ಕ್ರೀಡೆಯಲ್ಲಿ ಭಾಗವಹಿಸುವಿಕೆಯಿಂದ ಹೊಸ ಚೈತನ್ಯ

KannadaprabhaNewsNetwork |  
Published : Oct 07, 2026, 03:15 AM IST
5ಬಿಎಸ್ವಿ03- ಬಸವನಬಾಗೇವಾಡಿಯಲ್ಲಿ ದಸರಾ ಪ್ರಯುಕ್ತ ಮೂರು ದಿನಗಳ ಕಾಲ ಹಮ್ಮಿಕೊಂಡಿದ್ದ ಕ್ರಿಕೆಟ್ ಟೂರ್ನಾಮೆಂಟ್ ಪಂದ್ಯಾವಳಿಯಲ್ಲಿ ಫೈನಲ್ ಪಂದ್ಯದಲ್ಲಿ ವಿಜೇತ ಸಹಕಾರಿ ಬ್ಯಾಂಕ್ ನೌಕರರ ತಂಡ ಟ್ರೋಫಿಯೊಂದಿಗೆ ವಿಜಯೋತ್ಸವ ಆಚರಿಸಿದರು. | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ ಪಂದ್ಯಾವಳಿಯಲ್ಲಿ ಸೋಲು, ಗೆಲುವು ಮುಖ್ಯವಲ್ಲ. ಭಾಗವಹಿಸುವುದು ಮುಖ್ಯ. ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಹೊಸ ಚೈತನ್ಯ ಮೂಡುತ್ತದೆ ಎಂದು ಯುವ ಉದ್ಯಮಿ ಉಮೇಶ ಕೌಲಗಿ ಹೇಳಿದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಪಂದ್ಯಾವಳಿಯಲ್ಲಿ ಸೋಲು, ಗೆಲುವು ಮುಖ್ಯವಲ್ಲ. ಭಾಗವಹಿಸುವುದು ಮುಖ್ಯ. ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಹೊಸ ಚೈತನ್ಯ ಮೂಡುತ್ತದೆ ಎಂದು ಯುವ ಉದ್ಯಮಿ ಉಮೇಶ ಕೌಲಗಿ ಹೇಳಿದರು.ಪಟ್ಟಣದ ಬಸವೇಶ್ವರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದಸರಾ ಹಬ್ಬದ ಪ್ರಯುಕ್ತ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಉಮೇಶ ಕೌಲಗಿ ಗೆಳೆಯರ ಬಳಗ ಹಾಗೂ ಆದರ್ಶ ಶಿಕ್ಷಕರ ವೇದಿಕೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿವಿಧ ಇಲಾಖೆ ಹಾಗೂ ಶಿಕ್ಷಕರ ಕ್ರಿಕೆಟ್ ಟೂರ್ನಾಮೆಂಟ್ ಮತ್ತು ಶಿಕ್ಷಕಿಯರ ಥ್ರೋ ಬಾಲ್ ಪಂದ್ಯಾವಳಿಯ ಬಹುಮಾನ ವಿತರಣಾ ಸಮಾರಂಭದಲ್ಲಿ ಮಾತನಾಡಿ, ಕಳೆದ 5 ವರ್ಷದಿಂದ ಈ ಟೂರ್ನಾಮೆಂಟ್ ಆಯೋಜನೆ ಮಾಡಲಾಗುತ್ತಿದೆ. ನಾನು ಸ್ಥಾಪಿಸಿದ ಆದರ್ಶ ಶಿಕ್ಷಕರ ವೇದಿಕೆಯಿಂದ ಶಿಕ್ಷಕರ ಹಲವಾರು ಕಾರ್ಯಗಳಿಗೆ ನಿರಂತರವಾಗಿ ನೆರವಾಗುತ್ತ ಬರಲಾಗುತ್ತಿದೆ. ಮುಂದಿನ ನಮ್ಮ ಕಾರ್ಯಗಳಿಗೂ ಎಲ್ಲರೂ ಸಹಕಾರ ನೀಡುವಂತೆ ಕೋರಿದರು.

ಮನಗೂಳಿಯ ಅಭಿನವಸಂಗನಬಸವ ಸ್ವಾಮೀಜಿ ಮಾತನಾಡಿ, ಬಸವನಬಾಗೇವಾಡಿಯಲ್ಲಿ ಐಪಿಎಲ್‌ ಪಂದ್ಯಾವಳಿ ಮಾದರಿಯಲ್ಲಿ ಉಮೇಶ ಕೌಲಗಿ ಈ ಟೂರ್ನಾಮೆಂಟ್ ಆಯೋಜನೆ ಮಾಡಿರುವುದು ಶ್ಲಾಘನೀಯ. ಈ ಕ್ರೀಡಾಕೂಟವು ವಿವಿಧ ಇಲಾಖೆಯ ನೌಕರ ಬಾಂಧವರು ಒತ್ತಡದಿಂದ ಹೊರಬರಲು ಪೂರಕವಾಗಿದೆ ಎಂದರು.

ಪಿಕೆಪಿಎಸ್ ಬ್ಯಾಂಕ್ ಅಧ್ಯಕ್ಷ ಸಂಗನಗೌಡ ಚಿಕ್ಕೊಂಡ, ಬಸವಸೈನ್ಯ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಪಾಯಿ ಕರ್ಮಚಾರಿ ಇಲಾಖೆ, ಸಾಮಾಜಿಕ ಸಬಲೀಕರಣ ಇಲಾಖೆ. ರಾಷ್ಟ್ರೀಯ ಆಯೋಗದ ಸಲಹೆಗಾರ ವಿಜಯಕುಮಾರ ಟಂಕಸಾಲೆ, ಡಿಡಿಪಿಐ ಮಂಜುನಾಥ ಗುಳೇದಗುಡ್ಡ, ಪಿಎಸ್‌ಐ ಶ್ರೀಕಾಂತ ಕಾಂಬಳೆ, ಎಚ್.ಎಸ್.ಗೊಳಸಂಗಿ, ಜಿ.ಸಿ.ವಂದಾಲ, ಸಂಗಮೇಶ ಪೂಜಾರಿ, ಎಸ್.ಐ.ಬಿರಾದಾರ, ಎನ್.ಎನ್.ಯಾಳವಾರ, ಎಸ್.ಬಿ.ಮುತ್ತಗಿ, ರಮೇಶ ಪೂಜಾರಿ, ಜಗದೇವಿ ಗುಂಡಳ್ಳಿ ಇತರರು ಇದ್ದರು. ಬಿ.ವಿ.ಚಕ್ರಮನಿ ಸ್ವಾಗತಿಸಿದರು. ಶಿವು ಮಡಿಕೇಶ್ವರ, ಕೊಟ್ರೇಶ ಹೆಗ್ಡಾಳ ನಿರೂಪಿಸಿದರು.ಬಾಕ್ಸ್....

ರೋಚಕ ಅನುಭವ ಮೂಡಿಸಿದ ಕ್ರಿಕೆಟ್ ಟೂರ್ನಾಮೆಂಟ್ಅ.2 ರಿಂದ 4 ರವರೆಗೆ ಹಮ್ಮಿಕೊಂಡಿದ್ದ ವಿವಿಧ ಇಲಾಖೆ ಹಾಗೂ ಶಿಕ್ಷಕರ ಕ್ರಿಕೆಟ್ ಟೂರ್ನಾಮೆಂಟ್ ಮತ್ತು ಶಿಕ್ಷಕಿಯರ ಥ್ರೋ ಬಾಲ್ ಪಂದ್ಯಾವಳಿ 3 ದಿನಗಳ ಕಾಲ ಕ್ರೀಡಾಪ್ರೇಮಿಗಳಿಗೆ ಮನರಂಜಿಸುವ ಜೊತೆಗೆ ರೋಚಕ ಅನುಭವ ನೀಡಿತು. ಕ್ರಿಕೆಟ್ ಟೂರ್ನಾಮೆಂಟ್‌ನಲ್ಲಿ ಪೊಲೀಸ್, ಜಿಪಂ ಇಲಾಖೆ, ಶಿಕ್ಷಣ, ಸಹಕಾರಿ ಬ್ಯಾಂಕ್ ನೌಕರರು, ಪತ್ರಕರ್ತರ ತಂಡ ಸೇರಿದಂತೆ ವಿವಿಧ ಇಲಾಖೆಯ 12 ತಂಡಗಳು ಹಾಗೂ ಶಿಕ್ಷಕಿಯರ ಥ್ರೋಬಾಲ್ ಪಂದ್ಯಾವಳಿಯಲ್ಲಿ ಎರಡು ತಂಡಗಳು ಭಾಗವಹಿಸಿದ್ದವು. ಕ್ರಿಕೆಟ್ ಅಂತಿಮ ಪಂದ್ಯ ಹಣಾಹಣಿಯಲ್ಲಿ ಪೊಲೀಸ್ ಇಲಾಖೆ ಹಾಗೂ ಸಹಕಾರಿ ಬ್ಯಾಂಕ್ ನೌಕರರ ಮಧ್ಯ ನಡೆದ ಪಂದ್ಯದಲ್ಲಿ ಸಹಕಾರಿ ಬ್ಯಾಂಕ್ ನೌಕರರ ತಂಡ ಪೊಲೀಸ್ ಇಲಾಖೆಯ ನೀಡಿದ 65 ರನ್ ಗುರಿ ತಲುಪಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.ಶಿಕ್ಷಕರ ಕ್ರಿಕೆಟ್ ಟೂರ್ನಾಮೆಂಟ್‌ನಲ್ಲಿ ಹೂವಿನಹಿಪ್ಪರಗಿ ಹುಲಿ ಪ್ರಥಮ, ಮನಗೂಳಿ ಮಹಾರಾಜ ತಂಡ ದ್ವಿತೀಯ ಸ್ಥಾನ ಪಡೆದವು. ಶಿಕ್ಷಕಿಯರ ಥ್ರೋಬಾಲ್ ಪಂದ್ಯಾವಳಿಯಲ್ಲಿ ಹೂವಿನಹಿಪ್ಪರಗಿ ವಲಯ ಪ್ರಥಮ, ಬಸವನಬಾಗೇವಾಡಿ ವಲಯ ದ್ವಿತೀಯ ಸ್ಥಾನ ಪಡೆದವು.ಪಂದ್ಯಾವಳಿಯ ಪುರುಷೋತ್ತಮ ಪ್ರಶಸ್ತಿ ಸೇರಿದಂತೆ ಉತ್ತಮ ಕ್ರಿಕೆಟ್ ಪ್ರದರ್ಶನ ನೀಡಿದವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಾಂಗ್ಲಿಯ ಸಿದ್ದು ಅವರು ಅಂಪೈಯರ್ ವಿಶಿಷ್ಠ ರೀತಿಯಲ್ಲಿ ಮಾಡಿ ಗಮನ ಸೆಳೆದರು. ಶಿರಸಿಯ ರಾಕೇಶ ಉತ್ತಮ ನಿರೂಪಣೆ ಮಾಡಿದರು.ಕೋಟ್‌..

ಕಳೆದ 5 ವರ್ಷದಿಂದ ಈ ಟೂರ್ನಾಮೆಂಟ್ ಆಯೋಜನೆ ಮಾಡಲಾಗುತ್ತಿದೆ. ನಾನು ಸ್ಥಾಪಿಸಿದ ಆದರ್ಶ ಶಿಕ್ಷಕರ ವೇದಿಕೆಯಿಂದ ಶಿಕ್ಷಕರ ಹಲವಾರು ಕಾರ್ಯಗಳಿಗೆ ನಿರಂತರವಾಗಿ ನೆರವಾಗುತ್ತ ಬರಲಾಗುತ್ತಿದೆ. ಮುಂಬರುವ ದಿನಗಳಲ್ಲಿ ನಾವು ಹಮ್ಮಿಕೊಳ್ಳುವ ಎಲ್ಲ ಕಾರ್ಯಗಳಿಗೂ ಸಹಕಾರ ಅಗತ್ಯ.

-ಉಮೇಶ ಕೌಲಗಿ, ಯುವ ಉದ್ಯಮಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೇಡಿಕೆ ಈಡೇರಿಕೆಗೆ ನಂದಿ ಸೇನೆಯ ಮತ್ತೊಂದು ಹೋರಾಟ
ಇಂದಿನಿಂದ ಮುದ್ದೇಬಿಹಾಳ, ತಾಳಿಕೋಟೆ ಕೆರೆಗಳಿಗೆ ನೀರು