ಕನ್ನಡಪ್ರಭ ವಾರ್ತೆ ಹುಕ್ಕೇರಿ
ಯೋಜನೆಯ ಕೊನೆಯ ಹಂತದವರೆಗೂ ನೀರು ತಲುಪಲು ಅಧಿಕಾರಿಗಳು ಮುತುವರ್ಜಿ ವಹಿಸಬೇಕು ಎಂದು ಸೂಚಿಸಿ, ಬೇಸಿಗೆ ಜತೆಗೆ ಬರಗಾಲದ ಈ ಸಂದರ್ಭದಲ್ಲಿ ರೈತರ ಹಿತ ಕಾಪಾಡಲು ಯೋಜನೆ ನವೀಕರಣಗೊಳಿಸಲಾಗಿದೆ. ಈ ವ್ಯಾಪ್ತಿಯ ಗ್ರಾಮಗಳ ರೈತರು ನೀರನ್ನು ಹಿತ-ಮಿತವಾಗಿ ಬಳಸಿಕೊಂಡು ಸದುಪಯೋಗ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಮಹತ್ವಾಕಾಂಕ್ಷಿ ಈ ಯೋಜನೆಯ ಕೊನೆಯ ಹಂತದವರೆಗೂ ಸರಾಗವಾಗಿ ನೀರು ಸಾಗಲು ಈ ಪಂಪ್‌ಹೌಸ್‌ನಲ್ಲಿ ಹೊಸ ಪಂಪ್ ಮತ್ತು ಮೋಟಾರ್‌ಗಳನ್ನು ಅಳವಡಿಸಲಾಗಿದೆ. ಇದಕ್ಕಾಗಿ ₹1.70 ಕೋಟಿಗಳನ್ನು ವೆಚ್ಚ ಮಾಡುವ ಮೂಲಕ ಯೋಜನೆಯನ್ನು ನವೀಕರಣಗೊಳಿಸಲಾಗಿದೆ. ಕೋಚರಿ ಏತ ನೀರಾವರಿ ಯೋಜನೆ ವ್ಯಾಪ್ತಿಯ ಸುಲ್ತಾನಪುರ, ಶಿರಗಾಂವ, ಬೆಣಿವಾಡ, ಮದಿಹಳ್ಳಿ, ಮದಮಕ್ಕನಾಳ, ಬಸ್ತವಾಡ, ಹುಕ್ಕೇರಿ, ಮಸರಗುಪ್ಪಿ ಕಾಲುವೆಗಳಿಗೆ ಕಳೆದ ಎರಡು ದಿನದ ಹಿಂದೆ ನೀರು ಹರಿಬಿಡಲಾಗಿದೆ. ಇದರಿಂದ ಈ ಪ್ರದೇಶಗಳ ಜನ ಹಾಗೂ ಜಾನುವಾರುಗಳ ಕುಡಿಯುವ ನೀರಿನ ಬವಣೆ ನೀಗಿಸಿದಂತಾಗಿದೆ ಎಂದರು.ಗುತ್ತಿಗೆದಾರ ಬಸವರಾಜ ಗಂಗಣ್ಣವರ, ಮುಖಂಡರಾದ ಶ್ರೀಶೈಲ ಮಠಪತಿ, ಶಿವನಗೌಡ ಮದವಾಲ, ಮಹಾದೇವ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.