ಸಿದ್ದು ಚಿಕ್ಕಬಳ್ಳೇಕೆರೆಕನ್ನಡಪ್ರಭ ವಾರ್ತೆ ಬೆಂಗಳೂರು
ವರ್ಷದ 365 ದಿನವೂ ಸದಾ ಹಸಿರಿನಿಂದ ಕಂಗೊಳಿಸುತ್ತಿದ್ದ ತೆಂಗಿನ ಮರಗಳು ರೋಗಬಾಧೆಯಿಂದ ತಮ್ಮ ಕಣ್ಣೆದುರೇ ಧರೆಗುರುಳುತ್ತಿರುವುದನ್ನು ನೋಡಿ ರೈತರು ಕಣ್ಣೀರಾಗುತ್ತಿದ್ದಾರೆ. ತಂದೆ, ಅಜ್ಜನ ಕಾಲದಿಂದಲೂ ಫಸಲು ನೀಡುತ್ತಿದ್ದ ಮರಗಳ ಗರಿಗಳು ಒಣಗಿ ಬಳಿಕ ಸುಳಿ ಬಿದ್ದು ಹೋಗುತ್ತಿರುವುದನ್ನು ಕಂಡು ದಿಕ್ಕು ತೋಚದಂತಾಗಿದ್ದಾರೆ. ಮತ್ತೊಂದೆಡೆ, ಐದಾರು ವರ್ಷ ಕೈಯಾರೆ ಆರೈಕೆ ಮಾಡಿ ಬೆಳೆಸಿದ್ದ ತೆಂಗಿನ ಸಸಿಗಳು ಇನ್ನೇನು ಕೈಗೆ ಬಂದು, ಫಸಲು ಬಿಡಲಿವೆ ಎಂಬ ಸಂತಸದಲ್ಲಿದ್ದ ರೈತರು ರೋಗಬಾಧೆಯಿಂದ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಆದ್ದರಿಂದ ಸರ್ಕಾರ ತಕ್ಷಣ ಉಚಿತವಾಗಿ ಔಷಧಿ ನೀಡಬೇಕು. ಹಾನಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ. ಚಿಕ್ಕಮಗಳೂರು, ಹಾಸನ, ತುಮಕೂರು ಅಧಿಕ:ಚಿಕ್ಕಮಗಳೂರು ಜಿಲ್ಲೆಯಲ್ಲಿ ಅತ್ಯಧಿಕ, ಎಂದರೆ 11,278 ಹೆಕ್ಟೇರ್ ತೆಂಗಿಗೆ ರೋಗ ತಗುಲಿದೆ. ಚಿತ್ರದುರ್ಗ-4000, ಹಾಸನ-3342, ತುಮಕೂರು-2716, ದಾವಣಗೆರೆ ಜಿಲ್ಲೆಯಲ್ಲಿ -2610 ಹೆಕ್ಟೇರ್ ಸೇರಿದಂತೆ 13 ಕ್ಕೂ ಅಧಿಕ ಜಿಲ್ಲೆಯಲ್ಲಿ ರೋಗಬಾಧೆ ಕಂಡುಬಂದಿದೆ.
ಹೆಚ್ಚಾಗಿ ಮಳೆಯನ್ನು ಅವಲಂಬಿಸದ, ಮುಂಗಾರು ಸಂದರ್ಭದಲ್ಲಿ ಮಳೆಯಾದರೆ ಸಾಕು ಇನ್ನುಳಿದಂತೆ ಮಳೆ ಬಾರದಿದ್ದರೂ ವರ್ಷಪೂರ್ತಿ ಫಸಲು ಸಿಗುವುದರಿಂದ ರೈತರ ಪಾಲಿಗೆ ತೆಂಗಿನ ಮರಗಳು ನಿಜಕ್ಕೂ ಕಾಮಧೇನುವಾಗಿವೆ. ಆದರೆ ಇದೀಗ ರೋಗದಿಂದ ಮರಗಳು ನೆಲಕ್ಕುರುಳುವ ಭೀತಿ ಆವರಿಸಿದೆ.‘ಯೂರಿಯಾ ಅಂಶ ಅಧಿಕವಾಗಿ, ಪೊಟ್ಯಾಷ್ ಕೊರತೆಯಿಂದ ಈ ರೋಗ ಕಂಡುಬರುತ್ತದೆ. ಅದರಲ್ಲೂ ಉಷ್ಣಾಂಶ ಹೆಚ್ಚಾಗಿದ್ದರಂತೂ ರೋಗ ಅಕ್ಕ-ಪಕ್ಕದ ತೋಟಗಳಿಗೂ ಕಡಿಮೆ ಅವಧಿಯಲ್ಲಿ ವ್ಯಾಪಿಸುತ್ತದೆ. ಬರಗಾಲದ ಹಿನ್ನೆಲೆಯಲ್ಲಿ ಕಪ್ಪು ತಲೆ ಹುಳದ ಸಂತಾನೋತ್ಪತ್ತಿಗೆ ಪೂರಕ ವಾತಾವರಣವಿದೆ. ರೋಗದಿಂದ ಗರಿಗಳು ಒಣಗಿ ಸುಳಿ ಬಿದ್ದು ತೆಂಗಿನ ಮರಗಳೂ ನೆಲಕ್ಕುರುಳುವ ಸಾಧ್ಯತೆ ಹೆಚ್ಚು’ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.ಜಿಲ್ಲೆ ತೆಂಗು ವಿಸ್ತೀರ್ಣ(ಹೆಕ್ಟೇರ್) ಹಾನಿ(ಹೆಕ್ಟೇರ್)ತುಮಕೂರು1,74,3762,716ಹಾಸನ97,9613342
ಚಿತ್ರದುರ್ಗ46,1254,000ದಕ್ಷಿಣ ಕನ್ನಡ36,57217
ಶಿವಮೊಗ್ಗ 10,092 133
ದಾವಣಗೆರೆ 7831 2610ಒಟ್ಟು 5,63,97329,491ಔಷಧ ಸಿಂಪಡಿಸಿ ರೋಗ ನಿಯಂತ್ರಿಸಿಭೂಮಿಯಲ್ಲಿ ಯೂರಿಯಾ ಅಂಶ ಹೆಚ್ಚಾಗಿ ಪೊಟ್ಯಾಷ್ ಕಡಿಮೆಯಾಗುವುದು, ಬೇಸಿಗೆ ವಾತಾವರಣವು ಕಪ್ಪು ತಲೆ ಹುಳಕ್ಕೆ ಪೂರಕ ವಾತಾವರಣ ಉಂಟು ಮಾಡುತ್ತದೆ. ರೈತರು ಸಾಮೂಹಿಕ ಔಷಧ ಸಿಂಪಡಣೆಗೆ ಮುಂದಾದರೆ ಮಾತ್ರ ರೋಗ ನಿಯಂತ್ರಣ ಸಾಧ್ಯ.-ಡಾ.ವಿ.ಬಿ.ಸನತ್‌ಕುಮಾರ್, ಸಸ್ಯರೋಗ ಶಾಸ್ತ್ರಜ್ಞ, ಮಂಡ್ಯ ವಿ.ಸಿ.ಫಾರಂ-ಸರ್ಕಾರ ಪರಿಹಾರ ನೀಡಲಿಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯು ರೋಗ ತಡೆಗಟ್ಟುವ ಸಂಬಂಧ ತಕ್ಷಣ ಕ್ರಮ ಕೈಗೊಳ್ಳಬೇಕು. ರಾಜ್ಯ ಸರ್ಕಾರವು ರೋಗಬಾಧೆಗೆ ಒಳಗಾಗಿರುವ ತೆಂಗಿನ ತೋಟಗಳ ಮಾಲೀಕರಿಗೆ ಶೀಘ್ರ ಪರಿಹಾರ ನೀಡಬೇಕು.-ಕುರುಬೂರು ಶಾಂತಕುಮಾರ್, ರೈತ ಮುಖಂಡ