ಕಿಕ್ಕೇರಿಯಲ್ಲಿ ನಿತ್ಯೋತ್ಸವ ಕವಿ ನಿಸಾರ್‌ ಅಹಮದ್‌ ಜನ್ಮದಿನ ಆಚರಣೆ

KannadaprabhaNewsNetwork | Published : Feb 17, 2025 12:33 AM

ಸಾರಾಂಶ

ಕುವೆಂಪು ಅವರನ್ನುಅತಿ ಹೆಚ್ಚು ಓದಿಕೊಂಡ ನಿಸಾರ್‌ ಅವರಿಗೆ ರಾಷ್ಟ್ರಕವಿ ಪುರಸ್ಕಾರ ಸಿಗಬೇಕಿತ್ತು. ಕಿಕ್ಕೇರಿ ಎಂದರೆ ಪ್ರೇಮಕವಿ ಕೆ.ಎಸ್. ನರಸಿಂಹಸ್ವಾಮಿ ಅವರನ್ನು ಸ್ಮರಿಸುತ್ತಾ ನನ್ನೊಮ್ಮೆ ಕಿಕ್ಕೇರಿಗೆ ಬರಬೇಕು. ಕವಿಯ ಮನೆ ಜಗುಲಿಯಲ್ಲಿ ಕುಳಿತುಕೊಳ್ಳಬೇಕು ಎಂದು ಹಂಬಲಿಸುತ್ತಿದ್ದರು.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಪಟ್ಟಣದಲ್ಲಿ ಕನ್ನಡ ಕಲಾಸಂಘ, ಸ್ಪಂದನಾ ಫೌಂಡೇಷನ್, ಬೆಂಗಳೂರಿನ ಆದರ್ಶಸುಗಮ ಸಂಗೀತ ಅಕಾಡೆಮಿ ಟ್ರಸ್ಟ್‌ ವತಿಯಿಂದ ಇತ್ತೀಚೆಗೆ ಕವಿ ನಿಸಾರ್‌ ಅಹಮದ್‌ ಜನ್ಮದಿನವನ್ನು ಆಚರಿಸಲಾಯಿತು.

ಕೆ.ಎಸ್. ನರಸಿಂಹಸ್ವಾಮಿ ಟ್ರಸ್ಟ್‌ ಅಧ್ಯಕ್ಷ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಮಾತನಾಡಿ, ಭಾವೈಕ್ಯತೆಯನ್ನು ತಮ್ಮ ಬದುಕು, ಕವಿತೆಯಲ್ಲಿ ತೋರಿಸಿದ ನಿತ್ಯೋತ್ಸವ ಕವಿ ನಿಸಾರ್‌ ಅಹಮದ್‌ ಎಂದರು.

ಕುವೆಂಪು ಅವರನ್ನುಅತಿ ಹೆಚ್ಚು ಓದಿಕೊಂಡ ನಿಸಾರ್‌ ಅವರಿಗೆ ರಾಷ್ಟ್ರಕವಿ ಪುರಸ್ಕಾರ ಸಿಗಬೇಕಿತ್ತು. ಕಿಕ್ಕೇರಿ ಎಂದರೆ ಪ್ರೇಮಕವಿ ಕೆ.ಎಸ್. ನರಸಿಂಹಸ್ವಾಮಿ ಅವರನ್ನು ಸ್ಮರಿಸುತ್ತಾ ನನ್ನೊಮ್ಮೆ ಕಿಕ್ಕೇರಿಗೆ ಬರಬೇಕು. ಕವಿಯ ಮನೆ ಜಗುಲಿಯಲ್ಲಿ ಕುಳಿತುಕೊಳ್ಳಬೇಕು ಎಂದು ಹಂಬಲಿಸುತ್ತಿದ್ದರು ಎಂಬ ಕವಿಯ ಮನದಾಳದ ನುಡಿಯನ್ನು ಸ್ಮರಿಸಿದರು.

ಬಯಲುಸೀಮೆಯಲ್ಲಿ ಜನಿಸಿದ್ದರೂ ಇವರು ಪ್ರಕೃತಿಆರಾಧಕರಾಗಿದ್ದರು. ಜೋಗದ ಸಿರಿ ಬೆಳಕಿನಲ್ಲಿ ಕನ್ನಡನಾಡಿನ ಪ್ರಕೃತಿ ಐಸಿರಿ, ವೈವಿಧ್ಯತೆಯನ್ನು ಸುಂದರವಾಗಿ ಎಣಿದಿದ್ದಾರೆ. ಇವರ ಕುರಿಗಳು ಸಾರ್ ಕುರಿಗಳು ಗೀತೆಜನಪ್ರಿಯತೆ ನಾಡಿನಲ್ಲಿದೊಡ್ಡ ಸದ್ದು ಮಾಡಿ ಚಲನಚಿತ್ರ ಕೂಡ ಆಗಿದೆ. ಹಿಂದೂ ಸಂಸ್ಕೃತಿಯನ್ನು ಹೆಚ್ಚು ಪ್ರೀತಿಸುತ್ತಿದ್ದ ಅಪ್ಪಟ ಕನ್ನಡದ ಕವಿಯಾಗಿ ಭಾವೈಕ್ಯತೆ ನಿರ್ಗವಿ ಕವಿ ಎಂದು ನೆನೆದರು.

ಇದೇ ವೇಳೆ ಕವಿ ನಿಸಾರ್ ಅಹಮದ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೀತನಮನ ಅರ್ಪಿಸಲಾಯಿತು. ಟ್ರಸ್ಟಿ ತ್ರಿವೇಣಿ, ಸಮಾಜ ಸೇವಾಕರ್ತರಾದ ಗುರುಮೂರ್ತಿ, ಸತೀಶ್, ಮಹೇಶ್, ಕವಿತಾ, ಶಾಲಾ ಮಕ್ಕಳು ಭಾಗವಹಿಸಿದ್ದರು.

ಸಂತ ಸೇವಾಲಾಲ್ ತತ್ವಾದರ್ಶ ಪಾಲಿಸಿ: ಶಾಸಕ ಪಿ.ರವಿಕುಮಾರ್

ಮಂಡ್ಯ:

ಸಂತ ಸೇವಾಲಾಲ್ ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಂಡು ಅವರ ಹಾದಿಯಲ್ಲಿ ಸಾಗಬೇಕು ಎಂದು ಶಾಸಕ ಪಿ.ರವಿಕುಮಾರ್ ಹೇಳಿದರು.

ನಗರದ ಬಿ.ಟಿ.ಲಲಿತಾ ನಾಯಕ್ ಬಡಾವಣೆಯಲ್ಲಿ ಆಯೋಜಿಸಿದ್ದ ಶ್ರೀಸಂತ ಸೇವಾಲಾಲ್ 286 ಜಯಂತಿ ಉದ್ಘಾಟಿಸಿ ಮಾತನಾಡಿ, ಶ್ರೀಮಂತರು, ಜಮೀನುದಾದರಾರಿಂದ ತನ್ನ ಸಮುದಾಯದವರ ಮೇಲಾಗುತ್ತಿದ್ದ ಶೋಷಣೆ ಹೋಗಲಾಡಿಸಲು ಹೋರಾಡಿದ ಸಂತ ಸೇವಾಲಾಲ್ ವ್ಯಕ್ತಿತ್ವ ನಿಜಕ್ಕೂ ಶ್ಲಾಘನೀಯ ಎಂದರು.

ಸಂತ ಸೇವಾಲಾಲ್ ಅವರ ಹೋರಾಟ ಮನೋಭಾವ ಹಾಗೂ ಸಮಾಜಕ್ಕೆ ಅವರು ನೀಡಿರುವ ಕೊಡುಗೆ ಅಪಾರವಾಗಿದೆ. ಸಮಾಜದಲ್ಲಿ ಎಲ್ಲರೂ ಒಂದೇ, ಎಲ್ಲರೂ ಸಹಬಾಳ್ವೆಯಿಂದ ಬಾಳಬೇಕು ಎನ್ನುವ ಮನೋಭಾವ ಅವರದಾಗಿತ್ತು. ತನ್ನ ಜೀವಿತಾವಧಿಯವರೆಗೂ ತಮ್ಮ ಸಮುದಾಯದವರಿಗಾಗಿ ಹೋರಾಡಿದ ಏಕೈಕ ವ್ಯಕ್ತಿ ಸಂತ ಸೇವಾಲಾಲ್ ಎಂದರೆ ತಪ್ಪಾಗುವುದಿಲ್ಲ ಎಂದರು.

ನಗರಸಭೆ ಅಧ್ಯಕ್ಷ ಎಂ.ವಿ.ಕಾಶ್ (ನಾಗೇಶ್) ಮಾತನಾಡಿ, ತನ್ನ ಸಮುದಾಯದವರ ಉಳಿವಿಗಾಗಿ ಹೋರಾಡಿದ ಇಂತಹ ಮಹಾನ್ ವ್ಯಕ್ತಿಯ ದಿನವನ್ನು ಆಚರಣೆ ಅವಶ್ಯಕವಾಗಿದೆ. ಅವರ ನಿಷ್ಠೆ, ವ್ಯಕ್ತಿತ್ವ ಮತ್ತು ತತ್ವಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಂಡು ಮುಂದೆ ಸಾಗೋಣ ಎಂದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ನಂದೀಶ್, ಸಮುದಾಯ ಮುಖಂಡರು ಉಪಸ್ಥಿತರಿದ್ದರು.

Share this article