ಕನ್ನಡಪ್ರಭ ವಾರ್ತೆ ಬೆಳಗಾವಿ
ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಾಳೇಕುಂದ್ರಿ ಕೆ.ಎಚ್ ಗ್ರಾಮದಲ್ಲಿ ನೂತನ ಧರ್ಮವೀರ ಛತ್ರಪತಿ ಶ್ರೀ ಸಂಭಾಜಿ ಮಹಾರಾಜರ ಮೂರ್ತಿಯನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು. ನಿಮ್ಮೆಲ್ಲರ ಆಶಿರ್ವಾದ ಇದ್ದುದ್ದರಿಂದ ನಾನು ಬದುಕಿಬಂದಿದ್ದೇನೆ. ನನಗೆ ಪುನರ್ಜನ್ಮ ಸಿಕ್ಕಿದೆ. ಹಾಗಾಗಿ ನಿಮ್ಮೆಲ್ಲರನ್ನೂ ನೋಡಬೇಕೆನ್ನುವ ಕಾರಣದಿಂದ ಇಂದು ಬಂದಿದ್ದೇನೆ. ನನಗೆ ಯಾವುದೇ ಭಾಷೆ, ಧರ್ಮದ ರಾಜಕಾರಣದಲ್ಲಿ ವಿಶ್ವಾಸವಿಲ್ಲ. ಕೇವಲ ಅಭಿವೃದ್ಧಿಯಲ್ಲಿ ನಂಬಿಕೆ ಇಟ್ಟವಳು ನಾನು ಎಂದು ಹೇಳಿದರು.
ಭೀಕರ ಅಪಘಾತ ನಡೆದರೂ ನಾನು ಬದುಕಿ ಬಂದಿದ್ದೇನೆ. ಇದಕ್ಕೆ ಕ್ಷೇತ್ರದ ಜನರ ಆಶಿರ್ವಾದವೇ ಕಾರಣ. ಅಪಘಾತದಿಂದ ಗಾಯಗೊಂಡು 40 ದಿನ ಹಾಸಿಗೆ ಹಿಡಿದಿದ್ದರೂ ಕ್ಷೇತ್ರದ ಕೆಲಸ ನಿಂತಿಲ್ಲ ಎಂದರು.ಇಂತಹ ಪುಣ್ಯ ಪುರುಷರ ಇತಿಹಾಸವನ್ನು ಮುಂದಿನ ಪೀಳಿಗೆಗೆ ತಿಳಿಸಬೇಕೆನ್ನುವ ಉದ್ದೇಶದಿಂದ ಸಂಭಾಜಿ ಮಹಾರಾಜರ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಹಾಗಾಗಿ ಮಹಾನ್ ಪುರುಷರ ಮೂರ್ತಿ ಪ್ರತಿಷ್ಠಾಪಿಸಲು ಯಾರಾದರೂ ಸಹಾಯ ಕೇಳಿದರೆ ಸಹಾಯ ಮಾಡಲು ನಮಗೆ ಹೆಮ್ಮೆ ಎನಿಸುತ್ತದೆ. ಈ ಭಾಗದ ವಿವಿಧ ಗ್ರಾಮಗಳಲ್ಲಿ ಒಂದು ಕೋಟಿ ರೂ. ವೆಚ್ಚದಲ್ಲಿ ಬಸವಣ್ಣನ ಮಂದಿರ, ₹2 ಕೋಟಿ ವೆಚ್ಚದಲ್ಲಿ ಕಲ್ಯಾಣ ಮಂಟಪ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.