ಬಲ್ಕ್ ಅಪ್ಲಿಕೇಷನ್, ಸುಳ್ಳು ಮಾಹಿತಿ ಪ್ರಕರಣ ಇಲ್ಲ

KannadaprabhaNewsNetwork |  
Published : Oct 07, 2026, 01:45 AM IST
ಡಾ.ವಿಜಯಮಹಾಂತೇಶ ದಾನಮ್ಮನವರ | Kannada Prabha

ಸಾರಾಂಶ

ಎಸ್ಐಆರ್ ಪ್ರಕ್ರಿಯೆಗೆ ಸಂಬಂಧಿಸಿದಂತೆ ದಾವಣಗೆರೆ ಜಿಲ್ಲೆಯಲ್ಲಿ ಯಾವುದೇ ಬಲ್ಕ್ ಅಪ್ಲಿಕೇಷನ್, ಸುಳ್ಳು ಮಾಹಿತಿ ನೀಡಿದ ಪ್ರಕರಣಗಳು ಯಾವುದೂ ಇಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಸ್ಪಷ್ಟಪಡಿಸಿದ್ದಾರೆ.

- ಹರಿಹರದಲ್ಲಿ ಹೆಸರು ಸೇರ್ಪಡೆಗೆ ಅರ್ಜಿ ನೀಡಿದ್ದ ನಾಲ್ವರು ನಾಪತ್ತೆ: ಡಿಸಿ- - -

ದಾವಣಗೆರೆ: ಎಸ್ಐಆರ್ ಪ್ರಕ್ರಿಯೆಗೆ ಸಂಬಂಧಿಸಿದಂತೆ ದಾವಣಗೆರೆ ಜಿಲ್ಲೆಯಲ್ಲಿ ಯಾವುದೇ ಬಲ್ಕ್ ಅಪ್ಲಿಕೇಷನ್, ಸುಳ್ಳು ಮಾಹಿತಿ ನೀಡಿದ ಪ್ರಕರಣಗಳು ಯಾವುದೂ ಇಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಜಿಲ್ಲೆಯಲ್ಲಿ 7086 ನೋಟೀಸ್ ಜಾರಿ ಮಾಡಿದ್ದೆವು. ಈಗಾಗಲೇ 6733 ಅರ್ಜಿ ವಿಚಾರಣೆ ಮಾಡಿ, ಪ್ರಕ್ರಿಯೆ ಪೂರ್ಣವಾಗಿದ್ದು, ಒಟ್ಟು 112 ಮತದಾರರನ್ನು ಕೈಬಿಟ್ಟಿದ್ದೇವೆ. ಈಗಾಗಲೇ ನೋಂದಣಿಯಾದವರು, ಮೃತಪಟ್ಟವರ ಹೆಸರುಗಳನ್ನು ಕೈ ಬಿಟ್ಟಿದ್ದೇವೆ. ಡೂಪ್ಲಿಕೇಟ್ ಮತ್ತು ಮೃತಪಟ್ಟವರ ಹೆಸರುಗಳನ್ನು ಬಿಟ್ಟರೆ, ಉಳಿದ ಯಾರನ್ನೂ ಕೈಬಿಟ್ಟಿಲ್ಲ. ಇನ್ನುಳಿದ 353 ಮತದಾರರು ನಮಗೆ ಸಿಗುತ್ತಿಲ್ಲ. ಹರಿಹರದಲ್ಲಿ ಅರ್ಜಿ ಸಲ್ಲಿಸಿದ್ದ ನಾಲ್ವರು ನಾಪತ್ತೆಯಾಗಿದ್ದಾರೆ. ಬ್ಯಾಂಕ್‌ಗಳಿಂದ ಸಾಲ ಪಡೆದು, ಮರು ಪಾವತಿಸದೇ ನಾಪತ್ತೆಯಾಗಿದ್ದಾರೆ ಎಂದು ಸುದ್ದಿಗೋಷ್ಟಿಯಲ್ಲಿ ಅವರು ತಿಳಿಸಿದರು.

ನಾವು ದೂರವಾಣಿ ಕರೆ ಮಾಡಿದರೂ ಅಂತಹವರು ಕರೆ ಸ್ವೀಕರಿಸುತ್ತಿಲ್ಲ. ಫಾರಂ-7 ಅಡಿ ನಮಗೆ ಸಾಮೂಹಿಕವಾಗಿ ಯಾವುದೇ ಅರ್ಜಿಗಳು ಬಂದಿಲ್ಲ. ಫಾರಂ-6, 6 ಎ, 7, 8ರಡಿ 24012 ಅರ್ಜಿಗಳು ಸಲ್ಲಿಕೆಯಾಗಿದ್ದವು. 22200 ಅರ್ಜಿಗಳನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಿದ್ದೇವೆ. 2142 ಅರ್ಜಿಗಳು ಬಾಕಿ ಇವೆ. ಫಾರಂ 6ರಲ್ಲಿ ಕೆಲ ನೂನ್ಯತೆಗಳನ್ನು ನೋಡಿದ್ದೇವೆ. ಕೇವಲ ಆಧಾರ್ ಕಾರ್ಡ್ ಒಂದನ್ನೇ ಸ್ವೀಕಾರ ಮಾಡಿ, ಅರ್ಜಿ ಸ್ವೀಕರಿಸುತ್ತಿದ್ದಾರೆ ಎಂದು ಹೇಳಿದರು.

ಫಾರಂ 6ಕ್ಕೆ ತಂದೆ, ತಾಯಿ ಹೆಸರು, ಶಾಲಾ ದಾಖಲೆ ಸೇರಿದಂತೆ ಯಾವುದಾದರೂ ದಾಖಲೆ ನೀಡುವಂತೆ ತಿಳಿಸಿದ್ದೇವೆ. ದಾಖಲೆ ನೀಡದೇ ಸಲ್ಲಿಸಿದ 6 ಅರ್ಜಿಗಳನ್ನು ನಾವು ತಿರಸ್ಕರಿಸಿದ್ದೇವೆ. ಈಗಾಗಲೇ ಮತದಾರರ ಪಟ್ಟಿಯಲ್ಲಿ ಹೆಸರಿದ್ದರೂ ಫಾರಂ 6ರಡಿ ಕೆಲವರು ಅರ್ಜಿ ಸಲ್ಲಿಸಿದ್ದಾರೆ. ಫಾರಂ 6ರಡಿ ಸಲ್ಲಿಸಿದ್ದ 816 ಅರ್ಜಿ ತಿರಸ್ಕೃತವಾಗಿವೆ. ಈಗಾಗಲೇ ಮತದಾರರ ಪಟ್ಟಿಯಲ್ಲಿದ್ದ ಕೆಲವರು ಬೇರೆ ವಿಳಾಸ ನೀಡಿ, ಅರ್ಜಿ ಸಲ್ಲಿಸಿದ್ದಾರೆ. ಅಂತಹವರಿಗೆ ನೋಟೀಸ್ ಜಾರಿ ಮಾಡುತ್ತೇವೆ. ಉದ್ದೇಶ ಪೂರ್ವಕವಾಗಿ ಕೊಟ್ಟಿದ್ದಾರೋ, ಗೊತ್ತಿಲ್ಲದೇ ಕೊಟ್ಟಿದ್ದಾರಾ ಎಂಬ ಬಗ್ಗೆ ಪರಿಶೀಲಿಸುತ್ತೇವೆ ಎಂದು ಡಿಸಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಜಯಪುರ ಶಾಸಕ ಯತ್ನಾಳ್ ವಿರುದ್ಧ ದಾವಣಗೆರೆ ಕಾಂಗ್ರೆಸ್ ದೂರು
ಶಿಥಿಲ, ಹಳೇ ಪಶು ವೈದ್ಯಕೀಯ ಆಸ್ಪತ್ರೆಗಳ ಪಟ್ಟಿ ನೀಡಿ: ಶಾಂತನಗೌಡ