ಕನ್ನಡಪ್ರಭ ವಾರ್ತೆ ಹಲಗೂರು
ಡಿ.ಹಲಸಹಳ್ಳಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಮುಂದಿನ ಐದು ವರ್ಷಗಳ ಅವಧಿಗೆ ಆಡಳಿತ ಮಂಡಳಿ ಸ್ಥಾನಗಳಿಗೆ ಬಸವೇಶ್ವರ ಪ್ರೌಢಶಾಲೆಯಲ್ಲಿ ಚುನಾವಣೆ ನಡೆಯಿತು.ಸಾಲಗಾರರಲ್ಲದ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಾಣಸಮುದ್ರ ಗ್ರಾಮದ ರಾಮಚಂದ್ರ 185 ಮತ ಪಡೆದು ಜಯ ಸಾಧಿಸಿದರೆ,
ಸಾಮಾನ್ಯ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಡಿ.ಹಲಸಹಳ್ಳಿ ಎಸ್.ಸಿದ್ದಲಿಂಗೇಗೌಡ, ಬಾಣಸಮುದ್ರ ಗ್ರಾಮದ ಶ್ರೀಧರ್, ಧನಗೂರು ಡಿ.ಎಫ್.ಫಾರೂಕ್ ಪಾಷಾ, ದಬ್ಬಹಳ್ಳಿ ಬಿ.ಜಯರಾಮೇಗೌಡ, ಧನಗೂರು ಸಿ.ದೊಡ್ಡಸ್ವಾಮಿ, ಪರಿಶಿಷ್ಟ ಜಾತಿ ಸಾಮಾನ್ಯ ಕ್ಷೇತ್ರದಿಂದ ಡಿ.ಹಲಸಹಳ್ಳಿ ಎಚ್.ಎಂ.ನಾಗರಾಜು, ಸಾಮಾನ್ಯ ಮಹಿಳಾ ಕ್ಷೇತ್ರದಿಂದ ಬಾಣಸಮುದ್ರ ಗ್ರಾಮದ ಕೆ.ಗೀತಾ ಡಿ.ಹಲಸಹಳ್ಳಿ ಕೆ.ಎಂ.ಮೈತ್ರಿ, ಹಿಂದುಳಿದ ವರ್ಗ ಎ ಕ್ಷೇತ್ರದಿಂದ ಡಿ.ಹಲಸಹಳ್ಳಿ ಎಚ್.ಸಿದ್ದಾಚಾರಿ, ಹಿಂದುಳಿದ ವರ್ಗ ಬಿ ಕ್ಷೇತ್ರದಿಂದ ಬಾಣ ಸಮುದ್ರ ಪುಟ್ಟಸ್ವಾಮಿ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಡಿ.ಆಶಾ ಮತ್ತು ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಿ.ಬಿ.ರವಿಚಂದ್ರ ಘೋಷಣೆ ಮಾಡಿದರು.ಈ ವೇಳೆ ಸಂಘದ ಸಿಬ್ಬಂದಿ ರಾಚಯ್ಯ, ನೂತನ ನಿರ್ದೇಶಕರು, ಮುಖಂಡರಾದ ಎನ್.ಎಸ್. ಗುಣೇಶ್, ಬೋರ್ ವೆಲ್ ಪುಟ್ಟಸ್ವಾಮಿ, ಬಿ.ಆರ್.ಬಸವರಾಜು, ಬಿ.ಎಸ್.ಮಲ್ಲೇಶ್, ಈ.ಸುರೇಶ್, ಸಿದ್ದಪ್ಪ, ವೆಂಕಟೇಶ್, ಲೋಕೇಶ್, ನಾಗಾರ್ಜುನ ಸೇರಿದಂತೆ ಹಲವರು ಭಾಗವಹಿಸಿದ್ದರು.ಇಂದು ವಿಶ್ವಜ್ಞಾನಿ ಡಾ.ಬಿ.ಆರ್.ಅಂಬೇಡ್ಕರ್ ಯುವಕರ ಸಂಘ ಉದ್ಘಾಟನೆ, ಆರೋಗ್ಯ ಶಿಬಿರ
ಮಳವಳ್ಳಿ:ತಾಲೂಕಿನ ಮಿಕ್ಕೆರೆ ಗ್ರಾಮದಲ್ಲಿ ಏ.13ರಂದು ವಿಶ್ವಜ್ಞಾನಿ ಡಾ.ಬಿ.ಆರ್.ಅಂಬೇಡ್ಕರ್ ಯುವಕರ ಸಂಘದ ಉದ್ಘಾಟನಾ ಸಮಾರಂಭ ನಡೆಯಲಿದೆ.
ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣಲ್ಲಿ ನಡೆಯುವ ಸಮಾರಂಭದ ಅಂಗವಾಗಿ ವಿಶ್ವಜ್ಞಾನಿ ಡಾ.ಬಿ.ಆರ್. ಅಂಬೇಡ್ಕರ್ ಯುವಕರ ಸಂಘದ, ಮಂಡ್ಯದ ಸಾಂಜೋ ಆಸ್ಪತ್ರೆ ಸಹಯೋಗದೊಂದಿಗೆ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ.ಕಾರ್ಯಕ್ರಮವನ್ನು ಬೆಳಗ್ಗೆ 10 ಗಂಟೆಗೆ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗಂಗಾಧರಸ್ವಾಮಿ ಉದ್ಘಾಟಿಸಲಿದ್ದು, ತಹಸೀಲ್ದಾರ್ ಎಸ್.ವಿ.ಲೋಕೇಶ್ ಅಧ್ಯಕ್ಷತೆ ವಹಿಸುವರು. ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಮುಖಂಡ ದರ್ಶನ್ ಬಿ.ಸೋಮಶೇಖರ್ ಪುಷ್ಪಾರ್ಚನೆ ಮಾಡಲಿದ್ದಾರೆ.
ವಿಶೇಷ ಆಹ್ವಾನಿತರಾಗಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ವೆಂಕಟೇಶ್, ತಾಪಂ ಇಒ ಎಚ್.ಜಿ. ಶ್ರೀನಿವಾಸ್, ಅತಿಥಿಗಳಾಗಿ ತಾಲೂಕು ವೈದ್ಯಾಧಿಕಾರಿ ಡಾ.ಪಿ.ವೀರಭದ್ರಪ್ಪ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ್ ಕುಮಾರ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕುಮಾರಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಈ. ಉಮಾ, ಗ್ರಾಪಂ ಅಧ್ಯಕ್ಷೆ ವಸಂತ ನಾಗರಾಜು, ಪಿಡಿಒ ಎಂ.ಕೇಶವಮೂರ್ತಿ, ತಾಪಂ ಮಾಜಿ ಉಪಾಧ್ಯಕ್ಷ ಸಿ.ಮಾಧು, ಭೂ ನ್ಯಾಯ ಮಂಡಳಿ ಸದಸ್ಯ ಶಾಂತರಾಜು ಭಾಗವಹಿಸಲಿದ್ದಾರೆ.