯಾಗಿ ಆಚರಿಸೋಣ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ವೈ.ಕುಂದರಗಿ ಮುಖ್ಯಶಿಕ್ಷಕರಿಗೆ ಸೂಚಿಸಿದರು.
ನಗರದ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬಾದಾಮಿ ಮತ್ತು ಕುಳಗೇರಿ ವಲಯದ ಮುಖ್ಯಶಿಕ್ಷಕರ ಸಭೆಯಲ್ಲಿ ಮಾತನಾಡಿದರು. ಶಾಲೆಗಳಿಗೆ ಸುಣ್ಣ ಬಣ್ಣ ಹಚ್ಚಿ ಅಲಂಕಾರ, ತಳಿರು ತೋರಣದಿಂದ ಅಲಂಕಾರ ಮಾಡಬೇಕು. ಶೈಕ್ಷಣಿಕ ಮಾರ್ಗಸೂಚಿಯಂತೆ ಕ್ರಿಯಾ ಯೋಜನೆ ತಯಾರಿಸಿ ಸರಿಯಾಗಿ ಅನುಷ್ಠಾನ ಮಾಡಬೇಕು. ಇಲಾಖೆಯ ನಿಯಮಗಳು ಮತ್ತು ನಿರ್ವಹಿಸಬೇಕಾದ ದಾಖಲೆಗಳ ಬಗ್ಗೆ ಮಾಹಿತಿ ನೀಡಿದರು.ಸೇತುಬಂಧ ಕಾರ್ಯಕ್ರಮ, ಶಾಲಾ ಶೈಕ್ಷಣಿಕ ಯೋಜನೆ, ಶಾಲಾ ಅಭಿವೃದ್ಧಿ ಯೋಜನೆ ತಯಾರಿಸಬೇಕು. ಶಾಲಾ ಮಕ್ಕಳಿಗೆ ಮೆನುವಿನಂತೆ ಬಿಸಿಯೂಟ ನೀಡಬೇಕು. ಶಾಲಾ ದಾಖಲಾತಿ ಆಂದೋಲನ ಮಾಡಬೇಕು. ಗ್ರಾಮ ಮತ್ತು ನಗರಗಳಲ್ಲಿ ಡಂಗುರ, ಬ್ಯಾನರ್, ಜಾಗೃತಿ ಜಾಥಾ ಆಯೋಜನೆ ಮಾಡಿ ವ್ಯಾಪಕ ಪ್ರಚಾರ ಮಾಡಬೇಕು. ಮೊದಲ ದಿನ ಸಿಹಿಯೂಟ ನೀಡಬೇಕು. ಪ್ರತಿದಿನ ಬಿಸಿಯೂದ ಹಾಜರಾತಿಯನ್ನು ಮುಖ್ಯಶಿಕ್ಷಕರು ಎಸ್ಎಂಎಸ್ ಕಳುಹಿಸಬೇಕು. ಈ ಮೂಲಕ ದಾಖಲಾತಿ ಹೆಚ್ಚಳ ಮಾಡಬೇಕು. ದಾಖಲಾದ ಎಲ್ಲಾ ಮಕ್ಕಳು ಪೂರ್ಣಪ್ರಮಾಣದಲ್ಲಿ ಹಾಜರಾಗಬೇಕು. ಹಾಜರಾದ ಮಾಹಿತಿಯನ್ನು ಎಸ್ಎಟಿಎಸ್‌ನಲ್ಲಿ ದಾಖಲಿಸಬೇಕು. ಯಾವುದೇ ಲೋಪವಾಗದಂತೆ ಕಾರ್ಯಕ್ರಮ ಅನುಷ್ಠಾನ ಮಾಡಿ ಮಕ್ಕಳಿಗೆ ಸರ್ಕಾರದ ಎಲ್ಲ ಯೋಜನೆಗಳ ಲಾಭ ದೊರಕಬೇಕು ಎಂದು ಸಲಹೆ ನೀಡಿದರು.ವೇದಿಕೆಯ ದೈಹಿಕ ಪರಿವೀಕ್ಷಕ ಬಿ.ಎಚ್.ಹಳಗೇರಿ, ಶಿಕ್ಷಣ ಸಂಯೋಜಕ ವಿ.ಎಸ್.ಹಿರೇಮಠ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಬಿ.ಎಫ್.ಕುಂಬಾರ, ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಆರ್.ಟಿ.ಪಟ್ಟಣಶೆಟ್ಟಿ ಹಾಜರಿದ್ದರು. ಕಾರ್ಯಕ್ರಮದಲ್ಲಿ ಬಾದಾಮಿ ಮತ್ತು ಕುಳಗೇರಿ ವಲಯದ ಕ್ಲಸ್ಟರ್‌ನ ಎಲ್ಲ ಸಮೂಹ ಸಂಪನ್ಮೂಲ ವ್ಯಕ್ತಿಗಳು, ಮುಖ್ಯಗುರುಗಳು ಹಾಜರಿದ್ದರು. ಕನ್ನಡಪ್ರಭ ವಾರ್ತೆ ಬಾದಾಮಿ: 2024-25 ನೇ ಶೈಕ್ಷಣಿಕ ವರ್ಷವನ್ನು ಅದ್ಧೂರಿಯಾಗಿ ಆಚರಿಸೋಣ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ವೈ.ಕುಂದರಗಿ ಮುಖ್ಯಶಿಕ್ಷಕರಿಗೆ ಸೂಚಿಸಿದರು.