ಪತ್ರಿಕೆ, ಪುಸ್ತಕಗಳು ಭವಿಷ್ಯ ರೂಪಿಸುವ ಸಾಧನಗಳು: ಹೊನ್ನೇನಹಳ್ಳಿ ಶೇಖರ್

KannadaprabhaNewsNetwork | Published : Dec 2, 2024 1:16 AM

ಸಾರಾಂಶ

ಕನ್ನಡ ಶಾಲೆ ಉಳಿದರೆ ಮಾತ್ರ ನಾಡು, ನುಡಿ, ಸಂಸ್ಕೃತಿ ಉಳಿವು. ಪರಿಸರ, ಶಿಕ್ಷಣ, ಆರೋಗ್ಯ, ಸಂಸ್ಕಾರ ಜಾಗೃತಿ ಸಂಸ್ಥೆಯ ಪ್ರಮುಖ ಧ್ಯೇಯವಾಗಿದೆ ಸರ್ಕಾರಿ ಶಾಲೆ ಮಕ್ಕಳ ಸಮಗ್ರ ಬಲವರ್ಧನೆಗೆ ಸಂಸ್ಥಾಪಕ ಅಧ್ಯಕ್ಷ ಎಲ್.ವೈ.ರಾಜೇಶ್ ಮಾರ್ಗದರ್ಶನದಲ್ಲಿ ಒತ್ತು ನೀಡಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಓದಿಗೆ ಮದ್ದಿನಂತೆ ಕೆಲಸ ಮಾಡುವ ಪುಸ್ತಕ, ಪತ್ರಿಕೆಗಳು ಭವಿಷ್ಯ ರೂಪಿಸುವ ಸಾಧನವಾಗಿದೆ ಎಂದು ರಾಜಲಾಂಛನ ಯುಕ್ತಿ ಸಂಸ್ಥಾನ ಉಪಾಧ್ಯಕ್ಷ ಎಚ್.ಎ.ಹೊನ್ನೇನಹಳ್ಳಿ ಶೇಖರ್ ಹೇಳಿದರು.

ಮಂದಗೆರೆ ಹೇಮಾವತಿ ಅನುದಾನಿತ ಪ್ರೌಢಶಾಲೆ ಮಕ್ಕಳಿಗೆ ಬೆಂಗಳೂರು ಚಂದಾಪುರ ಘಟಕದ ರಾಜಲಾಂಛನ ಯುಕ್ತಿ ಸಂಸ್ಥಾನದ ಎಸಿಪಿ ಎಲ್.ವೈ.ರಾಜೇಶ್ ಮಾರ್ಗದರ್ಶನದಲ್ಲಿ ಶಾಲಾ ಮಕ್ಕಳ ವ್ಯಾಸಂಗಕ್ಕಾಗಿ ಉಪಯುಕ್ತ ಪರಿಕರಗಳನ್ನು ವಿತರಿಸಿ ಮಾತನಾಡಿದರು.

ಶಾಲೆ ಕನ್ನಡ ಮಾಧ್ಯಮದ ಅನುದಾನಿತ ಶಾಲೆ. ಇದನ್ನು ಉಳಿಸಿ ಬೆಳೆಸುವುದು ಕನ್ನಡ ಭಾಷೆ ಉಳಿಸಿದಷ್ಟು ಪುಣ್ಯ ಎಲ್ಲರಿಗೂ ಲಭಿಸಲಿದೆ. ಕುಗ್ರಾಮದಲ್ಲಿ ಬಡವ, ಕೂಲಿಕಾರ್ಮಿಕ, ರೈತರು ಇದ್ದಾರೆ ಎಂದರು.

ಕನ್ನಡ ಶಾಲೆ ಉಳಿದರೆ ಮಾತ್ರ ನಾಡು, ನುಡಿ, ಸಂಸ್ಕೃತಿ ಉಳಿವು. ಪರಿಸರ, ಶಿಕ್ಷಣ, ಆರೋಗ್ಯ, ಸಂಸ್ಕಾರ ಜಾಗೃತಿ ಸಂಸ್ಥೆಯ ಪ್ರಮುಖ ಧ್ಯೇಯವಾಗಿದೆ ಸರ್ಕಾರಿ ಶಾಲೆ ಮಕ್ಕಳ ಸಮಗ್ರ ಬಲವರ್ಧನೆಗೆ ಸಂಸ್ಥಾಪಕ ಅಧ್ಯಕ್ಷ ಎಲ್.ವೈ.ರಾಜೇಶ್ ಮಾರ್ಗದರ್ಶನದಲ್ಲಿ ಒತ್ತು ನೀಡಲಾಗುತ್ತಿದೆ ಎಂದರು.

ಪರೀಕ್ಷೆ ಸನಿಹವಾಗಿದೆ. ಮೊಬೈಲ್, ಟಿವಿಗಳಿಂದ ದೂರವಿರಿ ಪತ್ರಿಕೆಗಳಲ್ಲಿ ಪ್ರಚಲಿತ ವಿದ್ಯಮಾನ ಓದಬೇಕು. ಪುಸ್ತಕಗಳನ್ನು ಓದಿರೆ ತೇರ್ಗಡೆ ಖಚಿತ. ಶೇ.90ರಷ್ಟು ಅಂಕಗಳಿಸಿದವರಿಗೆ ಆಕರ್ಷಕ ಉಡುಗೊರೆ ನೀಡಲಾಗುವುದು ಎಂದು ಹುರಿದುಂಬಿಸಿದರು.

ಇನ್ಫೋಸಿಸ್ ಸಾಪ್ಟ್‌ವೆರ್‌ ಎಂಜಿನಿಯರ್ ಸೌಮ್ಯ ಶಹಪುರಕರ್‌ ಮಾತನಾಡಿ, ಓದು ಬದುಕಿಗೆ ದಾರಿಯಾಗಿದೆ. ಕದಿಯಲಾರದ ವಿದ್ಯೆ ಸಂಪತ್ತು ಆಗಲಿ. ಮೊಬೈಲ್‌ ಕೈಯಿಂದ ಬಿಟ್ಟು ಪುಸ್ತಕವನ್ನು ಹಿಡಿಯಿರಿ. ಇದು ಭವಿಸ್ಯ ರೂಪಿಸಿ ಕೊಡಲಿದೆ. ತಮ್ಮ ಓದಿಗೆ ಸಹಕಾರ ಸದಾ ಇದೆ ಎಂದರು.

ಶಾಲಾ ಮಕ್ಕಳು ಓದಿಗಾಗಿ ಸೂಕ್ತ ಕಾಲದಲ್ಲಿ ಅಗತ್ಯ ಪರಿಕರಗಳನ್ನು ನೀಡಿದ್ದಕ್ಕೆ ಸೌಮ್ಯ ಅವರನ್ನು ಅಭಿನಂದಿಸಿದರು. ಸಂಸ್ಥೆ ಸದಸ್ಯರಾದ ಕೆ.ಜಿ.ಬಸವರಾಜು, ಎಚ್.ಎ.ಶ್ರೀಧರ್, ನಯನ, ಹೇಮಾವತಿ ಪ್ರೌಢಶಾಲೆ ಅಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ಮೋಹನ್‌ ಬಾಬು, ಮುರುಳಿ, ರಾಜು, ಮಮತಾ ಬಾಯಿ, ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

Share this article