ಕಾರ್ಮಿಕರಿಲ್ಲದೇ ಯಾವುದೇ ದೇಶದ ಅಭಿವೃದ್ಧಿ ಅಸಾಧ್ಯ: ವಕೀಲ ಮಂಜುನಾಥ್‌ ರೆಡ್ಡಿ

KannadaprabhaNewsNetwork | Published : May 2, 2024 12:18 AM

ಸಾರಾಂಶ

ಡಾ. ಬಿ.ಆರ್. ಅಂಬೇಡ್ಕರ್ ೧೯೪೨ ರಲ್ಲಿ ಕಾನೂನು ಮಂತ್ರಿಯಾಗಿದ್ದಾಗ ದೇಶದ ಕಾರ್ಮಿಕರಿಗಾಗಿ ಅನೇಕ ಕಾಯ್ದೆಗಳನ್ನು ಜಾರಿಗೊಳಿಸಿದ್ದು, ಅವುಗಳ ಪ್ರಯೋಜನ ಪಡೆದುಕೊಳ್ಳಬೇಕು. ಸರ್ಕಾರದಿಂದ ಬರುವ ಅನೇಕ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದರು.

ಕನ್ನಡಪ್ರಭ ವಾರ್ತೆ ಚಿಂತಾಮಣಿ

ಜಗತ್ತಿನಲ್ಲಿ ಕಾರ್ಮಿಕರು ಇರದಿದ್ದರೆ ಯಾವುದೇ ದೇಶದ ಅಭಿವೃದ್ಧಿ ಅಸಾಧ್ಯ. ದೇಶ ಕಟ್ಟುವಲ್ಲಿ ಕಾರ್ಮಿಕರ ಪಾತ್ರ ಅತ್ಯಂತ ಪ್ರಮುಖವಾದುದೆಂದು ವಕೀಲ ಮಂಜುನಾಥ್‌ ರೆಡ್ಡಿ ನುಡಿದರು.

ರಾಜ್ಯ ಟೈಲ್ಸ್ ಮತ್ತು ಗ್ರಾನೈಟ್ ಹಾಗೂ ಇತರೆ ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘದ ಸಂಯುಕ್ತ ಆಶ್ರಯದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಭವನದಲ್ಲಿ ನಡೆದ ಕಾರ್ಮಿಕರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಯಾವುದೇ ಕಾಮಗಾರಿಗಾಗಿ ಇಂಜಿನಿಯರ್ ನೀಲನಕ್ಷೆ ಸಿದ್ಧಪಡಿಸುತ್ತಾನಾದರೂ, ಅದನ್ನು ಕಟ್ಟುವವರು, ನಿರ್ಮಾಣ ಮಾಡುವವರು ಕಾರ್ಮಿಕ ವರ್ಗದವರಾಗಿದ್ದಾರೆ. ಸಹಸ್ರಾರು ಮಂದಿಯ ಶ್ರಮದಾನ ಆ ಕಾಮಗಾರಿಯಲ್ಲಿ ಅಡಗಿದ್ದು ಇಂತಹ ಶ್ರಮಜೀವಿಗಳು ಮತ್ತವರ ಕೆಲಸವನ್ನು ಗೌರವಿಸುವ ಕೆಲಸವಾಗಬೇಕೆಂದರು.

ರಾಜ್ಯ ಹಾಗೂ ಕೇಂದ್ರ ಸರ್ಕಾರ ಕಾರ್ಮಿಕರಿಗಾಗಿ ಅನೇಕ ಯೋಜನೆ ಜಾರಿಗೊಳಿಸಿದ್ದು, ಅವುಗಳ ಸದುಪಯೋಗ ಪಡೆಯಬೇಕು. ನರೇಗಾ ಕಾಮಗಾರಿಯಲ್ಲಿ ತೊಡಗಿಸಿಕೊಂಡು ಸಮಾನ ಕೂಲಿ - ಸಮಾನ ವೇತನ ಪಡೆದು ಆರ್ಥಿಕವಾಗಿ ಸಬಲರಾಗಬೇಕೆಂದರು.

ಮುಖಂಡ ಅಗ್ರಹಾರ ಮೋಹನ್ ಮಾತನಾಡಿ, ದೇಶವು ಅಭಿವೃದ್ಧಿ ಹೊಂದಬೇಕಾದರೆ ಕಾರ್ಮಿಕರ ಶ್ರಮದಿಂದ ಮಾತ್ರ ಸಾಧ್ಯ. ಕಾರ್ಮಿಕರನ್ನು ಗೌರವಿಸಬೇಕು, ಅಭಿವೃದ್ಧಿ ಹಾಗೂ ಉತ್ಪನ್ನಗಳ ತಯಾರಿಕೆಯಲ್ಲಿ ಶ್ರಮಿಕನಿಲ್ಲದಿದ್ದರೆ ಶೂನ್ಯವೆಂದರು.

ಡಾ. ಬಿ.ಆರ್. ಅಂಬೇಡ್ಕರ್ ೧೯೪೨ ರಲ್ಲಿ ಕಾನೂನು ಮಂತ್ರಿಯಾಗಿದ್ದಾಗ ದೇಶದ ಕಾರ್ಮಿಕರಿಗಾಗಿ ಅನೇಕ ಕಾಯ್ದೆಗಳನ್ನು ಜಾರಿಗೊಳಿಸಿದ್ದು, ಅವುಗಳ ಪ್ರಯೋಜನ ಪಡೆದುಕೊಳ್ಳಬೇಕು. ಸರ್ಕಾರದಿಂದ ಬರುವ ಅನೇಕ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದರು.

ಚಿಂತಾಮಣಿ ನಗರ ಠಾಣೆಯ ಇನ್ಸ್ಪೆಕ್ಟರ್ ವಿಜಯ್‌ಕುಮಾರ್ ಕಾರ್ಮಿಕರ ಹಕ್ಕುಗಳು ಹಾಗೂ ಜವಾಬ್ದಾರಿಯ ಕುರಿತು ಮಾತನಾಡಿದರು.ಕಾರ್ಯಕ್ರಮದಲ್ಲಿ ಕಾರ್ಮಿಕರನ್ನು ಗೌರವಿಸಲಾಯಿತು.

ರಾಜ್ಯಾಧ್ಯಕ್ಷ ನಾರಾಯಣಸ್ವಾಮಿ, ಉಪಾಧ್ಯಕ್ಷ ಜಗದೀಶ್, ಪ್ರಧಾನ ಕಾರ್ಯದರ್ಶಿ ಧನಾಂಜಯಚಾರಿ, ಕಾರ್ಯದರ್ಶಿ ಮೋಹನ್, ಖಜಾಂಚಿ ಉದಯ್ ಸಿಂಗ್, ಸಂಚಾಲಕ ಅಬ್ದುಲ್‌ ಕಲೀಮ್, ರಾಮ, ಗಣೇಶ್, ರಘು, ಶ್ರೀನಿವಾಸ್, ರಘು, ತಾಲೂಕು ಅಧ್ಯಕ್ಷ ನರಸಿಂಹಮೂರ್ತಿ, ಉಪಾಧ್ಯಕ್ಷ ಸುಬ್ಬರೆಡ್ಡಿ, ಕಾರ್ಯದರ್ಶಿ ನಾಗರಾಜ್, ದೇವಕೃಷ್ಣಚಾರಿ, ಅಶೋಕ, ರಾಮಾಂಜಿ, ಬ್ರಹ್ಮಚಾರಿ, ರಾಜು, ಪ್ರಮುಖರಾದ ಶ್ರೀರಾಮರೆಡ್ಡಿ, ಡಿ.ಸಾದಪ್ಪ, ಬೈರೇಶ್, ನವೀನ್, ಪ್ರತಾಪ್‌ಸಿಂಗ್, ಜಗದೀಶ್, ಹರೀಶ್, ಮುಖೇಶ್ ಮತ್ತಿತರರು ಉಪಸ್ಥಿತರಿದ್ದರು.

Share this article