ಒಳ ಮೀಸಲಾತಿ ಪ್ರಸ್ತಾವನೆ ಹರಿದು ಹಾಕಿದ್ದೇ ಖರ್ಗೆ । ಕುಟುಂಬ ಸಮೇತ ಅಯೋಧ್ಯೆಗೆ ಹೋಗುವೆ ಕನ್ನಡಪ್ರಭ ವಾರ್ತೆ ಹಾಸನ
ನಗರದ ಸಂಸದರ ನಿವಾಸದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಜೆ ಒಕ್ಕಲಿಗರ ಒಂದು ಸಮಾವೇಶ ಇದ್ದು, ಎಸ್.ಎಂ. ಕೃಷ್ಣ, ಡಿ.ಕೆ. ಶಿವಕುಮಾರ್ ಸೇರಿ ಎಲ್ಲರೂ ಭಾಗಿಯಾಗುವರು ಎಂದ ಹೇಳಿದರು.
‘ಒಕ್ಕಲಿಗ ಸಮುದಾಯದ ಕೋಟಾದಲ್ಲಿನ ಮೀಸಲಾತಿ ಕಡಿತ ಮಾಡಿ ಮುಸ್ಲಿಮರಿಗೆ ಹಂಚಿದ್ದೆ ನಾನು. ಇದೀಗ ಒಳ ಮೀಸಲಾತಿ ಕೇಳುತ್ತಿರುವ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರೇ ನಾನು ಸಿಎಂ ಆಗಿದ್ದಾಗ ಸಲ್ಲಿಸಿದ ಒಳ ಮೀಸಲಾತಿ ಪ್ರಸ್ತಾವನೆಯನ್ನು ಹರಿದು ಹಾಕಿದ್ದರು’ ಎಂದು ದೇವೇಗೌಡ ಹೇಳಿದರು.‘ಒಳ ಮೀಸಲಾತಿ ಬಗ್ಗೆ ರಾಜ್ಯ ಸರ್ಕಾರದ ಸಚಿವ ಸಂಪುಟ ಸಭೆ ನಿರ್ಣಯ ಮಾಡಿ ಕೇಂದ್ರಕ್ಕೆ ಕಳುಹಿಸಿದೆ. ಅಂದು ಒಕ್ಕಲಿಗರ ಮೀಸಲಾತಿ ಕೋಟಾ ಕಡಿತಗೊಳಿಸಿ ಮುಸ್ಲಿಮರಿಗೆ ಹಂಚಿದ್ದೆ ನಾನು. ಮಲ್ಲಿಕಾರ್ಜುನ ಖರ್ಗೆ ಅವರು ಸಂವಿಧಾನ ಕೊಟ್ಟ ಮೀಸಲಾತಿ ಭರ್ತಿ ಮಾಡಲು ಆಗದಿದ್ದಾಗ ಉದ್ಯೋಗದಲ್ಲಿ ಪದೋನ್ನತಿ ಬಗ್ಗೆ ಜಾರಿ ಮಾಡಲು ಕೇಳಿದರು. ಶೇ. ೧೫ ಎಸ್‌ಸಿಗಳಿಗೆ, ಶೇ. ೩ ರಷ್ಟು ಎಸ್ಟಿಗಳಿಗೆ ಮೀಸಲಾತಿ ಇತ್ತು. ಆದರೆ ಉದ್ಯೋಗದಲ್ಲಿ ಈ ಮೀಸಲಾತಿ ಪ್ರಮಾಣ ತಲುಪದೆ ಹೋದಾಗ ನಾನು ಎಸ್‌ಸಿಗಳಿಗೆ ಶೇ. ೧೫ ರಿಂದ ೧೮ಕ್ಕೆ, ಎಸ್‌ಟಿಗಳಿಗೆ ಶೇ. ೩ ರಿಂದ ೫ಕ್ಕೆ ಏರಿಸಿದೆ. ಇದೆಲ್ಲವನ್ನೂ ಕೂಡ ನಾನು ಸಿಎಂ ಆಗಿದ್ದ ಅವಧಿಯಲ್ಲಿ ಮಾಡಿದ್ದೇನೆ’ ಎಂದು ಮೀಸಲಾತಿ ಬಗ್ಗೆ ತಮ್ಮ ಅವಧಿಯಲ್ಲಿ ಕೈಗೊಂಡ ತೀರ್ಮಾನಗಳ ಬಗ್ಗೆ ದೇವೇಗೌಡರು ಇದೇ ವೇಳೆ ಸ್ಮರಿಸಿದರು.
ಪ್ರಸ್ತಾವನೆ ಹರಿದಿದ್ದು ಖರ್ಗೆ:
2019 ರ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ರಾಜಣ್ಣ ಮಾತನಾಡಿದ್ದ ಬಗ್ಗೆ ಬೇಸರ ವ್ಯಕ್ತಪಡಿಸಿದ ದೇವೇಗೌಡರು, ‘ಮೀಸಲಾತಿ ಬಗ್ಗೆ ಏನಾಗಿದೆ ಎನ್ನುವ ಬಗ್ಗೆ ಚರ್ಚೆ ಆಗಲಿ. ಇದನ್ನು ತಾರ್ಕಿಕ ಅಂತ್ಯಕ್ಕೆ ನಾನು ಕೊಂಡೊಯ್ಯುತ್ತೇನೆ. ನನಗೆ ನಾಲ್ಕು ಸೀಟ್ ಕೊಡ್ತಾರೊ, ಮೂರು ಕೊಡ್ತಾರೊ ಗೊತ್ತಿಲ್ಲ’ ಎಂದರು.
ಅಯೋಧ್ಯೆಗೆ ಕುಟುಂಬ ಸಮೇತ ಹೋಗುವೆ:
ಅರಸೀಕೆರೆ ಏನು ಅಂತ ಗೊತ್ತಿದೆ
ಜಿಲ್ಲೆಯ ಅರಸೀಕೆರೆಯ ಪರಾಜಿತ ಅಭ್ಯರ್ಥಿ ಎನ್.ಆರ್. ಸಂತೋಷ್ ಮನೆಯ ಬಳಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿರುವ ಅವರು ತಮ್ಮ ರಾಜಕೀಯ ಜೀವನದ ಮೆಲುಕು ಹಾಕಿದರು.
ಸಂತೋಷ ಅವರು ಕಳೆದ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಸ್ವಲ್ಪಮಟ್ಟಿಗೆ ಮನಸ್ಸಿನಲ್ಲಿ ಸಂಶಯವಿತ್ತು, ಅಶೋಕ್ ಗ್ರಹಗಳ ಬಗ್ಗೆ ಕೇಳಿದೆ ಸ್ವಲ್ಪಮಟ್ಟಿಗೆ ತೊಂದರೆ ಇತ್ತು. ಆದ್ದರಿಂದ ಸಂತೋಷ ಅವರನ್ನು ನಿಲ್ಲಿಸಲಾಯಿತು ಎಂದು ಹೇಳುತ್ತಿದ್ದೇನೆ ಎಂದರು.
ಪ್ರಧಾನಿ ಮೋದಿ ಗ್ರೇಟ್‘60 ವರ್ಷ ರಾಜಕೀಯ ಜೀವನದಲ್ಲಿ ಕಾಂಗ್ರೆಸ್ ಜೊತೆ ಹೋರಾಟ ಮಾಡಿದೆ. ನನ್ನನ್ನು ತುಳಿದರು. ಆದರೆ ಮೋದಿ ಅವರನ್ನು ಭೇಟಿ ಮಾಡಲು ಹೋದಾಗ ಪಕ್ಕದಲ್ಲಿ ಕುಮಾರಸ್ವಾಮಿ ,ರೇವಣ್ಣ ಅವರು ಇದ್ದರೂ ಸಹ ನನ್ನ ಕೈಹಿಡಿದು ಕೂರಿಸಿ ನೀವು ದೇಶಕ್ಕೆ ಸೇವೆ ಮಾಡಿದ್ದೀರಿ ಎಂದರು. ಹೀ ಈಸ್ ಗ್ರೇಟ್ ಮ್ಯಾನ್’ ಎಂದು ಹೊಗಳಿದರು. ಹಾಸನದಲ್ಲಿ ಸಂಸದರ ನಿವಾಸದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದೇವೇಗೌಡರು.