ಕನ್ನಡಪ್ರಭ ವಾರ್ತಡ ಮಡಿಕೇರಿ
ನಿಡ್ತ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ 1988-89 ನೇ ಶೈಕ್ಷಣಿಕ ಸಾಲಿನ ಪೂರ್ವ ವಿದ್ಯಾರ್ಥಿಗಳ ಮಹಾ ಸಂಗಮ (7 ನೇ ತರಗತಿ) ಮತ್ತು ಕ್ರೀಡಾ ತಂಡ (1988-89) ದಿಂದ ಗುರುವಂದನಾ ಕಾರ್ಯಕ್ರಮ ಶಾಲೆ ಸಭಾಂಗಣದಲ್ಲಿ ನಡೆಯಿತು. ಅಧ್ಯಕ್ಷತೆ ವಹಿಸಿದ್ದ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎಂ.ಸಿ.ಜಯಕುಮಾರ ಮಾತನಾಡಿ, ಜೀವನದಲ್ಲಿ ಬೆಳಕು ತಂದ ಸರ್ವ ಶಿಕ್ಷಕರನ್ನು ಗೌರವಿಸುವುದು ನಮ್ಮ ಕರ್ತವ್ಯ ಎಂದರು.ಈ ಶಾಲೆ ಅಭಿವೃದ್ದಿಪಡಿಸಲು, ಆಂಗ್ಲ ಮಾಧ್ಯಮವನ್ನಾಗಿ ಪರಿವರ್ತಿಸಲು ಸಂಪನ್ಮೂಲ ಅಧಿಕಾರಿ ದಿನೇಶ್ ಸಿ.ಕೆ. ಅವರಲ್ಲಿ ಮನವಿ ಮಾಡಲಾಯಿತು.
ಶಿಕ್ಷತಕರಾದ ಡಿ.ಬಿ.ಸೋಮಪ್ಪ, ಬಿ.ಎಂ.ಷಣ್ಮುಖಯ್ಯ, ಸ್ವಾತಿ ವಿದ್ಯಾರ್ಥಿಗಳನ್ನು ಹರಸಿದರು.ದಿವಂಗತ ಶಿಕ್ಷಕರ ಸ್ಮರಣೆಗಾಗಿ ಅವರ ಕುಟುಂಬದ ಸದಸ್ಯರಾದ ಗಾಯತ್ರಿ ಶ್ರೀಪತಿ, ಅಕ್ಕಮ್ಮ ಶಾಂತಪ್ಪ, ತಂಗಮ್ಮ ಮುತ್ತಪ್ಪ, ವನಜಾಕ್ಷಿ ಗಣಪಯ್ಯ, ಸುದರ್ಶನ ಹೂವಯ್ಯ ಮತ್ತು ಕಿರಣ್ ಕೆ ಶಿವಪ್ಪ ಅವರನ್ನು ಸನ್ಮಾನಿಸಲಾಯಿತು.
ಶಿಕ್ಷಣ ಇಲಾಖೆ ಸಂಪನ್ಮೂಲ ಅಧಿಕಾರಿ ದಿನೇಶ್ ಸಿ.ಕೆ., ನಿಡ್ತ ಶಾಲೆ ಮುಖ್ಯೋಪಾಧ್ಯಾಯ ರತ್ನ ಪಿ.ಕೆ. ಮತ್ತು ಶಿಕ್ಷಕ ವೃಂದವನ್ನು ಗೌರವಿಸಲಾಯಿತು.ಮಾಜಿ ಯೋಧರಾದ ರಾಮಕೃಷ್ಣ ಎಂ.ಕೆ., ಮುರುಗನ್ ಜೆ.ಕೆ. ಮತ್ತು ಮಹಿಳಾ ಉದ್ಯಮಿ ಹೇಮಲತಾ ಅವರನ್ನು ಗೌರವಿಸಲಾಯಿತು.
ರಾಮಕೃಷ್ಣ ಎಂ.ಕೆ.ಸ್ವಾಗತಿಸಿದರು. ರೇಖಾ ಲೋಕೇಶ್ ಬಳಗದವರು ಪ್ರಾರ್ಥಿಸಿದರು. ಸುನೀಲ್ ಗೌಡಳ್ಳಿ ಮತ್ತು ಹೇಮಲತಾ ನಿರೂಪಿಸಿದರು. ಮುರುಗನ್ ಜೆಕೆ ಮತ್ತು ವೀರಭದ್ರಪ್ಪ ವಂದಿಸಿದರು.ಈ ಕಾರ್ಯಕ್ರಮಕ್ಕೆ 35 ವರುಷಗಳ ನಂತರ ದೇಶದ ವಿವಿಧೆಡೆಗಳಿಂದ ಸುಮಾರು 58 ಮಂದಿ ಆಗಮಿಸಿದ್ದರು.
ಸಂಘಟನೆ ಅಧ್ಯಕ್ಷರಾಗಿ ಎಂ.ಸಿ.ಜಯಕುಮಾರ್, ಉಪಾಧ್ಯಕ್ಷರಾಗಿ ರೇಖಾ ಲೋಕೇಶ್ ಮತ್ತು ಅಶೋಕ ಜೆ.ಎಸ್., ಕಾರ್ಯದರ್ಶಿಯಾಗಿ ಸುನಿಲ್ ಗೌಡಳ್ಳಿ, ಜಂಟಿ ಕಾರ್ಯದರ್ಶಿಗಳಾಗಿ ಮಲ್ಲೇಶ್ ಎಚ್.ಎಸ್. ಮತ್ತು ಆಶಾ ರಾಜೇಶ್, ಖಜಾಂಚಿಯಾಗಿ ರಾಮಕೃಷ್ಣ ಎಂ.ಕೆ. (ಮಾಜಿ ಸೈನಿಕ), ಪ್ರಧಾನ ಸಂಚಾಲಕರಾಗಿ ಮುರುಗನ್ ಜೆ ಕೆ (ಮಾಜಿ ಸೈನಿಕ), ವೀರಭದ್ರಪ್ಪ ಮತ್ತು ಹೇಮಲತಾ ಪದಾಧಿಕಾರಿಗಳಾಗಿ ನೇಮಕಗೊಂಡರು.