ನಿಖಿಲ್‌ ಅಭಿಮಾನಿಯ ಸೈಕಲ್‌ ಚುನಾವಣಾ ಪ್ರಚಾರ

KannadaprabhaNewsNetwork |  
Published : Nov 08, 2024, 12:36 AM IST
7ಕೆಆರ್ ಎಂಎನ್ 5.ಜೆಪಿಜಿಚನ್ನಪಟ್ಟಣ ಕ್ಷೇತ್ರದಲ್ಲಿ ಎನ್ ಡಿಎ ಅಭ್ಯರ್ಥಿ ನಿಖಿಲ್ ಪರವಾಗಿ ಪೈಲ್ವಾನ್ ವೆಂಕಟೇಶ್ ಬೈಸಿಕಲ್ ನಲ್ಲಿ ಪ್ರಚಾರ ನಡೆಸಿದರು. | Kannada Prabha

ಸಾರಾಂಶ

ಚನ್ನಪಟ್ಟಣ: ಚನ್ನಪಟ್ಟಣ ಕ್ಷೇತ್ರ ಉಪಚುನಾವಣೆಯಲ್ಲಿ ಎನ್ ಡಿಎ ಅಭ್ಯರ್ಥಿಯಾಗಿರುವ ನಿಖಿಲ್ ಕುಮಾರಸ್ವಾಮಿಯವರ ಅಭಿಮಾನಿಯೊಬ್ಬ ಸೈಕಲ್ ನಲ್ಲಿ ಕ್ಷೇತ್ರದಲ್ಲಿ ಅವರ ಪರ ಪ್ರಚಾರ ಮಾಡಿ ಗಮನ ಸೆಳೆಯುತ್ತಿದ್ದಾರೆ.

ಚನ್ನಪಟ್ಟಣ: ಚನ್ನಪಟ್ಟಣ ಕ್ಷೇತ್ರ ಉಪಚುನಾವಣೆಯಲ್ಲಿ ಎನ್ ಡಿಎ ಅಭ್ಯರ್ಥಿಯಾಗಿರುವ ನಿಖಿಲ್ ಕುಮಾರಸ್ವಾಮಿಯವರ ಅಭಿಮಾನಿಯೊಬ್ಬ ಸೈಕಲ್ ನಲ್ಲಿ ಕ್ಷೇತ್ರದಲ್ಲಿ ಅವರ ಪರ ಪ್ರಚಾರ ಮಾಡಿ ಗಮನ ಸೆಳೆಯುತ್ತಿದ್ದಾರೆ.

ಮೈಸೂರಿನ ಇನಕಲ್ ಗ್ರಾಮದ ಪೈಲ್ವಾನ್ ವೆಂಕಟೇಶ್ ಎಂಬುವರು ಸೈಕಲ್ ಸವಾರಿ ಮೂಲಕ ನಿಖಿಲ್ ಪರ ಭರ್ಜರಿ ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ.

ನಿಖಿಲ್ ಕುಮಾರಸ್ವಾಮಿಗೆ ಗೆಲುವಾಗಲಿ ಎಂದು ಕ್ಷೇತ್ರದಾದ್ಯಂತ ಸೈಕಲ್ ಸವಾರಿ ಹೊರಟಿರುವ ವೆಂಕಟೇಶ್‌, ತಮ್ಮ ಸೈಕಲ್ ಗೆ ಕುಮಾರಸ್ವಾಮಿ, ದೇವೇಗೌಡ, ನಿಖಿಲ್ ಕುಮಾರಸ್ವಾಮಿ ಹಾಗೂ ಯದುವೀರ್ ಅವರ ಫೋಟೋ ಅಳವಡಿಸಿದ್ದು. ಮೈಕ್ ಸೆಟ್ ಮೂಲಕ ಮತಯಾಚನೆ ಮಾಡುತ್ತಾ ಹಳ್ಳಿಗಳಿಗೆ ತೆರಳುತ್ತಿದ್ದಾರೆ. ಜೆಡಿಎಸ್ ಕಾರ್ಯಕರ್ತರು ವೆಂಕಟೇಶ್ ಅವರಿಗೆ ಅದ್ಧೂರಿ ಸ್ವಾಗತ ಕೋರುತ್ತಿದ್ದಾರೆ.

ಈ ವೇಳೆ ಮಾತನಾಡಿದ ವೆಂಕಟೇಶ್, ನಾನು ಅಪ್ಪಟ ಜೆಡಿಎಸ್ ಅಭಿಮಾನಿ. ಈ ಬಾರಿ ನಿಖಿಲ್ ಕುಮಾರಸ್ವಾಮಿಗೆ ಜಯವಾಗಲೆಂದು ದೇವರಲ್ಲಿ ಪ್ರಾರ್ಥಿಸಿ ನವೆಂಬರ್ 13ರವರೆಗೂ ಸೈಕಲ್‌ನಲ್ಲಿ ಪ್ರಚಾರ ಮಾಡುತ್ತೇನೆ ಎಂದರು.

ಕುಮಾರಸ್ವಾಮಿಯವರು ಮನಸ್ಸು ಮಾಡಿದ್ದರೆ ನಿಖಿಲ್ ಅವರನ್ನು ಎಂದೊ ಶಾಸಕ ಅಥವಾ ಸಂಸದರನ್ನಾಗಿ ಮಾಡಬಹುದಿತ್ತು. ಆದರೆ, ಜನ ಬೆಂಬಲದಿಂದ ಶಾಸಕರನ್ನಾಗಿ ಮಾಡಲು ಹೊರಟಿದ್ದಾರೆ. ಅವರ ಪರವಾಗಿ ನಾನು ಮತಯಾಚನೆ ಮಾಡುತ್ತಿದ್ದೇನೆ ಎಂದು ವೆಂಕಟೇಶ್ ಹೇಳಿದರು.

7ಕೆಆರ್ ಎಂಎನ್ 5.ಜೆಪಿಜಿ

ಚನ್ನಪಟ್ಟಣ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿ ನಿಖಿಲ್ ಪರ ಪೈಲ್ವಾನ್ ವೆಂಕಟೇಶ್ ಸೈಕಲ್‌ನಲ್ಲಿ ಪ್ರಚಾರ ನಡೆಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಮ್‌ ಜಿ, ಅನುದಾನ ಕಡಿತ ವಿರುದ್ಧ ಇಂದು ರಾಜ್ಯ ಸಂಪುಟದಲ್ಲಿ ನಿರ್ಣಯ?
ಹಸ್ತಕ್ಷೇಪ ನಿಲ್ಲಿಸಿ ಎಂದ ಸಿದ್ದು, ಡಿಕೆ ಕೇರಳ ಸಿಎಂ ತಿರುಗೇಟು