ಚನ್ನಪಟ್ಟಣ ಕ್ಷೇತ್ರ ಉಪಚುನಾವಣೆ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಆಸ್ತಿ ಎಷ್ಟು ಕೋಟಿ..?

KannadaprabhaNewsNetwork |  
Published : Oct 26, 2024, 12:48 AM ISTUpdated : Oct 26, 2024, 07:23 AM IST
HDK nikhil

ಸಾರಾಂಶ

ಚನ್ನಪಟ್ಟಣ ಕ್ಷೇತ್ರ ಉಪಚುನಾವಣೆಯ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಯವರು 113.40 ಕೋಟಿ ರು. ಮೌಲ್ಯದ ಆಸ್ತಿ ಹೊಂದಿದ್ದಾರೆ.

 ರಾಮನಗರ : ಚನ್ನಪಟ್ಟಣ ಕ್ಷೇತ್ರ ಉಪಚುನಾವಣೆಯ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಯವರು 113.40 ಕೋಟಿ ರು. ಮೌಲ್ಯದ ಆಸ್ತಿ ಹೊಂದಿದ್ದಾರೆ. ಈ ಪೈಕಿ 29.34 ಕೋಟಿ ರು.ಚರಾಸ್ತಿ ಹಾಗೂ 78.14 ಕೋಟಿ ರು.ಸ್ಥಿರಾಸ್ತಿ.

ನಿಖಿಲ್‌ ಅವರ ವಾರ್ಷಿಕ ಆದಾಯ 1.69 ಕೋಟಿ ರು. ನಿಖಿಲ್ ಬಳಿ ಸದ್ಯ 27,760 ರು. ನಗದು ಇದ್ದರೆ, ಅವರ ಪತ್ನಿ ರೇವತಿ ಬಳಿ 3.53 ಲಕ್ಷ ರು.ಇದೆ. ಠೇವಣಿ ಸೇರಿ ವಿವಿಧ ಬ್ಯಾಂಕ್‌ಗಳಲ್ಲಿ 24.23 ಕೋಟಿ ರು.ಇದೆ.

ಇನ್ನು, ನಿಖಿಲ್‌ ಅವರು ತಮ್ಮ ಮಾಲೀಕತ್ವದ ಚನ್ನಾಂಬಿಕ ಫಿಲಂಸ್ ನಲ್ಲಿ 5.92 ಲಕ್ಷ ರು., ಎನ್.ಕೆ.ಎಂಟರ್‌ಟೇನ್‌ ಮೆಂಟ್‌ ನಲ್ಲಿ 20.48 ಲಕ್ಷ ರು., ಕಸ್ತೂರಿ ಮೀಡಿಯಾ ಪ್ರೈ.ಲಿನಲ್ಲಿ 76 ಲಕ್ಷ ರು. ಹಾರಿಜಾನ್ ರಿಯಾಲಿಟಿ ಸಂಸ್ಥೆಯಲ್ಲಿ 60 ಲಕ್ಷ ರೂ, ನಾರ್ಥ ಆರ್ಕ್ ಸಂಸ್ಥೆಯಲ್ಲಿ 30 ಲಕ್ಷ ರು.ಹೂಡಿಕೆ ಮಾಡಿದ್ದಾರೆ. ಬಿಡದಿಯ ಹೋಬಳಿ ಸರ್ವೆ ಸಂಖ್ಯೆ 26ರಲ್ಲಿ 4 ಎಕರೆ ಕೃಷಿ ಭೂಮಿ ಹೊಂದಿದ್ದಾರೆ. ಇದರ ಮಾರುಕಟ್ಟೆ ಮೌಲ್ಯ 1.34 ಕೋಟಿ ರು. ಬೆಂಗಳೂರಿನ ರಿಚಮಂಡ್ ಟೌನ್ ನಲ್ಲಿ 21,500 ಚದರಡಿಯ ವಾಣಿಜ್ಯ ಕಟ್ಟಡವಿದೆ. ಇದರ ಮಾರುಕಟ್ಟೆ ಮೌಲ್ಯ 38 ಕೋಟಿ ರು. 

ತಂದೆ-ತಾಯಿಗೆ ಸಾಲ ಕೊಟ್ಟ ನಿಖಿಲ್‌:

ಜೊತೆಗೆ, ನಿಖಿಲ್‌, ವಿವಿಧ ಬ್ಯಾಂಕ್‌ಗಳಿಂದ ಒಟ್ಟು 70.44 ಕೋಟಿ ರು. ಸಾಲ ತೆಗೆದುಕೊಂಡಿದ್ದಾರೆ. ಇನ್ನು, ತಾಯಿ ಅನಿತಾ ಕುಮಾರಸ್ವಾಮಿಗೆ 4.65 ಕೋಟಿ ರು., ತಂದೆ ಎಚ್.ಡಿ.ಕುಮಾರಸ್ವಾಮಿಗೆ 9.18 ಲಕ್ಷ ರು. ಸಾಲ ಕೊಟ್ಟಿದ್ದಾರೆ.

ನಿಖಿಲ್ ಬಳಿ 39.84 ಲಕ್ಷ ರು.ಮೌಲ್ಯದ ಇನ್ನೋವಾ ಹೈಕ್ರಾಸ್ ಕಾರಿದೆ. ಜೊತೆಗೆ, ತಮ್ಮ ಮಾಲೀಕತ್ವದ ಎನ್.ಕೆ.ಎಂಟರ್‌ಟೇನ್‌ ಮೆಂಟ್‌ ಸಂಸ್ಥೆಯ ಮೂಲಕ ರೇಂಜ್ ರೋವರ್ ಕಾರು, ವ್ಯಾನಿಟಿ ವ್ಯಾನ್ (ಜಿಮ್), ಇನ್ನೋವಾ ಕ್ರಿಸ್ಟಾ ಕಾರು, ವ್ಯಾನಿಟಿ ವ್ಯಾನ್ (ಕ್ಯಾರವಾನ್) ಹೊಂದಿದ್ದಾರೆ. ನಿಖಿಲ್ ಬಳಿ 1.49 ಕೆಜಿ ಚಿನ್ನವಿದ್ದು, ಇದರ ಮಾರುಕಟ್ಟೆ ಮೌಲ್ಯ 1.96 ಕೋಟಿ ರು., 16 ಕೆಜಿ ಬೆಳ್ಳಿ ಆಭರಣಗಳಿದ್ದು, ಅವುಗಳ ಮೌಲ್ಯ 15.55 ಲಕ್ಷ ರು.ಗಳಾಗಿವೆ. 

ಪತ್ನಿಯೂ ಶ್ರೀಮಂತೆ:

ಇವರ ಪತ್ನಿ ರೇವತಿ ಬಳಿ 1.41 ಕೆಜಿ ಚಿನ್ನವಿದ್ದು, ಇದರ ಮೌಲ್ಯ 1.04 ಕೋಟಿ ರು.ಗಳು. ಇವರು 33.5 ಕೆಜಿ ಬೆಳ್ಳಿ ಆಭರಣ ಹೊಂದಿದ್ದು, ಇದರ ಮೌಲ್ಯ 32.56 ಲಕ್ಷ ರು.ಗಳು. ಜೊತೆಗೆ, 12.59 ಕ್ಯಾರೆಟ್ ನ ವಜ್ರದ ಆಭರಣ ಇವರ ಬಳಿ ಇದ್ದು, ಇದರ ಮೌಲ್ಯ 12.46 ಲಕ್ಷ ರು.ಗಳಾಗಿದೆ. ಬೆಂಗಳೂರು ಅತ್ತಿಗುಪ್ಪೆಯಲ್ಲಿರುವ ತಿರುಮಲ ಲಕ್ಷೂರಿಯಾ ಅಪಾರ್ಟ್ ಮೆಂಟ್ ನಲ್ಲಿ ಒಂದು ಫ್ಲಾಟ್ ಇದ್ದು, ಇದರ ಮಾರುಕಟ್ಟೆ ಮೌಲ್ಯ 43.43 ಲಕ್ಷ ರು.ಗಳು.

ಒಂದೂವರೆ ವರ್ಷದಲ್ಲಿ 8 ಕೋಟಿ ಏರಿಕೆ:

2019ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದಾಗ (ಮದುವೆಗೂ ಮುನ್ನ) 75 ಕೋಟಿ ಹಾಗೂ 2023ರ ರಾಮನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದಾಗ 104.96 ಕೋಟಿ ರು.ಆಸ್ತಿ ಹೊಂದಿದ್ದರು. ಕೇವಲ ಒಂದೂವರೆ ವರ್ಷದಲ್ಲಿ ಇವರ ಆಸ್ತಿ 8.44 ಕೋಟಿ ರು.ಗಳಷ್ಟು ವೃದ್ಧಿಯಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!