ನವೆಂಬರ್‌ 16ರಂದು ನಿಟ್ಟೆ ವಿಶ್ವವಿದ್ಯಾನಿಲಯ 14ನೇ ಘಟಿಕೋತ್ಸವ

KannadaprabhaNewsNetwork |  
Published : Nov 14, 2024, 12:54 AM IST
ನಿಟ್ಟೆ ವಿವಿ ಕುಲಪತಿ ಪ್ರೊ.ಡಾ.ಎಂ.ಎಸ್‌.ಮೂಡಿತ್ತಾಯ ಸುದ್ದಿಗೋಷ್ಠಿ | Kannada Prabha

ಸಾರಾಂಶ

ಶೈಕ್ಷಣಿಕ ಶ್ರೇಷ್ಠತೆಗೆ ಗೌರವ ನೀಡುವುದಕ್ಕಾಗಿ ವಿಶ್ವವಿದ್ಯಾಲಯ 22 ಚಿನ್ನದ ಪದಕ (11 ನಿಟ್ಟೆ ವಿಶ್ವವಿದ್ಯಾನಿಲಯ ಚಿನ್ನದ ಪದಕ ಮತ್ತು 11 ದತ್ತಿ ಚಿನ್ನದ ಪದಕ) ಹಾಗೂ 72 ಮೆರಿಟ್ ಪ್ರಮಾಣ ಪತ್ರಗಳನ್ನು ಪ್ರಶಸ್ತಿಯಾಗಿ ನೀಡಲಿದೆ ಎಂದರು.

ಕನ್ನಡಪ್ರಭ ವಾರ್ತೆ ಮಂಗಳೂರು

ನಿಟ್ಟೆ ವಿಶ್ವವಿದ್ಯಾನಿಲಯದ 14ನೇ ಘಟಿಕೋತ್ಸವ ಸಮಾರಂಭ 16 ರಂದು ಸಂಜೆ 3 ಗಂಟೆಗೆ ವಿಶ್ವವಿದ್ಯಾಲಯದ ದೇರಳಕಟ್ಟೆ ಕ್ಯಾಂಪಸ್ ಮೈದಾನದಲ್ಲಿ ನಡೆಯಲಿದೆ.

ಸಮಾರಂಭದಲ್ಲಿ ವಿಶ್ವವಿದ್ಯಾನಿಲಯ ಕುಲಾಧಿಪತಿ ಎನ್. ವಿನಯ ಹೆಗ್ಡೆ ಅಧ್ಯಕ್ಷತೆ ವಹಿಸಲಿದ್ದು, ಸೇನಾಪಡೆಗಳ ವೈದ್ಯಕೀಯ ಸೇವೆಗಳ ಡೈರೆಕ್ಟರ್ ಜನರಲ್ ಡಾ. ಆರ್ತಿ ಸರಿನ್ ಮುಖ್ಯ ಭಾಷಣ ಮಾಡಲಿದ್ದಾರೆ. ಪ್ರೊ. ಡಾ. ಎಂ. ಶಾಂತಾರಾಂ ಶೆಟ್ಟಿ, ಸಹ ಕುಲಾಧಿಪತಿ (ಆಸ್ಪತ್ರೆ ನಿರ್ವಹಣೆ) ಪ್ರೊ.ಡಾ.ಎಂ.ಶಾಂತಾರಾಮ ಶೆಟ್ಟಿ ಹಾಗೂ ಸಹಕುಲಾಧಿಪತಿ(ಆಡಳಿತ) ವಿಶಾಲ್ ಹೆಗ್ಡೆ, ವಿಶ್ವವಿದ್ಯಾನಿಲಯದ ವಿವಿಧ ಕಾಲೇಜುಗಳ ಮುಖ್ಯಸ್ಥರು ಮತ್ತು ಕಾರ್ಯಕಾರಿ ಮಂಡಳಿ ಹಾಗೂ ಶೈಕ್ಷಣಿಕ ಸಮಿತಿ ಸದಸ್ಯರು ಭಾಗವಹಿಸಲಿದ್ದಾರೆ ಎಂದು ಕುಲಪತಿ ಪ್ರೊ. ಡಾ. ಎಂ. ಎಸ್. ಮೂಡಿತ್ತಾಯ ಬುಧವಾರ ಮಂಗಳೂರಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.1,052 ಮಂದಿಗೆ ಪದವಿ:

ಈ ಸಮಾರಂಭದಲ್ಲಿ ಒಟ್ಟು 1,052 ವಿದ್ಯಾರ್ಥಿಗಳು ಪದವಿ ಪಡೆಯಲಿದ್ದಾರೆ.

ಪಿ.ಎಚ್.ಡಿ-34, ವೈದ್ಯಕೀಯ-163 (ಪಿಜಿ-15+ಯುಜಿ-148), ದಂತ ವೈದ್ಯಕೀಯ-147 (ಫೆಲೋಶಿಪ್-1+ಪಿಜಿ- 49+2-97), 2-209 (22-107+-102), 42-85 (22-30+-55), -143 (22-05+-138), -146 (2-42+2-104), ಮಾನವಿಕ-14 (ಪಿಜಿ-11+ ಯುಜಿ-03), ಜೈವಿಕ ವಿಜ್ಞಾನ -49 (ಪಿಜಿ-45 +ಯುಜಿ-04), ವಾಸ್ತುಶಿಲ್ಪ -41 (ಯುಜಿ), ವಾಕ್ ಮತ್ತು ಶ್ರವಣ -15 (ಪಿಜಿ) ಮತ್ತು ವ್ಯವಹಾರ ನಿರ್ವಹಣೆ - 06 (ಪಿಜಿ-06).ಶೈಕ್ಷಣಿಕ ಶ್ರೇಷ್ಠತೆಗೆ ಗೌರವ ನೀಡುವುದಕ್ಕಾಗಿ ವಿಶ್ವವಿದ್ಯಾಲಯ 22 ಚಿನ್ನದ ಪದಕ (11 ನಿಟ್ಟೆ ವಿಶ್ವವಿದ್ಯಾನಿಲಯ ಚಿನ್ನದ ಪದಕ ಮತ್ತು 11 ದತ್ತಿ ಚಿನ್ನದ ಪದಕ) ಹಾಗೂ 72 ಮೆರಿಟ್ ಪ್ರಮಾಣ ಪತ್ರಗಳನ್ನು ಪ್ರಶಸ್ತಿಯಾಗಿ ನೀಡಲಿದೆ ಎಂದರು.

110ಕ್ಕೂ ಅಧಿಕ ಕೋರ್ಸ್‌ಗೆ ಅವಕಾಶನಿಟ್ಟೆ ವಿಶ್ವವಿದ್ಯಾನಿಲಯ 2008ರಲ್ಲಿ ಸ್ಥಾಪನೆಯಾಗಿದ್ದು, ನಿಟ್ಟೆ ಎಜ್ಯುಕೇಶನ್‌ ಟ್ರಸ್ಟ್‌ನ ಅಂಗ ಸಂಸ್ಥೆಯಾಗಿದೆ. ಈ ವಿಶ್ವವಿದ್ಯಾಲಯ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿಯಿಂದ (NAAC) ಮೂಲಕ ‘A+’ ಶ್ರೇಣಿಯನ್ನು ಪಡೆದಿದೆ. ಭಾರತದ 1,100 ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳ ಪೈಕಿ ನ್ಯಾಷನಲ್ ಇನ್‌ಸ್ಟಿಟ್ಯೂಷನಲ್ ರಾಂಕಿಂಗ್ ಪ್ರೇಮ್‌ವರ್ಕ್ (NIRF) ನಲ್ಲಿ 66ನೇ ಸ್ಥಾನವನ್ನು ಹೊಂದಿದೆ. ಜೊತೆಗೆ ಟೈಮ್ಸ್ ಹೈಯರ್ ಎಜ್ಯುಕೇಶನ್ ವರ್ಲ್ಡ್ ಯೂನಿವರ್ಸಿಟಿ ರ್‍ಯಾಂಕಿಂಗ್ ಪಟ್ಟಿಯಲ್ಲಿ 1501+ ಶ್ರೇಣಿಯಲ್ಲಿ ಮತ್ತು ಟೈಮ್ಸ್ ಹೈಯರ್ ಎಜ್ಯುಕೇಶನ್ ಇಂಪ್ಯಾಕ್ಟ್ ರಾಂಕಿಂಗ್‌ನಲ್ಲಿ 301-400 ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಸ್ಥಾನ ಹೊಂದಿದೆ. ವಿಶ್ವವಿದ್ಯಾನಿಲಯ ಆರೋಗ್ಯ ವಿಜ್ಞಾನ, ಜೈವಿಕ ವಿಜ್ಞಾನ, ಸಮೂಹ ಸಂವಹನ ಅಧ್ಯಯನ, ವಾಸ್ತುಶಿಲ್ಪ, ಎಂಜಿನಿಯರಿಂಗ್, ಬಿಸಿನೆಸ್, ಹಾಸ್ಪಿಟಾಲಿಟಿ ಸೇವೆಗಳು, ಮತ್ತು ವಾಣಿಜ್ಯ ಮತ್ತು ನಿರ್ವಹಣೆ ಮುಂತಾದ ವಿಭಾಗಗಳಲ್ಲಿ 110 ಕ್ಕೂ ಹೆಚ್ಚು ಕೋರ್ಸ್‌ಗಳನ್ನು ನೀಡುತ್ತಿದೆ. ಈ ಕೋರ್ಸುಗಳಲ್ಲಿ ಭಾರತದಿಂದ ಮತ್ತು ವಿಶ್ವದ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು ಸೇರ್ಪಡೆ ಹೊಂದಿದ್ದಾರೆ.

ವಿಶ್ವವಿದ್ಯಾನಿಲಯದ ಮಾತೃ ಸಂಸ್ಥೆಯಾದ ನಿಟ್ಟೆ ಎಜುಕೇಶನ್ ಟ್ರಸ್ಟ್ ತನ್ನ ಮಂಗಳೂರು ಮತ್ತು ಬೆಂಗಳೂರು ಕ್ಯಾಂಪಸ್‌ಗಳಲ್ಲಿ 36 ಶಿಕ್ಷಣ ಸಂಸ್ಥೆಗಳನ್ನು ನಿರ್ವಹಿಸುತ್ತಿದೆ ಮತ್ತು ಸುಮಾರು 25,000 ವಿದ್ಯಾರ್ಥಿಗಳು ಇಲ್ಲಿ ಅಧ್ಯಯನ ಮಾಡುತ್ತಿದ್ದಾರೆ ಎಂದರು.

ಪ್ರಮುಖ ಅಧಿಕಾರಿಗಳಾದ ಡಾ.ಹರ್ಷ ಹಾಲಹಳ್ಳಿ, ಪ್ರೊ.ಡಾ.ಪ್ರಸಾದ್ ಬಿ.ಶೆಟ್ಟಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿವಶಂಕರಪ್ಪ ಕರ್ನಾಟಕ ರತ್ನಕ್ಕೆ ಅರ್ಹ : ಶ್ರೀ
ಮೈಸೂರು ಹೀಲಿಯಂ ಸಿಲಿಂಡರ್‌ ಸ್ಫೋಟ : ಎನ್‌ಐಎ ಭೇಟಿ