ಕಲಬುರಗಿರಿ ಮತದಾರರಿಗೆ ನೂತನ ಸಂಸದ, ಎಂಎಲ್ಸಿ ಅಭಿನಂದನೆ

KannadaprabhaNewsNetwork | Published : Jul 12, 2024 1:31 AM

ಸಾರಾಂಶ

ಅತೀ ಹಿಂದುಳಿದ ಪ್ರದೇಶಕ್ಕೆ 371ಜೆ ಜಾರಿಗೆ ತರುವ ಮೂಲಕ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ ಬಡವರ ದೀನದಲಿತರ ಏಳಿಗಾಗಿ ಶ್ರಮಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ಋಣ ತೀರಿಸಿದ ಕಲ್ಯಾಣ ಕರ್ನಾಟಕದ ಎಲ್ಲಾ ಮತದಾರರಿಗೂ ಧನ್ಯವಾದಗಳು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಹೇಳಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ/ಸೇಡಂ

ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಅತೀ ಹಿಂದುಳಿದ ಪ್ರದೇಶಕ್ಕೆ 371ಜೆ ಜಾರಿಗೆ ತರುವ ಮೂಲಕ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ ಬಡವರ ದೀನದಲಿತರ ಏಳಿಗಾಗಿ ಶ್ರಮಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ಋಣ ತೀರಿಸಿದ ಕಲ್ಯಾಣ ಕರ್ನಾಟಕದ ಎಲ್ಲಾ ಮತದಾರರಿಗೂ ಧನ್ಯವಾದಗಳು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಹೇಳಿದರು.

ಪಟ್ಟಣದ ಚಿಂಚೋಳಿ ರಸ್ತೆಯ ವೀರಶೈವ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಬ್ಲಾಕ್ ಕಾಂಗ್ರೆಸ್ ಮೂಧೊಳ ಹಾಗೂ ಸೇಡಂ ವತಿಯಿಂದ ನೂತನವಾಗಿ ಆಯ್ಕೆಯಾದ ಲೋಕಸಭಾ ಸದಸ್ಯರು ಮತ್ತು ವಿಧಾನ ಪರಿಷತ್ ಸದಸ್ಯರ ಅಭಿನಂದನಾ ಸಮಾರಂಭದಲ್ಲಿ ಸಸಿಗೆ ನೀರುಣಿಸಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಯುವ ನಾಯಕ ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ್ ಸಾಹೇಬರ ಮುಂದಾಳತ್ವದಲ್ಲಿ ಲೋಕಸಭಾ ಚುನಾವಣೆಯಲ್ಲಿ ಉತ್ತಮ ಫಲಿತಾಂಶ ತರುವಲ್ಲಿ ಕಾರಣಿ ಭೂತರಾಗಿದ್ದಾರೆಂದರು.

ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಶ್ರಮದ ಫಲವಾಗಿ‌ ಇಂದು ಲೋಕಸಭೆ ಚುನಾವಣೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಐದು ಸ್ಥಾನಗಳು ಗೆಲುವಾಗಿದೆ. ಬಿಜೆಪಿಯವರ ‘ಚಾರ್ ಸೌ ಪಾರ್’ ಅಭಿಯಾನ ಫಲಿಸದೆ, ದೇಶದ ಜನರು ಸಂವಿಧಾನದ ಸಿದ್ಧಾಂತ ಮೇಲೆ ಮತ ಚಲಾಯಿಸಿ ದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಒಲವನ್ನು ತೋರಿಸಿದ್ದಾರೆ. ಕಲಬುರಗಿ ಪ್ರಗತಿಗಾಗಿ ಕೊಟ್ಟ ಮಾತಿನಂತೆ ಬರುವ ದಿನಗಳಲ್ಲಿ ಆಡಳಿತ ನಡೆಯಲಿದೆ ಎಂದರು.

ಎಂಎಲ್‌ಸಿಗಳಾದ ಜಗದೇವ ಗುತ್ತೇದಾರ್, ಚಂದ್ರಶೇಖರ್ ಪಾಟೀಲ್, ಹಾಗೂ ಸುಭಾಷ್ ರಾಠೋಡ ಚಿಂಚೋಳಿ ಮಾತನಾಡಿದರು.

ಸಮಾರಂಭದಲ್ಲಿ ಬಸವರಾಜ ಪಾಟೀಲ್ ಊಡಗಿ, ನಾಗೇಶ್ವರರಾವ್ ಪಾಟೀಲ್, ಶರಣರೆಡ್ಡಿ ಪಾಟೀಲ್, ರವಿ ನಂದಿಗಾಮ, ಸತೀಶ್ ಪಾಟೀಲ್ ರಂಜೋಳ, ವಿಶ್ವನಾಥ್ ಪಾಟೀಲ್ ಅರೆಬೋಮನಳ್ಳಿ, ಧುಳಪ್ಪಾ ದೊಡ್ಮನಿ, ಜಗದೇವಪ್ಪ ಪಾಟೀಲ್ ಕೋಂಕನಳ್ಳಿ, ಬಸವರಾಜ ಸಜ್ಜನ ಸುಲಪೇಟ್, ಬಸವರಾಜ್ ರೇವಗೊಂಡ, ಮಹೇಶ್ ಪಾಟೀಲ್ ತರನಳ್ಳಿ, ಜೈ ಭೀಮ್ ಊಡಗಿ, ಭೀಮಾಶಂಕರ ಕೋಳ್ಳಿ, ಸುಂದರ ಮಂಗಾ ಮಳಖೇಡ, ನಾಗೇಶ್ ಕಾಳಾ, ವೆಂಕಟೇಶ್ ಗುತ್ತೇದಾರ್, ಅಬ್ದುಲ್ ರಶೀದ್ ರಂಜೋಳ್, ಹಫೀಜ್ ಆರ್, ಅಬ್ದುಲ್ ಬಪುರ್, ಹೇಮರೆಡ್ಡಿ ಪಾಟೀಲ್, ವಿಶ್ವನಾಥ್ ಪಾಟೀಲ್ ಕುಕ್ಕುಂದಾ, ಬಸವರಾಜ್ ಪಾಟೀಲ್ ಮಳಖೇಡ, ರಾಜಶೇಖರ ಪೂರಾಣಿಕ ಮಳಖೇಡ, ರಾಮಯ್ಯ ಪುಜಾರಿ, ಜಗನ್ನಾಥ್ ಚಿಂತಪಳ್ಳಿ, ರಾಜು ಪಾಟೀಲ್ ಬೆನಕನಳ್ಳಿ, ಮಾರುತಿ ಕೋಡಂಗಲ್, ಸತೀಶ್ ಪೂಜಾರಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು.

-

ಐದು ಗ್ಯಾರಂಟಿಗಳು ಬಡವರ ಸ್ವಾವಲಂಬಿ ಜೀವನಕ್ಕೆ ಪೂರಕವಾಗುವಂತೆ ಜಾರಿಗೆ ತರಲಾಗಿದೆ. ಚುನಾವಣೆಗಾಗಿ ಅಲ್ಲಾ ಯಾವುದೇ ಕಾರಣಕ್ಕೂ ಗ್ಯಾರಂಟಿಗಳು ನಿಲ್ಲುವುದಿಲ್ಲ. ಶರಣಪ್ರಕಾಶ್ ಪಾಟೀಲ್, ಪ್ರಿಯಾಂಕ್‌ ಖರ್ಗೆ ಹೆಚ್ಚಿನ ಶ್ರಮ ಹಾಗೂ ಜಿಲ್ಲಾ ತಾಲೂಕು ಗ್ರಾಮೀಣ ಪ್ರದೇಶದ ಎಲ್ಲಾ ಕಾರ್ಯಕರ್ತರ ಗೆಲುವಿಗಾಗಿ ನಿರಂತರ ಪ್ರಯತ್ನ ಮಾಡಿ ಗೆಲ್ಲಿಸುವಲ್ಲಿ ಹೆಚ್ಚಿನ ಶ್ರಮವಹಿಸಿದ ನಿಮಗೆ ಧನ್ಯವಾದಗಳು, ಮುಂಬರುವ ದಿನಗಳಲ್ಲಿ ಎಲ್ಲಾ ಚುನಾವಣೆಯಲ್ಲಿ ಸಹಕಾರ ನಿಮ್ಮದಿರಲಿ ಹಾಗೂ ನಿಮ್ಮ ಸಣ್ಣಪುಟ್ಟ ಕೆಲಸ ಕಾರ್ಯಗಳಿಗೆ ಹಿಂಜರಿಯಬೇಡಿ ನೇರವಾಗಿ ಬಂದು ಭೇಟಿ ನೀಡಿ.

- ರಾಧಾಕೃಷ್ಣ ದೊಡ್ಡಮನಿ ಲೋಕಸಭೆ ಸದಸ್ಯರು ಕಲಬುರ್ಗಿ

Share this article