ಕನ್ನಡಪ್ರಭ ವಾರ್ತೆ ಬೆಂಗಳೂರು
ಶಿವರಾಮ ಕಾರಂತ ವೇದಿಕೆ ಮತ್ತು ವಿನಾಯಕ ದೇವಸ್ಥಾನ ಸಮಿತಿ ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘ಪ್ರೊ.ಎಲ್.ಎಸ್.ಶೇಷಗಿರಿ ರಾವ್ ಶತಮಾನೋತ್ಸವ ಸಂಭ್ರಮ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಹೊಸ ಕಾಯಕಲ್ಪ ನೀಡುವ ನಿಟ್ಟಿನಲ್ಲಿ ಕಾರ್ಯೋನ್ಮುಖನಾಗಿದ್ದೇನೆ. ಸಶಕ್ತವಾದ ಭಾಷಾ ನೀತಿ ರೂಪಿಸಿ ಕೊರಗ, ಹವ್ಯಕ ಸೇರಿದಂತೆ ಅಳಿವಿನಂಚಿನತ್ತ ತೆರಳುತ್ತಿರುವ ಭಾಷೆಗಳನ್ನು ರಕ್ಷಿಸಲಾಗುವುದು. ರಾಜ್ಯದಲ್ಲಿರುವ ಶತಮಾನ ಕಂಡ ಸುಮಾರು ನೂರೈವತ್ತು ಶಾಲೆಗಳನ್ನು ದಾನಿಗಳ ಸಹಾಯದಿಂದ ಮೂಲಭೂತ ಸೌಲಭ್ಯ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.ಕನ್ನಡ ಕಲಿಸಲು 15 ಕೇಂದ್ರ ಆರಂಭ:
ಎನ್‌ಎಸ್‌ಎಸ್ ವಿದ್ಯಾರ್ಥಿಗಳನ್ನು ಬಳಸಿಕೊಂಡು ರಾಜ್ಯದ ಎಲ್ಲ ಗ್ರಾಮಗಳಲ್ಲೂ ಆ ಊರಿನ ಹೆಸರು ಪ್ರಮುಖ ಸ್ಥಳದಲ್ಲಿ ಕಾಣಿಸುವಂತೆ ಫಲಕ ಹಾಕಲು ಕ್ರಮ ಕೈಗೊಳ್ಳಲಾಗುವುದು. ಗಡಿನಾಡ ಮಕ್ಕಳನ್ನು ಪ್ರೋತ್ಸಾಹಿಸಲು ನೀಡುತ್ತಿರುವ ಬಹುಮಾನ ವ್ಯವಸ್ಥೆಯನ್ನು ಮುಂದುವರೆಸಲಾಗುವುದು. ಭವಿಷ್ಯದ ಕಾರ್ಯಚಟುವಟಿಕೆ ಬಗ್ಗೆ ಚರ್ಚಿಸಲು ಪ್ರಾಧಿಕಾರದ ಮಾಜಿ ಅಧ್ಯಕ್ಷರ ಸಭೆಯನ್ನು ಮೂರ್ನಾಲ್ಕು ದಿನದಲ್ಲಿ ಕರೆಯಲಾಗುವುದು ಎಂದು ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಪುರುಷೋತ್ತಮ ಬಿಳಿಮಲೆ ಅವರನ್ನು ಅಭಿನಂದಿಸಲಾಯಿತು. ಆದಿಚುಂಚನಗಿರಿ ವಿಶ್ವವಿದ್ಯಾನಿಲಯದ ಸಹ ಪ್ರಾಧ್ಯಾಪಕ ಡಾ। ಟಿ.ಎನ್.ವಾಸುದೇವಮೂರ್ತಿ, ವೇದಿಕೆ ಅಧ್ಯಕ್ಷೆ ದೀಪಾ ಫಡ್ಕೆ ಉಪಸ್ಥಿತರಿದ್ದರು.ಕನ್ನಡ ಸಮೃದ್ಧಗೊಳಿಸುವ ಕಾರ್ಯವಿಮರ್ಶಕ ಎಸ್.ಆರ್.ವಿಜಯಶಂಕರ ಮಾತನಾಡಿ, ಶೇಷಗಿರಿ ರಾವ್ ಅವರು ಕತೆ, ಕಾವ್ಯ, ಕಾದಂಬರಿ ಸೇರಿದಂತೆ ಹಲವು ಪ್ರಕಾರಗಳಲ್ಲಿ ತೊಡಗಿಕೊಂಡಿದ್ದರೂ ಅವರನ್ನು ಗಮನಿಸುವುದು, ಗುರುತಿಸುವುದು ವಿಮರ್ಶಾ ವಾಗ್ಮಯರಾಗಿ ಅನುವಾದದ ಮೂಲಕ ಕನ್ನಡ ಸಮೃದ್ಧಿಗೊಳಿಸುವ ಉದ್ದೇಶವನ್ನು ಅವರು ಹೊಂದಿದ್ದರು. ಪಾಶ್ಚಿಮಾತ್ಯರ ಚಿತ್ರಕಲೆ, ಸಂಗೀತ, ವಿಜ್ಞಾನ ಮತ್ತಿತರ ಪ್ರಕಾರಗಳನ್ನು ಕನ್ನಡಕ್ಕೆತರುವ ಮೂಲಕ ಉತ್ತಮ ಕಾರ್ಯ ಮಾಡಿದರು ಎಂದು ಸ್ಮರಿಸಿಕೊಂಡರು.