ಪತ್ರಿಕೆಗಳು ಸಮಾಜದ ಆಧಾರ ಸ್ತಂಭ

KannadaprabhaNewsNetwork |  
Published : Jul 06, 2025, 01:48 AM IST
೦೫ಬಿಹೆಚ್‌ಆರ್ ೧: ಬಾಳೆಹೊನ್ನೂರಿನ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ, ಚರ್ಚಾ ಸ್ಪರ್ಧೆ ಕಾರ್ಯಕ್ರಮವನ್ನು ಗ್ರಾಪಂ ಅಧ್ಯಕ್ಷ ರವಿಚಂದ್ರ ಉದ್ಘಾಟಿಸಿದರು. | Kannada Prabha

ಸಾರಾಂಶ

ಬಾಳೆಹೊನ್ನೂರು, ದೇಶದ ಎಲ್ಲೆಡೆ ಪತ್ರಿಕಾ ರಂಗ ನಿರ್ಭೀತಿಯಿಂದ ವರದಿ ಮಾಡುತ್ತಿದ್ದು, ಪತ್ರಿಕೆಗಳು ಸಮಾಜದ ಆಧಾರ ಸ್ತಂಭ ಎಂದು ಬಿ.ಕಣಬೂರು ಗ್ರಾಪಂ ಅಧ್ಯಕ್ಷ ರವಿಚಂದ್ರ ಹೇಳಿದರು.

ಪತ್ರಿಕಾ ದಿನಾಚರಣೆ ಉದ್ಘಾಟಿಸಿ ರವಿಚಂದ್ರ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ದೇಶದ ಎಲ್ಲೆಡೆ ಪತ್ರಿಕಾ ರಂಗ ನಿರ್ಭೀತಿಯಿಂದ ವರದಿ ಮಾಡುತ್ತಿದ್ದು, ಪತ್ರಿಕೆಗಳು ಸಮಾಜದ ಆಧಾರ ಸ್ತಂಭ ಎಂದು ಬಿ.ಕಣಬೂರು ಗ್ರಾಪಂ ಅಧ್ಯಕ್ಷ ರವಿಚಂದ್ರ ಹೇಳಿದರು.

ಕಡ್ಲೇಮಕ್ಕಿಯ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಹಾಗೂ ಎನ್.ಆರ್.ಪುರ ತಾಲೂಕು ಕಜಾಪ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಹಾಗೂ ಚರ್ಚಾ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು. ಪತ್ರಿಕೆಗಳು, ರಾಜಕಾರಣಿಗಳು ಹಾಗೂ ಸಮಾಜ ತಿದ್ದುವ ಕೆಲಸ ಮಾಡುತ್ತಿವೆ. ವಸ್ತುನಿಷ್ಟ ವರದಿಯಿಂದ ಜನಪ್ರತಿನಿಧಿ ಗಳಿಗೆ ಪತ್ರಿಕೆ ಬಗ್ಗೆ ಗೌರವ ಹಾಗೂ ಭಯಭಕ್ತಿ ಬರುತ್ತದೆಎಂದರು. ನಿವೃತ್ತ ಉಪನ್ಯಾಸಕ ಎಂ.ಕೆ.ಪುಟ್ಟರಾಜು ಮಾತನಾಡಿ, ಚರ್ಚಾ ಸ್ಪರ್ಧೆಯಿಂದ ಅಧ್ಯಯನ ಹಾಗೂ ಮಾತುಗಾರಿಕೆ ಬೆಳೆಯುತ್ತದೆ. ದಿನಪತ್ರಿಕೆ ಹಾಗೂ ದೃಶ್ಯ ಮಾಧ್ಯಮ ಪರ, ವಿರೋಧವಾಗಿ ಉತ್ತಮ ವಾದ ಮಂಡಿಸಬಹುದು. ನಿರಂತರ ಅಧ್ಯಯನದಿಂದ ಜ್ಞಾನ ವೃದ್ಧಿಯಾಗಲಿದೆ ಎಂದರು. ಪತ್ರಕರ್ತ ಯಜ್ಞಪುರುಷಭಟ್ ಮಾತನಾಡಿ, ತಾನು ಪತ್ರಕರ್ತನಾಗಿ ಸಾರ್ವಜನಿಕ ಸಮಸ್ಯೆ ಬಗ್ಗೆ ನಿರಂತರ ಮಾಡಿದ ವರದಿಯಿಂದ ಕೆಲವು ಸಮಸ್ಯೆ ಬಗೆಹರಿದಿದೆ. ಪತ್ರಿಕೆ ಒಂದು ವಿಶ್ವವಿದ್ಯಾಲಯ ಇದ್ದಂತೆ ಅಧ್ಯಯನದಿಂಧ ಅಪಾರ ಜ್ಞಾನ ಸಿಗಲಿದೆ ಎಂದರು.

ಚರ್ಚಾ ಸ್ಪರ್ಧೆಯಲ್ಲಿ ಸೃಜನ್ (ಪ್ರಥಮ), ಸುದರ್ಶನ್ (ದ್ವಿತೀಯ) ಸ್ಥಾನ ಪಡೆದರು.

ಚುಸಾಪ ಖಜಾಂಚಿ ರಾ.ವೆಂಕಟೇಶ್, ಕಜಾಪ ತಾಲೂಕು ಅಧ್ಯಕ್ಷ ಸತೀಶ್ ಅರಳೀಕೊಪ್ಪ, ಕಾರ್ಯದರ್ಶಿ ಶೇಖರ್ ಇಟ್ಟಿಗೆ, ಪತ್ರಕರ್ತ ಪ್ರವೀಣ್‌ಕುಮಾರ್, ಕವಯತ್ರಿ ಲತಾ, ಪ್ರಾಚಾರ್ಯ ಬಿ.ಎಚ್.ಕೃಷ್ಣಮೂರ್ತಿ, ಹಿರಿಯ ಕ್ರೀಡಾಪಟು ಓ.ಡಿ.ಸ್ಟೀಫನ್, ಉಪನ್ಯಾಸಕರಾದ ಕೆ.ಜೆ.ಮಾಲತಿ, ಮಮತ, ರವಿಶಂಕರ್, ಜಾವಿದ್, ಪ್ರಶಾಂತ್, ಮರಿಯ, ವರ್ಷಿತ, ಸುಮಿತ, ಜೆಸೆಲ್ ಮತ್ತಿತರರು ಹಾಜರಿದ್ದರು.೦೫ಬಿಹೆಚ್‌ಆರ್ ೧:

ಬಾಳೆಹೊನ್ನೂರಿನ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ, ಚರ್ಚಾ ಸ್ಪರ್ಧೆ ಕಾರ್ಯಕ್ರಮವನ್ನು ಗ್ರಾಪಂ ಅಧ್ಯಕ್ಷ ರವಿಚಂದ್ರ ಉದ್ಘಾಟಿಸಿದರು. ಯಜ್ಞಪುರುಷಭಟ್, ಎಂ.ಕೆ.ಪುಟ್ಟರಾಜು, ಸತೀಶ್ ಅರಳೀಕೊಪ್ಪ, ಓ.ಡಿ.ಸ್ಟೀಫನ್ ಇದ್ದರು.

PREV

Recommended Stories

KAPPEC ಮೌನ ಕ್ರಾಂತಿ : ಸಾಲ ಪಡೆದವರಲ್ಲಿ ಶೇ.85 ಉದ್ದಿಮೆಗಳು ಯಶಸ್ಸು
ಆಹಾರೋದ್ಯಮಿಯಾಗಲು ಹಣಕಾಸು ನೆರವು ಸಿಗೋದೆಲ್ಲಿ? ಪಡೆಯೋದು ಹೇಗೆ?