ಆಲಮಟ್ಟಿ 3ನೇ ಹಂತಕ್ಕೆ ವಿಳಂಬ ಬೇಡ: ಜಲತಜ್ಞ ರಾಜೇಂದ್ರ ಪೊದ್ದಾರ

KannadaprabhaNewsNetwork |  
Published : Sep 24, 2026, 03:00 AM IST
23 ಆಲಮಟ್ಟಿ :2 | Kannada Prabha

ಸಾರಾಂಶ

ಆಲಮಟ್ಟಿ ಜಲಾಶಯ ಎತ್ತರ ಹಾಗೂ ಯುಕೆಪಿ ಮೂರನೇ ಹಂತ ಅನುಷ್ಠಾನದ ಕುರಿತು ಕೃಷ್ಣಾ ಕೊಳ್ಳ ಜಲಸಂರಕ್ಷಣಾ ಹೋರಾಟ ಸಮಿತಿಯ ಸದಸ್ಯರು ಆಲಮಟ್ಟಿಯ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಸಭೆ ನಡೆಸಿದರು.

ಕನ್ನಡಪ್ರಭ ವಾರ್ತೆ ಆಲಮಟ್ಟಿ

ಆಲಮಟ್ಟಿ ಜಲಾಶಯದ ಮಟ್ಟವನ್ನು 519.60 ಮೀ. ನಿಂದ 524.256 ಮೀ. ಹೆಚ್ಚಿಸಿ, ಕೃಷ್ಣಾ ಜಲ ವಿವಾದ ನ್ಯಾಯಾಧಿಕರಣದ ತೀರ್ಪಿನಂತೆ ಆಲಮಟ್ಟಿ 3ನೇ ಹಂತದ ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಜಲತಜ್ಞ ರಾಜೇಂದ್ರ ಪೊದ್ದಾರ ಆಗ್ರಹಿಸಿದರು.

ಆಲಮಟ್ಟಿಯಲ್ಲಿ ಕೃಷ್ಣಾ ಕೊಳ್ಳ ಜಲ ಸಂರಕ್ಷಣಾ ಹೋರಾಟ ಸಮಿತಿ ವತಿಯಿಂದ ನಡೆದ ವಿಜಯಪುರ ಹಾಗೂ ಬಾಗಲಕೋಟೆ ಅವಳಿ ಜಿಲ್ಲೆಗಳ ಹೋರಾಟಗಾರರ ಸಭೆಯಲ್ಲಿ ಮಾತನಾಡಿದ ಅವರು, ಒಂದರ ಮೇಲೊಂದರಂತೆ ಆಯೋಗಗಳನ್ನು ರಚಿಸಲಾಗುತ್ತಿದೆ. ಕಾನೂನಾತ್ಮಕ ಅಡೆತಡೆಗಳ ನೆಪದಲ್ಲಿ ಆಲಮಟ್ಟಿ 3ನೇ ಹಂತದ ಯೋಜನೆ ವಿಳಂಬಗೊಳಿಸುವುದು ಸರಿಯಲ್ಲ. ಕೃಷ್ಣಾ ಕೊಳ್ಳದ ಜನಪ್ರತಿನಿಧಿಗಳು ಈ ವಿಚಾರದಲ್ಲಿ ಎಚ್ಚೆತ್ತುಕೊಂಡು ಕಾರ್ಯಪ್ರವೃತ್ತರಾಗಬೇಕು ಎಂದು ಹೇಳಿದರು.

ರೈತ ಮುಖಂಡರಾದ ಎಸ್.ವಿ. ಪಾಟೀಲ, ರೈತ ಮುಖಂಡ ಅರವಿಂದ ಕುಲಕರ್ಣಿ, ಕೃಷ್ಣಾ ಕೊಳ್ಳದ ಏಳು ಜಿಲ್ಲೆಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲಾಗುವುದು, ಕಾನೂನಾತ್ಮಕ ಹೋರಾಟದಲ್ಲಿಯೂ ಸಮಿತಿ ಭಾಗವಹಿಸಲಿದೆ ಎಂದರು.

ಕೇಂದ್ರ ಸರ್ಕಾರ, ಕೃಷ್ಣಾ ನ್ಯಾಯಾಧಿಕರಣದ ತೀರ್ಪಿನ ಅಧಿಸೂಚನೆ ಹೊರಡಿಸಬೇಕು, ಕೃಷ್ಣಾ ಕೊಳ್ಳದ ರೈತರ ನೀರಿನ ಹಕ್ಕನ್ನು ರಕ್ಷಿಸುವುದು, ಮುಂದಿನ ಹೋರಾಟದ ರೂಪುರೇಷೆ ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ಚರ್ಚಿಸಲಾಯಿತು.

ಬಿ. ಭಗವಾನ್ ರೆಡ್ಡಿ, ಭೋಗೇಶ ಸೋಲಾಪುರ, ಲಲಿತಾ ಬಿಜ್ಜರಗಿ, ಶ್ರೀನಾಥ್ ಪೂಜಾರಿ, ನೀಲಂಬಿಕಾ ಬಿರಾದಾರ, ಭರತಕುಮಾರ ಎಚ್.ಟಿ., ಎಂ.ಪಡಶೆಟ್ಟಿ, ಸುರೇಶ ಬಿಜಾಪುರ ಸೇರಿದಂತೆ ಹಲವು ರೈತ ಮುಖಂಡರು ಉಪಸ್ಥಿತರಿದ್ದರು. ಜಿಲ್ಲಾ ಸತ್ರ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಬಿ.ಸಿ. ಬಿರಾದಾರ ಸಭೆಯ ಅಧ್ಯಕ್ಷತೆ ವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉತ್ತರ ಕರ್ನಾಟಕ ನೀರಾವರಿಗೆ ₹50 ಸಾವಿರ ಕೋಟಿ ನೀಡಲು ಬೆಲ್ಲದ ಆಗ್ರಹ
ಉತ್ತರ ಕರ್ನಾಟಕ ನೀರಾವರಿಗೆ 50 ಸಾವಿರ ಕೋಟಿಗೆ ಅರವಿಂದ ಬೆಲ್ಲದ ಆಗ್ರಹ