ಯುವಶಕ್ತಿಯ ಸಂಗಮದಿಂದ ಸಮಾಜದ ಅಭಿವೃದ್ಧಿಗೆ ಹೊಸ ಚಿಂತನೆ

KannadaprabhaNewsNetwork |  
Published : Nov 03, 2026, 02:30 AM IST
ಯುವ ಸಂಗಮವನ್ನು ರೋಶನಿ ಸಮಾಜ ಸೇವಾ ಸಂಸ್ಥೆ ನಿರ್ದೇಶಕಿ ಅನಿತಾ ಡಿಸೋಜಾ ಉದ್ಘಾಟಿಸಿದರು. | Kannada Prabha

ಸಾರಾಂಶ

ದೇಶದ ಅಭಿವೃದ್ಧಿಯ ಹಿಂದೆ ಯುವಶಕ್ತಿಯ ಮಹತ್ವದ ಕೊಡುಗೆ ಇರುವುದನ್ನು ಇಡೀ ಇತಿಹಾಸದಲ್ಲೇ ಕಾಣ ಸಿಗುತ್ತದೆ, ಹೊಸ ಬದಲಾವಣೆಗೆ ಯುವಕರೇ ಮುಂಚೂಣಿಯಲ್ಲಿರುತ್ತಾರೆ ಎಂದು ರೋಶನಿ ಸಮಾಜ ಸೇವಾ ಸಂಸ್ಥೆಯ ನಿರ್ದೇಶಕ ಅನಿತಾ ಡಿಸೋಜಾ ತಿಳಿಸಿದರು.

ಹಾನಗಲ್ಲ: ದೇಶದ ಅಭಿವೃದ್ಧಿಯ ಹಿಂದೆ ಯುವಶಕ್ತಿಯ ಮಹತ್ವದ ಕೊಡುಗೆ ಇರುವುದನ್ನು ಇಡೀ ಇತಿಹಾಸದಲ್ಲೇ ಕಾಣ ಸಿಗುತ್ತದೆ, ಹೊಸ ಬದಲಾವಣೆಗೆ ಯುವಕರೇ ಮುಂಚೂಣಿಯಲ್ಲಿರುತ್ತಾರೆ ಎಂದು ರೋಶನಿ ಸಮಾಜ ಸೇವಾ ಸಂಸ್ಥೆಯ ನಿರ್ದೇಶಕ ಅನಿತಾ ಡಿಸೋಜಾ ತಿಳಿಸಿದರು.

ಹಾನಗಲ್ಲಿನ ಲೋಯಲಾ ವಿಕಾಸ ಕೇಂದ್ರ, ಮುಂಡಗೋಡದ ಲೋಯಲಾ ವಿಕಾಸ ಕೇಂದ್ರ, ಹಾನಗಲ್ಲಿನ ರೋಶನಿ ಸಮಾಜ ಸೇವಾ ಸಂಸ್ಥೆ, ಅನೌಪಚಾರಿಕ ಶಿಕ್ಷಣ ಸಂಸ್ಥೆ ವಿಜಯಪುರ, ಸಂಗಮ ಸಂಸ್ಥೆ ಸಿಂದಗಿ, ಜ್ಞಾನಜ್ಯೋತಿ ಆನೇಕಲ್ ಹಾಗೂ ಲೊಯೋಲಾ ಸಮಾಜ ಸೇವಾ ಕೇಂದ್ರ, ಮಾನ್ವಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ ಯುವ ಶಕ್ತಿ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಯುವಕರು ಒಳ್ಳೆಯ ಅವಕಾಶಗಳನ್ನು ಕಳೆದುಕೊಳ್ಳಬಾರದು. ಸಾಧನೆಗೆ ಪರಿಶ್ರಮ ಅತ್ಯಂತ ಮುಖ್ಯ. ಒಳ್ಳೆಯ ಅವಕಾಶಗಳನ್ನು ಸೃಷ್ಟಿಸಿಕೊಳ್ಳುವ, ದೇಶಭಕ್ತಿಯನ್ನು ಹೊಂದಿರುವ ಶಕ್ತಿ ನಿಮ್ಮಲ್ಲಿದೆ. ಸಮಾಜದ ಭವಿಷ್ಯ ರೂಪಿಸುವ ಶಕ್ತಿ ನಿಮ್ಮಲಿದೆ ಎಂದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಅನೌಪಚಾರಿಕ ಶಿಕ್ಷಣ ಸಂಸ್ಥೆ, ವಿಜಯಪುರದ ನಿರ್ದೇಶಕ ಫಾದರ್ ಕೆವಿನ್ ಸಿಕ್ವೇರಾ ಮಾತನಾಡಿ, "ಯುವ ಸಂಗಮದಂತಹ ಕಾರ್ಯಕ್ರಮಗಳಲ್ಲಿ ಕಲಿತುಕೊಂಡ ವಿಚಾರಗಳು ವೈಯಕ್ತಿಕ ಜೀವನಕ್ಕೆ ಮಾತ್ರ ಸೀಮಿತವಾಗದೆ, ಕುಟುಂಬ, ಗ್ರಾಮ, ಸಮುದಾಯ ಹಾಗೂ ಸಮಾಜದ ಅಭಿವೃದ್ಧಿಗೂ ಪೂರಕವಾಗಬೇಕು. ಇಂದಿನ ಯುವಜನರ ಮುಂದೆ ಸಾಕಷ್ಟು ಅವಕಾಶಗಳಿವೆ. ಅವುಗಳನ್ನು ಸಮರ್ಥವಾಗಿ ಬಳಸಿಕೊಂಡು ಸವಾಲುಗಳನ್ನು ಎದುರಿಸುವ ಜಾಗೃತ ಮನೋಭಾವ ಬೆಳೆಸಿಕೊಳ್ಳಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಬರುವ ಪ್ರತಿಯೊಂದು ಮಾಹಿತಿಯನ್ನೂ ವಿಚಾರ ಮಾಡದೆ ಒಪ್ಪಿಕೊಳ್ಳಬಾರದು. ಅದರ ಸತ್ಯಾಸತ್ಯತೆಯನ್ನು ವಿಮರ್ಶಾತ್ಮಕವಾಗಿ ಪರಿಶೀಲಿಸುವ ಗುಣ ಬೆಳೆಸಿಕೊಳ್ಳಬೇಕು. ಯುವಜನರ ಬೆಳವಣಿಗೆಯೇ ದೇಶದ ಬೆಳವಣಿಗೆಯಾಗಿದ್ದು, ಸೂಕ್ತ ಮಾರ್ಗದರ್ಶನದೊಂದಿಗೆ ಯುವಶಕ್ತಿ ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಬೇಕು " ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಗಮ ಸಂಸ್ಥೆ, ಸಿಂದಗಿಯ ನಿರ್ದೇಶಕ ಫಾದರ್ ಸಂತೋಷ್ ವಾಲ್ಡರ್ ವಹಿಸಿದ್ದರು. ಅತಿಥಿಗಳಾಗಿ ಲೊಯೋಲಾ ವಿಕಾಸ ಕೇಂದ್ರ, ಹಾನಗಲ್‌ನ ನಿರ್ದೇಶಕ ಫಾದರ್ ವಿನ್ಸೆಂಟ್ ಜೇಸನ್, ಸಹನಿರ್ದೇಶಕ ಫಾದರ್ ಜೈಸನ್ ಪಾಯ್ಸ್ ಹಾಗೂ ಬೆಂಗಳೂರಿನ ನಿಮ್ಹಾನ್ಸ ಸಂಪನ್ಮೂಲ ವ್ಯಕ್ತಿ ಶಿವಾನಂದ ಎರೆಸಿಮೆ ಉಪಸ್ಥಿತರಿದ್ದರು

ಫಕ್ಕೀರೇಶ ಗೌಡಳ್ಳಿ ಪ್ರಾಸ್ತಾವಿಕ ಮಾತನಾಡಿದರು. ವಿದ್ಯಾ ಚೌಡಣ್ಣನವರ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮ ನಿರೂಪಿಸಿದರು. ತನ್ನೀರ್ ಮಿರ್ಜಾನ್‌ಕರ್ ಸ್ವಾಗತಿಸಿದರು. ಪ್ರಶಾಂತ್ ಹೊಸಮನಿ ಸಂವಿಧಾನದ ಪ್ರಸ್ತಾವನೆಯನ್ನು ವಾಚಿಸಿದರು. ಚೇತನ್ ಲಮಾಣಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭುಗಿಲೆದ್ದ ಸರ್ಕಾರ ವರ್ಸಸ್‌ ಕುಮಾರಸ್ವಾಮಿ ಸ್ಟಿಂಗ್‌ ಫೈಟ್‌ - ಈಗ ಎಚ್‌ಡಿಕೆ ಚಾರ್ಜ್‌ಶೀಟ್‌
ಅರಬ್ಬಿ ಸಮುದ್ರದಲ್ಲಿ ಚಂಡಮಾರುತ - ಇನ್ನೂ 3 ದಿನ ರಾಜ್ಯದೆಲ್ಲೆಡೆ ಮಳೆ