ಕನ್ನಡಪ್ರಭ ವಾರ್ತೆ ಉಡುಪಿ
ವಿಜೇತರು ಪ್ರೌಢಶಾಲಾ ವಿಭಾಗ: ಕುಂದಾಪುರ ಶಂಕರನಾರಾಯಣ ಸ.ಪ.ಪೂ. ಕಾಲೇಜಿನ ಶ್ರೀನಿತಾ ಪ್ರಥಮ, ಉಡುಪಿಯ ಬಾಲಕಿಯರ ಸಪಪೂ ಕಾಲೇಜಿನ ಶಿವಾನಿ ದ್ವಿತೀಯ ಹಾಗೂ ಕಾರ್ಕಳ ಕಾಬೆಟ್ಟು ಎಸ್‌ವಿಟಿ ಆಂಗ್ಲ ಮಾಧ್ಯಮ ಶಾಲೆಯ ಅಸ್ಮಿತಾ ತೃತೀಯ ಸ್ಥಾನ ಪಡೆದಿರುತ್ತಾರೆ.ಪದವಿ ಪೂರ್ವ ಶಿಕ್ಷಣ ವಿಭಾಗ: ಕಾರ್ಕಳ ಸಾಣೂರು ಸಪಪೂ ಕಾಲೇಜಿನ ಸ್ನೇಹ ಪ್ರಥಮ, ಕುಂದಾಪುರ ಸಂತ ಮೇರಿ ಪಪೂ ಕಾಲೇಜಿನ ವಿದ್ಯಾಶ್ರೀ ದ್ವಿತೀಯ ಹಾಗೂ ಕುಂದಾಪುರ ಹೆಮ್ಮಾಡಿ ಜನತಾ ಪಪೂ ಕಾಲೇಜಿನ ಸುಶ್ಮಿತಾ ಆರ್ ನಾಯ್ಕ್ ತೃತೀಯ ಸ್ಥಾನ ಪಡೆದಿರುತ್ತಾರೆ.ಪದವಿ - ಸ್ನಾತಕೋತ್ತರ ಪದವಿ ವಿಭಾಗ: ಡಾ.ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರದ ಕಾಲೇಜಿನ ಸವಿತಾ ಎಸ್.ಎಂ ಪ್ರಥಮ, ತೆಂಕನಿಡಿಯೂರು ಸಪ್ರದ ಕಾಲೇಜಿನ ಅಪ್ಸನಾ ದ್ವಿತೀಯ ಹಾಗೂ ಡಾ.ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರ.ದ. ಕಾಲೇಜಿನ ವಿದ್ಯಾರ್ಥಿನಿ ಅಶ್ವಿನಿ ಎನ್.ಡಬ್ಲ್ಯು. ತೃತೀಯ ಸ್ಥಾನ ಪಡೆದಿದ್ದಾರೆ ಎಂದು ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.